janadhvani

Kannada Online News Paper

ಪುತ್ತೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಎಲಿಮಲೆ ಶಾಖೆಯ ವಾರ್ಷಿಕ ಕೌನ್ಸಿಲ್ ಜನವರಿ 19ರಂದು ಶಾಖಾಧ್ಯಕ್ಷರಾದ ಝಕರಿಯ ಸಅದಿಯವರ ಅಧ್ಯಕ್ಷತೆಯಲ್ಲಿ ಡೊಡ್ಡಂಗಡಿ ಹೌಸ್ ನಲ್ಲಿ ಜರಗಿತು. ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದ ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅದೇ ಸಂದರ್ಭದಲ್ಲಿ SYS ಬ್ರಾಂಚ್ ಸಮಿತಿಯನ್ನೂ ರಚಿಸಲಾಯಿತು.

ಅಧ್ಯಕ್ಷರಾಗಿ ಬಶೀರ್ ಟಿ.ವೈ , ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ಝುಹ್ರಿ, ಕೋಶಾಧಿಕಾರಿಯಾಗಿ ಮಹ್ಮೂದ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಅತ್ತಿಮಾರಡ್ಕ, ಕಾರ್ಯದರ್ಶಿಯಾಗಿ ಫಾರೂಕ್ ಟಿ.ವೈ, ಸದಸ್ಯರುಗಳಾಗಿ ಹಮೀದ್ ಟಿ.ವೈ, ಅಬ್ದುಲ್ ಖಾದರ್ ಪಾಣಾಜೆ, ಹೈದರ್ ಹಾಜಿ, ಸುಲೈಮಾನ್ ಮೆತ್ತಡ್ಕ, ಇಕ್ಬಾಲ್ ಟಿ.ವೈ, ಸಿರಾಜ್ ಅತ್ತಿಮಾರಡ್ಕ, ಕಲಂದರ್ ಮೆತ್ತಡ್ಕ, ಶರೀಫ್ ಟಿ.ವೈ ಇವರುಗಳನ್ನು SYS ಬ್ರಾಂಚ್ ಸಮಿತಿಗೆ ಆಯ್ಕೆ ಮಾಡಲಾಯಿತು.

ನೂತನ ಎಸ್ಸೆಸ್ಸೆಫ್ ಸಮಿತಿಯ ಅಧ್ಯಕ್ಷರಾಗಿ ಝಕರಿಯಾ ಸಅದಿ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಪಿಎ ಎಲಿಮಲೆ, ಕೋಶಾಧಿಕಾರಿಯಾಗಿ ನಿಯಾಝ್ ವೈ.ಎಚ್, ಉಪಾಧ್ಯಕ್ಷರುಗಳಾಗಿ ಸಾಬಿತ್ ಪಾಣಾಜೆ, ನವಾಝ್ ಮೆತ್ತಡ್ಕ, ಕಾರ್ಯದರ್ಶಿಗಳಾಗಿ ಶಾಕಿರ್ ಪಾಣಾಜೆ, ಸಿನಾನ್ ವೈ.ಎಂ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುನ್ಝಿರ್ ಹಾಗೂ ಸದಸ್ಯರುಗಳಾಗಿ ಜುನೈದ್ ಸಖಾಫಿ ಜೀರ್ಮುಕ್ಕಿ, ನಾಸಿರ್ ವೈ.ಎಚ್, ರವೂಫ್ ಕಲ್ಲುಪ್ಪಣೆ, ಫಾರಿಸಿ ಪಾಣಾಜೆ, ಮಿರ್ಶಾದ್ ವೈ.ಎಚ್, ಉಮ್ಮರ್ ಮುಸ್ಲಿಯಾರ್ ಜೀರ್ಮುಕ್ಕಿ, ಮಿದ್ಲಾಜ್, ಅಶ್ರಫ್ ಕಲ್ಲುಪ್ಪಣೆ, ಸಲಾಹುದ್ದೀನ್ ಪಿ.ಎ, ಶರ್ಫುದ್ದೀನ್, ನೌಶಾದ್ ತಲೂರು, ಫಾರೂಕ್ ಮೆತ್ತಡ್ಕ, ಸಿನಾನ್ ಬಿ.ಎಚ್ ಆಯ್ಕೆಯಾದರು.

error: Content is protected !!
%d bloggers like this: