janadhvani

Kannada Online News Paper

ಮನಾಮ: ಪವಿತ್ರ ಉಮ್ರಾ ಯಾತ್ರೆ ಮುಗಿಸಿ, ಜೀವನದ ಅತೀ ದೊಡ್ಡ ಅಭಿಲಾಷೆಯಾದ ಪುಣ್ಯ ಪ್ರವಾದಿ (ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ) ರವರ ರೌಳಾ ಷರೀಫ್ ಝಿಯಾರತ್ ನಡೆಸಿ ತಾಯ್ನಾಡಿಗೆ ಹಿಂತಿರುಗುವ ಮದ್ಯೆ ಆ ಮಹಾ ತಾಯಿ ಅಲ್ಲಾಹನ ಕರೆಗೆ ಓಗೊಟ್ಟರು. ಉಪ್ಪಿನಂಗಡಿ ಕೆಮ್ಮಾರದ ನಿವಾಸಿಯಾಗಿರುವ ಮರಿಯಮ್ಮ ಎಂಬವರು ಉಮ್ರಾ ಯಾತ್ರೆ ಮುಗಿಸಿ ಬಹ್ರೈನ್ ಮಾರ್ಗವಾಗಿ ಹಿಂತಿರುಗುವ ಮದ್ಯೆ ಬಹರೈನ್ ವಿಮಾನ ನಿಲ್ದಾಣದಲ್ಲಿ ದಿನಾಂಕ 13-01-2020 ರಂದು ಹೃಧಯಾಘಾತದಿಂದ ನಿಧನರಾಧರು.

ಏರ್ಪೋರ್ಟ್ ಅಧಿಕಾರಿಗಳು ಜನಾಝವನ್ನು ಕಿಂಗ್ ಹಮಾದ್ ಆಸ್ಪತ್ರೆಗೆ ಕಳುಹಿಸಿದರು. ವಿಷಯವನ್ನು ತಿಳಿದ ಕೆ.ಸಿ.ಎಫ್ ಬಹರೈನ್ ಅಧ್ಯಕ್ಷ ರಾದ ಜಮಾಲುದ್ದೀನ್ ವಿಟ್ಟಲ್ ನಿರ್ದೇಶನದಂತೆ ಸಾಂತ್ವನ ವಿಭಾಗದ ತಂಡವು ಕೂಡಲೇ ಆಸ್ಪತ್ರೆಗೆಭೇಟಿ ನೀಡಿ,ಮೃತರ ಕುಟುಂಬದವರನ್ನು ಸಾಂತ್ವನಗೈದು ಮುಂದಿನ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯಗೊಂಡ ತಂಡವು , ಜನಾಝವನ್ನು ಊರಿಗೆ ತಲುಪಿಸಲು ಭಾರತದ ರಾಯಭಾರಿ ಕಚೇರಿಯ, ಆಸ್ಪತ್ರೆಯ ಹಾಗೂ ಬಹರೈನ್ ಸರ್ಕಾರದಿಂದ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು 48 ಗಂಟೆಗಳ ಒಳಗಾಗಿ ಸಂಗ್ರಹಿಸುವಲ್ಲಿ ಸಫಲವಾಯಿತು.

ದಿನಾಂಕ 15-01-2020 ರಂದು ರಾತ್ರಿ ಬಹರೈನಿನಿಂದ ಹೊರಟು 16-01-2020 ರಂದು ಜನಾಝವು ಉಪ್ಪಿನಂಗಡಿ ಕೆಮ್ಮಾರದಲ್ಲಿ ಇರುವ ಅವರ ನಿವಾಸಕ್ಕೆ ತಲುಪಿತು.

error: Content is protected !!
%d bloggers like this: