janadhvani

Kannada Online News Paper

ಜ.15:ಉದ್ಯಾನ ನಗರಿಯಲ್ಲಿ ಬೃಹತ್ ಆಧ್ಯಾತ್ಮಿಕ, ಪ್ರಾರ್ಥನಾ ಸಂಗಮ

ಬೆಂಗಳೂರು: ನಮ್ಮ ದೇಶ, ಭಾರತದಲ್ಲಿ ಶಾಂತಿ-ನೆಮ್ಮದಿಯ ಸ್ಥಾಪನೆಗಾಗಿ ಹಾಗೂ ರಾಷ್ಟ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ, ಬೃಹತ್ ಆಧ್ಯಾತ್ಮಿಕ ಹಾಗೂ ಪ್ರಾರ್ಥನಾ ಸಂಗಮವನ್ನು ಇದೇ ಬರುವ ಜನವರಿ 15, 2020 ಬುಧವಾರದಂದು, ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಹಾಗೂ ಮರ್ಕಝ್ ಖೈಕಾ ಇನ್ಸ್ಟಟ್ಯೂಟ್ ಆಫ್ ಇಸ್ಲಾಮಿಕ್ ಸ್ಟಡೀಸ್(ಮರ್ಕಿನ್ಸ್) ಇದರ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ, ಹಜರತ್ ಖುದ್ದೂಸ್ ಸಾಹೆಬ್ ಈದ್‍ಗಾಹ್ ಸಮೀಪದ ಖಾದರಿಯಾ ಮಸೀದಿಯಲ್ಲಿ ನಡೆಯಲಿದೆ. ಸಂಜೆ 6:30ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಕುರಾನ್ ಖಾನಿ, ಒಂದು ಕೋಟಿ ಇಪ್ಪತ್ನಾಲ್ಕು ಲಕ್ಷ ಆಯತೆ ಕರೀಮಾ ಸಮರ್ಪಣೆ ಮತ್ತು ದುವಾ ಜಲ್ಸಾದಂತಹ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಆಧ್ಯಾತ್ಮಿಕ ನೇತಾರರಾದ, ಜನಾಬ್ ಡಾ. ಅಲ್ಹಾಜ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‍ಕಟ್ಟೆ ಅವರು ಪ್ರಾರ್ಥನಾ ಸಮ್ಮಿಲನಕ್ಕೆ ನಾಯಕತ್ವ ನೀಡುವ ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು, ಮರ್ಕಿನ್ಸ್ ಪ್ರಿನ್ಸಿಪಾಲ್ ಜಾಫರ್ ಅಹ್ಮದ್ ನೂರಾನಿ ವಹಿಸಲಿದ್ದು, ಎಸ್.ಎಮ್.ಎ ಕಾರ್ಯದರ್ಶಿ ಜಲೀಲ್ ಹಾಜಿ ಕಾರ್ಯ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಲಿದ್ದಾರೆ.

ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಅದ್ಯಕ್ಷರಾದ ಅಡ್ವಕೇಟ್ ಮುಶ್ತ್ತಾಕ್ ಅಹ್ಮದ್ ಸಾಹೆಬ್, ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಸದಸ್ಯರಾದ ಎಸ್‍ಎಸ್‍ಎ ಕಾದರ್ ಹಾಜಿ, ಕೈಗಾರಿಕೋದ್ಯಮಿ ಮತ್ತು ಟ್ರಸ್ಟ್ ಮಂಡಳಿ ಸದಸ್ಯರಾದ ಉಸ್ಮಾನ್ ಶರಿಫ್, ಕಂಬಲ್ಪೇಟ್ ದರ್ಗಾ ಮಸ್ಜಿದ್ ಇಮಾಮರಾದ ಮೌಲಾನಾ ಗುಲಾಮ್ ಮುಕ್ತಾರ್ ಖಾದಿರಿ, ಮೌಲಾನಾ ಹುಸೈನ್ ಮಿಸ್ಬಾಹಿ, ಮೌಲಾನಾ ಜುಲ್ಫಿಕರ್ ಹಜರತ್, ಸೇರಿದ ಹಲವು ಗಣ್ಯರು, ಆಧ್ಯಾತ್ಮಿಕ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com