ಜ.15: ಅಡ್ಯಾರ್ ಕಣ್ಣೂರು ಪ್ರತಿಭಟನಾ ಸಭೆ ಯಶಸ್ವಿಗೆ ಎಸ್.ವೈ.ಎಸ್ ಕರೆ

ಮಂಗಳೂರು: ಸಿಎಎ -ಎನ್.ಆರ್.ಸಿ ಯಂತಹ ಕರಾಳ ಕಾನೂನುಗಳ ಮೂಲಕ ದೇಶದ ಜನರ ಮಧ್ಯೆ ವಿಭಜನೆಯ ರಾಜಕೀಯ ಮಾಡಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ದ.ಕ.,ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಜನವರಿ 15 ಬುಧವಾರ ಅಪರಾಹ್ನ ಎರಡು ಗಂಟೆಗೆ ಅಡ್ಯಾರ್ ಶಹಾ ಮೈದಾನದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಮಾವೇಶವನ್ನು ಯಶಸ್ವಿ ಗೊಳಸಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಕರೆ ನೀಡಿದೆ.

ಎಸ್ ವೈ ಎಸ್ ನ‌ ಎಲ್ಲ ಘಟಕಗಳಿಂದ ವಿಶೇಷ ವಾಹನಗಳನ್ನು ವ್ಯವಸ್ಥೆ ಗೊಳಿಸಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡು ಸಮ್ಮೇಳನವನ್ನು ಐತಿಹಾಸಿಕ ಗೊಳಿಸಬೇಕು ಹಾಗೂ ಗರಿಷ್ಠ ಮಟ್ಟದಲ್ಲಿ ಇದನ್ನು ಪ್ರಚಾರಮಾಡಬೇಕೆಂದು ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!