ತಾಜುಲ್ ಉಲಮಾ 6 ನೇ ಉರೂಸ್ ಮುಬಾರಕ್- ನಾಳೆ ಸಮಾರೋಪ

ಪಯ್ಯನ್ನೂರು,ನ.30: ಎಟ್ಟಿಕುಳಂ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಕುಂಞಿ ಕ್ಕೋಯ ಅಲ್ ಬುಖಾರಿ ತಾಜುಲ್ ಉಲಮಾ ಉಳ್ಳಾಲ ತಂಙಳ್ 6ನೇ ಉರೂಸ್ ಸಮಾರಂಭವು ನವಂಬರ್ 29,30 ಮತ್ತು ಡಿಸೆಂಬರ್ 1 ರಂದು ಎಟ್ಟಿಕುಳಂ ಮಖಾಂ ನಲ್ಲಿ ಖುರ್ರತುಸ್ಸದಾತ್ ಫಝಲ್ ಕೋಯಮ್ಮ ತಂಙಳ್ ಉಳ್ಳಾಲ ಖಾಝಿವರ ಅಧ್ಯಕ್ಷತೆಯಲ್ಲಿ ಮೂರು ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ನಾಳೆ ಸಮಾರೋಪ ಗೊಳ್ಳಲಿದೆ.

ಕಳೆದ ರಾತ್ರಿ ಝೈನುಲ್ ಆಬಿದ್ ಬಾಫಖಿ ತಂಙಳ್ ಮಲೇಷ್ಯಾ ದುಆದೊಂದಿಗೆ ಚಾಲನೆ ಗೊಂಡಿದ್ದು ಉಡುಪಿ ಖಾಝಿ ಶೈಖುನಾ ಬೇಕಲ್ ಉಸ್ತಾದ್ ರವರ ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮುಖ್ಯಬಾಷಣ ಮಾಡಿದರು.ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಭಾಷಣ ಮಾಡಿದರು.ವೇದಿಕೆಯಲ್ಲಿ ಹಲವಾರು ಸಾದಾತುಗಳು ಉಲಮಾ ಉಮರಾರು ಉಪಸ್ಥಿತರಿದ್ದರು.

ಇಂದು ಬುರ್ದಾ ಮಜ್ಲಿಸ್ ನಡೆಯಲಿದ್ದು, ಡಾ.ಫಾರೂಖ್ ನಈಮಿ ಮುಖ್ಯ ಭಾಷಣ ನಡೆಸುವರು.

ಡಿಸೆಂಬರ್ 1 ರ ಆದಿತ್ಯವಾರ ಸಮಾರೋಪ ಸಮಾರಂಭ ನಡೆಯಲಿದ್ದು ಸಯ್ಯಿದ್ ಅಲೀ ಬಾಫಖಿ ತಂಙಳ್ ಕೊಯಿಲಾಂಡಿ ದುಆ ಮಾಡಲಿರುವರು.ಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉರೂಸ್ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ರಈಸುಲ್ ಉಲಮಾ ಸುಲೈಮಾನ್ ಉಸ್ತಾದ್ ನೆರವೇರಿಸಲಿರುವರು. ಶೈಖುನಾ ಅಲೀ ಕುಂಞಿ ಉಸ್ತಾದ್, ಸಯ್ಯಿದ್ ಕಡಲುಂಡಿ ತಂಙಳ್, ಬೇಕಲ್ ಉಸ್ತಾದ್, ಪೊನ್ಮಳ ಉಸ್ತಾದ್, ಮಾಣಿ ಉಸ್ತಾದ್, ತಾಯಿಕ್ಕೋಡು ಉಸ್ತಾದ್, ಪೆರೋಡು ಉಸ್ತಾದ್,ಹಖೀಂ ಅಝ್ಹರಿ, ಶಾಫಿ ಸಅದಿ, ಝೈನಿ ಖಾಮಿಲ್ ಪ್ರಭಾಷಣೆ ಮಾಡಲಿರುವರು ಹಲವಾರು ಸಾದಾತುಗಳು ರಾಜಕೀಯ ಮುಖಂಡರು ಉಲಮಾ ಉಮರಾರು ಕೆಸಿಎಫ್,ಐಸಿಎಫ್ ನೆತಾರರು ಭಾಗವಹಿಸಲಿರುವರು.

ವರದಿ: ಆರ್ ಕೆ ಮದನಿ ಅಮ್ಮೆಂಬಳ, ಉಳ್ಳಾಲ

Leave a Reply

Your email address will not be published. Required fields are marked *

error: Content is protected !!