janadhvani

Kannada Online News Paper

ಮಲ್‌ಜ‌ಅ್‌ನಲ್ಲಿ ದ‌ಅ್‌ವಾ ಕಾಲೇಜು ವಸತಿ ಕಟ್ಟಡಕ್ಕೆ ಕುಂಬೋಳ್ ತಂಙಳ್‌ರಿಂದ ಶಿಲಾನ್ಯಾಸ

ಉಜಿರೆ; ಸಾಮಾಜಿಕ ಧಾರ್ಮಿಕ ಜನಪರ‌ ಕಾಳಜಿಯ ಸರ್ವ ಧರ್ಮೀಯ ಸಹಾಯ ಕೇಂದ್ರವಾದ ಕಾಶಿಬೆಟ್ಟು ಮಲ್‌ಜ‌ಅ್ ಸಂಸ್ಥೆಯ ವತಿಯಿಂದ ದ‌ಅ‌್‌ವಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನೂತನವಾಗಿ ನಿರ್ಮಾಣವಾಗಲಿರುವ ವಸತಿ ಕಟ್ಟಡಕ್ಕೆ ಶಿಲಾನ್ಯಾಸವನ್ನು ಸಯ್ಯಿದ್ ಕುಂಬೋಳ್ ತಂಙಳ್ ನ.28 ರಂದು ನೆರವೇರಿಸಿದರು.

ಸಮಾರಂಭದಲ್ಲಿ ಏನಪೋಯ ವಿ.ವಿ ಕುಲಪತಿ ಏನಪೋಯ ಅಬ್ದುಲ್ಲಕುಂಞ, ಅಬ್ಬಾಸ್ ಹಾಜಿ ಉಳ್ಳಾಲ, ಶಾಕೀರ್ ಹಾಜಿ ಮಂಗಳೂರು, ಅಲ್ ಅನ್ಸಾರ್ ಪ್ರಧಾನ ಸಂಪಾದಕ ಇಬ್ರಾಹಿಂ ಬಾವಾ ಹಾಜಿ, ಮಮ್ತಾಝ್ ಅಲಿ ಮಂಗಳೂರು, ಮುಹಮ್ಮದ್ ರಫಿ, ಇಬ್ರಾಹಿಂ ಸಖಾಫಿ‌ ಕಬಕ, ಪಿ. ಬಿ ಬಶೀರ್ ಕಲ್ಲಡ್ಕ, ಲತೀಫ್ ಹಾಜಿ ಗುರುವಾಯನಕೆರೆ, ಪುತ್ತುಬಾವಾ ಹಾಜಿ ಸಾಂಬಾರ್ ತೋಟ, ಇಬ್ರಾಹಿಂ ಹಾಜಿ ಕುದ್ಲೂರು, ಯೂಸುಫ್ ಹಾಜಿ ಉಪ್ಪಳ್ಳಿ, ಸುಲೈಮಾನ್ ಕುಂಟಿನಿ, ಅಕೀಲ್ ಇಂಜಿನಿಯರ್, ಇಕ್ಬಾಲ್ ಮಾಚಾರ್,‌ಎನ್ .ಎಂ ಶರೀಫ್ ಸಖಾಫಿ, ಅಬ್ಬೋನು ಮದ್ದಡ್ಕ, ಅಶ್ರಫ್ ಆಲಿಕುಂಞಿ, ಸಂಸ್ಥೆಯ ಜನರಲ್‌ ಮೆನೇಜರ್ ಮೆಹಬೂಬುರ್ರಹ್ಮಾನ್ ಸಖಾಫಿ‌ ಕಿನ್ಯ,ಪಿಆರ್‌ಒ ಶರೀಫ್ ಬೆರ್ಕಳ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಮ್ ಜಮಾಅತ್ ಇದರ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಏನಪೋಯ ವಿ.ವಿ ಕುಲಪತಿ ಏನಪೋಯ ಅಬ್ದುಲ್ಲಕುಂಞಿ ಅವರನ್ನು ಸನ್ಮಾನಿಸಲಾಯಿತು.

ಮಲ್‌ಜ‌ಅ್ ಸಂಸ್ಥೆಯ ಶಿಲ್ಪಿ ಸಯ್ಯಿದ್ ಉಜಿರೆ ತಂಙಳ್ ಅಧ್ಯಕ್ಷತೆ ವಹಿಸಿದ್ದು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸರಳ‌ ಸಮಾರಂಭದ ಬಳಿಕ ಸಯ್ಯಿದ್ ಕುಂಬೋಳ್ ತಂಙಳ್ ಶಿಲಾನ್ಯಾಸ ನೆರವೇರಿಸಿದರು.

ವರದಿ:ಎಂ.ಎಂ.ಉಜಿರೆ

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!