ನಾಳೆ ನ.29ಕ್ಕೆ ಕೆ.ಸಿ.ಎಫ್ ಸೀಬ್ ಮತ್ತು ಬೌಷರ್ ಝೋನ್ ವತಿಯಿಂದ ಅರ್ರಿಬಾತ್-19

ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ಸೀಬ್ ಮತ್ತು ಬೌಷರ್ ಝೋನ್ ಗಳ ಜಂಟಿ ಆಶ್ರಯದಲ್ಲಿ ಅರ್ರಿಬಾತ್-19 ಎಂಬ ವಿಶೇಷ ಕಾರ್ಯಕ್ರಮವು ನಡೆಯಲಿದೆ.
ನವೆಂಬರ್ 29 ಶುಕ್ರವಾರ ಸಂಜೆ 7ಕ್ಕೆ, ಸೀಬ್ ವೇವ್ಸ್ ರೆಸ್ಟೋರೆಂಟ್ ಅಲ್ ಹೇಲ್ ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷರಾದ ಹಾಫಿಳ್ ಸುಫ್ಯಾನ್ ಸಖಾಫಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಇಹ್ಸಾನ್ ನ ಹೆಜ್ಜೆಗುರುತುಗಳು ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿಯ ನೇತಾರರು ಸೇರಿದಂತೆ ವಿವಿಧ ಝೋನ್ ನಾಯಕರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೆ.ಸಿ.ಎಫ್ ಸೀಬ್ ಝೋನ್ ನ ಮಾಧ್ಯಮ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!