ಮಾಣಿ : ತಾಜುಲ್ ಉಲಮಾ ಇಹ್ಯಾ ಉಲೂಮುದ್ದೀನ್ ಮದ್ರಸ ಸತ್ತಿಕಲ್ಲು ಇದರ ವತಿಯಿಂದ ಮೀಲಾದ್ ಫೆಸ್ಟ್ ಕಾರ್ಯಕ್ರಮ ಶನಿವಾರ ನಡೆಯಿತು.ಅಬ್ದುಲ್ ನಾಸಿರ್ ಕಾಮಿಲ್ ಸಖಾಫಿ ನೇತೃತ್ವದಲ್ಲಿ ಹಝ್ರತ್ ಗೈಬಾನ್ ಶಾ ಫೀರ್ ವಲಿಯುಲ್ಲಾಹ್ ಪೇರಮೊಗರು ದರ್ಗಾ ಶರೀಫ್ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಸಂಸ್ಥೆಯ ಗೌರವಾಧ್ಯಕ್ಷ ಸಾದಾತ್ ತಂಙಳ್ ಕರ್ವೇಲು ದುಆ ನೆರವೇರಿಸಿದರು,ಅಬ್ದುಲ್ ಹಮೀದ್ ಸತ್ತಿಕಲ್ಲು ಅಧ್ಯಕ್ಷತೆ ವಹಿಸಿದ್ದರು,ಅಬ್ದುಲ್ ಜಲೀಲ್ ಸಖಾಫಿ ಸ್ವಾಗತಿಸಿದರು,ಮುಹಮ್ಮದ್ ಶರೀಫ್ ಸಖಾಫಿ ಅಳಕೆಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆಶಿಕ್ ಸತ್ತಿಕಲ್ಲು,ನಿಯಾಝ್ ಸತ್ತಿಕಲ್ಲು,ಆಶ್’ಹರ್ ಪೇರಮೊಗರು ಎಂಬ ವಿದ್ಯಾರ್ಥಿಗಳಿಗಳನ್ನು ಸನ್ಮಾನಿಸಲಾಯಿತು.ಮಕ್ಕಳ ಪ್ರತಿಭಾ ಕಾರ್ಯಕ್ರಮದೊಂದಿಗೆ ಬುರ್ದಾ ಮಜ್ಲಿಸ್ ನಡೆಯಿತು, ದಾರುಲ್ ಮುಸ್ತಫಾ ನಚ್ಚಬೆಟ್ಟು ಇದರ ಆಸಿಫ್ ಮುಸ್ಲಿಯಾರ್ ಸತ್ತಿಕಲ್ಲು,ತಾಜುಲ್ ಉಲಮಾ ಫೌಂಡೇಶನ್ ಕರ್ವೇಲು ಇದರ ಅಧ್ಯಾಪಕರುಗಳು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು,ಅಝೀಝ್ ಸತ್ತಿಕಲ್ಲು ಹಾಗೂ ಸ್ವಾದಿಖ್ ಕಡಂಬು ಕಾರ್ಯಕ್ರಮ ನಿರೂಪಿಸಿದರು,ಅನ್ಸಾರ್ ಸತ್ತಿಕಲ್ಲು ಧನ್ಯವಾದಗೈದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ