ಪ್ರವಾದಿಯ ಪ್ರೀತಿ ವರ್ಣಾತೀತ- ಶಾರ್ಜಾದಲ್ಲಿ ಗೂಡಲ್ಲೂರು ಸಖಾಫಿ

ಶಾರ್ಜಾ: ಅಂತ್ಯದಿನದವರೆಗೆ ಈ ಭೂಮಿಯಲ್ಲಿ ಹುಟ್ಟಿ ಬಾಳುವ ಸರ್ವ ಮುಸ್ಲಿಂ ಉಮ್ಮತಿಗಳ ಮೇಲೆ ಪ್ರವಾದಿ (ಸ.ಅ) ಇಟ್ಟಿದ್ದ ಪ್ರೀತಿ, ವಾತ್ಸಲ್ಯವು ವಿವರಣೆಗೆ ನಿಲುಕದಾಗಿದ್ದು, ಸ್ವಹಾಬಿಗಳು ತಮ್ಮ ನಾಯಕನನ್ನು ನಡೆಸಿಕೊಂಡಿದ್ದ ರೀತಿ ಅನನ್ಯ ಎಂದು ಖ್ಯಾತ ವಾಗ್ಮಿ ಅಲ್ ಹಾಫಿಲ್ ಮಸ್ಊದ್ ಸಖಾಫಿ ಗೂಡಲ್ಲೂರು ಹೇಳಿದ್ದಾರೆ.

“ಹಬೀಬ್ (ಸ.ಅ) ನಮ್ಮ ಜತೆಗಿರಲಿ” ಎಂಬ ಘೋಷವಾಕ್ಯದೊಂದಿಗೆ ಕೆ.ಸಿ.ಎಫ್ ಶಾರ್ಜಾ ಝೋನ್ ವತಿಯಿಂದ ಇಲ್ಲಿನ ಅಲ್ ಖಾಸಿಮಿಯಾದ ರಯಾನ್ ಹೋಟೆಲ್‌ನಲ್ಲಿ ದಿನಾಂಕ 22-11-19 ರಂದು ಶುಕ್ರವಾರ ಸಂಜೆ ನಡೆದ ಮೀಲಾದ್ ಸಂಗಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರವಾದಿಯವರು ನಮ್ಮ ಮೇಲೆ ಹೊಂದಿದ್ದ ಪ್ರೀತಿಗೆ ಪ್ರತಿಯಾಗಿ ಪೂರ್ಣ ಪ್ರಮಾಣದಲ್ಲಿ ಕೃತಜ್ಞತೆ ಸಲ್ಲಿಸಲು ನಮ್ಮಿಂದ ಸಾಧ್ಯವಾಗದಿದ್ದರೂ ಅವರನ್ನು ನಮ್ಮ ಜೀವನದ ಪ್ರತಿಯೊಂದು ಗಳಿಗೆಯಲ್ಲೂ ನೆನಪಿಸಿಕೊಂಡು, ಜೀವನದ ಪ್ರತಿ ಹೊಸ್ತಿಲಿನಲ್ಲಿಯೂ ಮಾದರಿಯನ್ನಾಗಿಸುವ, ಮಹತ್ವರ ಜವಾಬ್ದಾರಿ ಪ್ರತಿಯೊಬ್ಬ ಮುಸ್ಲಿಮರ ಹೆಗಲ ಮೇಲಿದೆ ಎಂದು ಅವರು ಹೇಳಿದರು.

ಕೆ.ಸಿ.ಎಫ್ ಶಾರ್ಜಾ ಝೋನ್ ಅಧ್ಯಕ್ಷ ಬಹು| ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಉದ್ಘಾಟಿಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗದ ಅಧ್ಯಕ್ಷ ಡಾ! ಎಮ್ಮೆಸ್ಸೆಂ ಅಬ್ದುಲ್‌ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ, ಶಿಕ್ಷಣ ವಿಭಾಗದ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಪ್ರಧಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ, ಹಣಕಾಸು ವಿಭಾಗದ ನಿಯಂತ್ರಕ ಹಮೀದ್ ಸಅದಿ ಈಶ್ವರಮಂಗಳ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ರಹೀಂ ಸಅದಿ ಪಾಣೆಮಂಗಳೂರು ಸೇರಿದಂತೆ ಹಲವು ನಾಯಕರು ಮಾತನಾಡಿ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ಕೆ.ಸಿ.ಎಫ್ ಅಂತರಾಷ್ಟ್ರೀಯ ‌ಸಮಿತಿಯ ಅಧ್ಯಕ್ಷ ಡಾ.ಶೇಖ್ ಬಾವ ಹಾಜಿ ಮಂಗಳೂರುರವರು ಉಪಸ್ಥಿತರಿದ್ದರು.

ಕೆ‌.ಸಿ.ಎಫ್ ಯು.ಎ.ಈ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷ ಇಬ್ರಾಹಿಂ ಸಖಾಫಿ ದುಆ ನಡೆಸಿದರು.ಝೋನ್ ವತಿಯಿಂದ ಮೌಲೂದ್ ಪಾರಾಯಣ ಹಾಗೂ ಬುರ್ದಾ ಆಲಾಪಣೆ ನಡೆಯಿತು. ನಿಝಾಮುದ್ಧೀನ್ ಸಖಾಫಿ ಕಿರಾಅತ್ ಪಡಿಸಿದರು. ಕೆ.ಸಿ.ಎಫ್ ಮೀಲಾದ್ ಸಮಿತಿಯ ಅಧ್ಯಕ್ಷ ಯು.ಟಿ ನೌಶದ್ ಸ್ವಾಗತ ಭಾಷಣ ಮಾಡಿದರು. ಕೆ‌.ಸಿ.ಎಫ್ ಶಾರ್ಜ ಝೋನ್ ವತಿಯಿಂದ ನಡೆದ ದಫ್ ಪ್ರದರ್ಶನ ಸಭಿಕರ ಗಮನ ಸೆಳೆಯಿತು.

ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಬಜ್ಪೆ, ಸಂಚಾಲಕ ನಝೀರ್ ಕಾಶಿಪಟ್ಣ, ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು, ಸಂಘಟನೆ ಕಾರ್ಯದರ್ಶಿ ಹುಸೈನ್ ಎಮ್ಮೆಮಾಡು, ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರಾ, ಸಂಘಟನೆ ವಿಭಾಗದ ಅಧ್ಯಕ್ಷ ಇಕ್ಬಾಲ್‌ ಕಾಜೂರು, ಕೋಶಾಧಿಕಾರಿ ಇಬ್ರಾಹಿಂ ಬ್ರೈಟ್, ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಕರೀಂ ಮುಸ್ಲಿಯಾರ್, ಕಾರ್ಯದರ್ಶಿ ಹಕೀಂ ತುರ್ಕಳಿಕೆ, ಇಹ್ಸಾನ್ ಕಾರ್ಯದರ್ಶಿ ಅಬ್ದುಲ್ ಖಾದರ್ ಸಅದಿ ಸುಳ್ಯ , ಸಾಂತ್ವನ ವಿಭಾಗದ ಅಧ್ಯಕ್ಷ ಝೈನುದ್ದೀನ್ ಹಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಹುಸೈನ್ ಇನೋಳಿ ವಂದಿಸಿದರು.ಸಿರಾಜ್ ಅರಿಯಡ್ಕ ಮತ್ತು ನಾಝಿಮ್ ಮುಈನಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!