janadhvani

Kannada Online News Paper

ಕೆಸಿಎಫ್ ಖತ್ತರ್ ಮೀಲಾದ್ ಕಾನ್ಫರೆನ್ಸ್ ಹಾಗೂ ಪ್ರತಿಭೋತ್ಸವ

ಖತ್ತರ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್. ಅಝೀಝಿಯ ಝೋನ್ ಇದರ ವತಿಯಿಂದ ಪವಿತ್ರ ರಬೀವುಲ್ ಮಾಸದ ಪ್ರಯುಕ್ತ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ನಮ್ಮ ಜತೆಗಿರಲಿ ಮೀಲಾದ್ ಅಭಿಯಾನದ ಅಂಗವಾಗಿ ಮೀಲಾದ್ ಕಾನ್ಫರೆನ್ಸ್ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮವು ದಿನಾಂಕ 22-11-2019ರಂದು , ಅಝೀಝಿಯ ಝೋನ್ ಅಧ್ಯಕ್ಷರಾದ ನಸ್ರತುಲ್ಲಾ ಉಡುಪಿಯವರ ಅಧ್ಯಕ್ಷತೆಯಲ್ಲಿ ದೋಹಾದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮೀಲಾದ್ ಆಚರಣೆಯ ಮಹತ್ವ ಹಾಗೂ ನೆಬಿ (ಸ.ಅ) ರವರ ಜೀವನದ ಕುರಿತು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಮೀಲಾದ್ ಕಾರ್ಯಕ್ರಮದ ನೇತೃತ್ವವನ್ನು ಕೆ.ಸಿ.ಎಫ್.ಖತ್ತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ವಹಿಸಿದ್ದರು.

ಕಾರ್ಯಕ್ರಮದ ಭಾಗವಾಗಿ, ಕೆ.ಸಿ.ಎಫ್.ಕಾರ್ಯಕರ್ತರಿಗಾಗಿ ವಿವಿಧ ರೀತಿಯಲ್ಲಿ ಇಸ್ಲಾಮಿಕ್ ಕಲಾಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕೆ.ಸಿ.ಎಫ್ ಕಾರ್ಯಕರ್ತರು ಪ್ರತಿಭೋತ್ಸವದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುವುದರ ಮೂಲಕ ಸ್ಪರ್ಧೆಗೆ ಬಹಳಷ್ಟು ಮೆರುಗು ನೀಡಿದರು. ಸ್ಪರ್ಧೆಯ ತೀರ್ಪುಗಾರರಾಗಿ ಇಸ್ಹಾಕ್ ನಿಝಾಮಿ, ನಸ್ರತುಲ್ಲಾ ಉಡುಪಿ, ಹಾಫಿಳ್ ಉಮರುಲ್ ಫಾರೂಕ್ ಸಖಾಫಿ, ಯೂಸುಫ್ ಸಖಾಫಿ ಅಯ್ಯಂಗೇರಿ, ಖಾಲಿದ್ ಹಿಮಮಿ, ಫಾರೂಕ್ ಕೃಷ್ಣಾಪುರ ಹಾಗೂ ಹನೀಫ್ ಪಾತೂರು ಕಾರ್ಯನಿರ್ವಹಿಸಿದ್ದರು.

ವೇದಿಕೆಯಲ್ಲಿ ಕೆ.ಸಿ.ಎಫ್.ಖತ್ತರ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಚೇರ್ಮಾನ್ ಮುನೀರ್ ಮಾಗುಂಡಿ, ಶೆರೀಫ್ ಸಖಾಫಿ ಮುಡಿಪು ಉಪಸ್ಥಿತಿಯಿದ್ದರು.

ಇದೇ ವೇದಿಕೆಯಲ್ಲಿ ವಿವಿಧ ಝೋನ್’ಗಳಿಂದ ವಿಜೇತರಾದ ಪ್ರತಿಭೆಗಳಿಗಾಗಿ, ದಿನಾಂಕ 29-11-2019 ರಂದು ನಡೆಯುವ ಕೆ.ಸಿ.ಎಫ್.ಖತ್ತರ್ ರಾಷ್ಟ್ರೀಯ ಸಮಿತಿಯ ಮೀಲಾದ್ ಕಾನ್ಫರೆನ್ಸ್ ಅಂಗವಾಗಿ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮ ಕೂಡ ನಡೆಯಿತು. ಕನ್ನಡ, ಮಳಯಾಳಂ,ಬ್ಯಾರಿ, ಉರ್ದು, ಇಂಗ್ಲಿಷ್ ಭಾಷೆಯಲ್ಲಿ ವಿವಿಧ ಕಲಾಸ್ಪರ್ಧೆಗಳು ಹಾಗೂ ಸಭಿಕರನ್ನು ಮನರಂಜಿಸುವ ರೀತಿಯಲ್ಲಿ ಸುಸಜ್ಜಿತ ಬುರ್ದಾ ಹಾಡು ಸ್ಪರ್ಧೆಗಳು ಮೂಡಿಬಂತು.

ಝೋನ್ ಪ್ರಧಾನ ಕಾರ್ಯದರ್ಶಿ ರಿಶಾದ್ ಮದುವಣ ಸ್ವಾಗತಿಸಿದರೆ, ಮಿರ್ಶಾದ್ ಕನ್ಯಾನ ವಂದಿಸಿದರು. ಝಕರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.

*ಕೆ.ಸಿ.ಎಫ್. ಅಝೀಝಿಯಾ ಝೋನ್*

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!