ದಮ್ಮಾಮ್: ದಾರುಲ್ ಅಶ್ ಅರಿಯ ಸುರಿಬೈಲು ಇದರ ದಮ್ಮಾಮ್ ಸಮಿತಿಯ ವತಿಯಿಂದ ಪುಣ್ಯ ಮಾಸ ರಬೀವುಲ್ ಅವ್ವಲ್ ಪ್ರಯುಕ್ತ ಮೀಲಾದ್ ಸಂಗಮ ಕೆಸಿಎಫ್ ಹಾಲ್ ದಮ್ಮಾಮ್ ನಲ್ಲಿ ನಡೆಯಿತು.
ಅನಸ್ ಸಅದಿ ಅವರ ದುವಾದೊಂದಿಗೆ ಆರಂಬವಾದ ಕಾರ್ಯಕ್ರಮದ ನೇತೃತ್ವವನ್ನು ಮನ್ಶರ್ ಸಖಾಫತಿ ಸುನ್ನಿಯ ಇದರ ಆರ್ಗನೈಸರ್ ಬಹು ಅಬ್ದುಲ್ ಮಜೀದ್ ಬಾ ಅಸನಿ ಯವರು ವಹಿಸಿದ್ದರು. ಅಶ್ ಅರಿಯ ದಮ್ಮಾಮ್ ಸಮಿತಿ ಅಧ್ಯಕ್ಷರಾದ ಉಮರುಲ್ ಫಾರೂಖ್ ಕಾಟಿಪಳ್ಳ ಮತ್ತು ಬಳಗದಿಂದ ಬುರುದ್ದಾಹ್ ಆಲಾಪನೆ ನಡೆಯಿತು.
ತಾಜುಸನ್ನ ಎಜುಕೇಶನ್ ಫೌಂಡೇಶನ್ ಭಟ್ಕಳ ಇದರ ಆರ್ಗನೈಸರ್ ಆದ ಬಹು ಅನಸ್ ಸಅದಿ ಬೆದ್ರೋಡಿ ಮುಖ್ಯ ಪ್ರಭಾಷಣ ಮಾಡುತ್ತಾ ಅಶ್ ಅರಿಯ ಸ್ಥಾಪನೆಯು ಸಮಾಜಕ್ಕೆ ಕೊಡುವ ಕೊಡುಗೆಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಸಅದಿಯ ದಮ್ಮಾಮ್ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ,
ಅಶ್ ಅರಿಯಾ ಕಾರ್ಯಾಧ್ಯಕ್ಷರಾದ ಹಮೀದ್ ಕೊಳ್ನಾಡ್, ರಫೀಕ್ ಮಿಸ್ಬಾಹಿ, ಅಶ್ರಫ್ ಮುಸ್ಲಿಯಾರ್ ಕಕ್ಕಿಂಜೆ, ಸಮದ್ ಹೊಸಂಗಡಿ,ಜಮಾಲ್ ಮುಸ್ಲಿಯಾರ್,ಜಾಬಿರ್ ಬಾಯಿ ಚಿಕ್ಕಮಂಗಳೂರು,ಹನೀಸ್ ಬಾಳಿಯೂರು ಉಪಸ್ಥಿತರಿದ್ದರು.
ರಿಪೋರ್ಟ್_ ಇಕ್ಬಾಲ್ ಕೈರಂಗಳ