“ಆಝಾದಿ ರ‌್ಯಾಲಿ” -SSF ಕೊಡಗು ಜಿಲ್ಲಾ ಸಮಿತಿ ಪ್ರಕಟಣೆ

ನಾಪೋಕ್ಲು:ಕೊಡಗು ಜಿಲ್ಲೆಯಲ್ಲಿ ಪ್ರಳಯದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ನಮ್ಮ ಕಾರ್ಯಕರ್ತರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದಲೇ 15-8-2019ರಂದು ಜಿಲ್ಲಾ ಸಮಿತಿಯು ನಾಪೋಕ್ಲುವಿನಲ್ಲಿ ನಡೆಸಲು ಉದ್ದೇಶಿಸಿದ್ದ “ಆಝಾದಿ ರ‌್ಯಾಲಿ” ಯನ್ನು ಕೈ ಬಿಡುವುದು ಅನಿವಾರ್ಯವಾಗಿದೆ.

ಕಾರ್ಯಕ್ರಮ ತೀರ್ಮಾನಿಸಿದ ದಿನದಿಂದ ಈವರೆಗೂ ತನು ಮನ ಧನಗಳಿಂದ ಸಹಕರಿಸಿದ ಹಲವರಿದ್ದಾರೆ ಅದರಲ್ಲೂ ಪ್ರತ್ಯೇಕವಾಗಿ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರದೊಂದಿಗೆ ಅನುಮತಿ ನೀಡಿ ಸಹಕರಿಸಿದ್ದ ಪೋಲೀಸ್ ಇಲಾಖೆಗೂ ಎಲ್ಲಾ ಹಿತೈಶಿಗಳಿಗೂ ಮನತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

ಮುಂದಿನ ವರ್ಷದಿಂದ ಇನ್ಶಾಅಲ್ಲಾಹ್ ವಿಜೃಂಭಣೆಯಿಂದ “ಅಝಾದಿ ರ‌್ಯಾಲಿ”ಯನ್ನು ಮುಂದುವರಿಸೋಣ.

ಸಂತ್ರಸ್ತರಿಗೆ ನೆರವಾಗುವ ಕಾರ್ಯಗಳನ್ನು ಮುಂದುವರಿಸುವುದು ಹಾಗೂ ಅವರು ಮನೆಗಳಿಗೆ ಹಿಂದಿರುಗುವಾಗ ಮನೆ-ಪರಿಸರ ಶುಚೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಹಕಾರಿಗಳಾಗಬೇಕೆಂದು ಈ ಮೂಲಕ ವಿನಂತಿ.

SSF ಕೊಡಗು ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *

error: Content is protected !!