ಮಂಜನಾಡಿ: ಅಲ್ ಮದೀನ ಯತೀಂ ಖಾನ ಮಂಜನಾಡಿ ರಿಯಾದ್ ಕೇಂದೀಕೃತ ಮಲಾಝ್ ಘಟಕದ ಅಧೀನದಲ್ಲಿ ವರ್ಷಪ್ರತಿ ನಡೆದುಕೊಂಡು ಬರುವ ಹಾಗೆ ಈ ವರ್ಷವೂ ಯತೀಂ ಹಾಗೂ ಮಿಸ್ಕೀನ್ ಮಕ್ಕಳಿಗೆ ಈದ್ ವಸ್ತ್ರವಿತರಣೆ ಕಾರ್ಯಕ್ರಮವು ತಾ: 29-5-2019 ರಂದು ಅಲ್ ಮದೀನ ಕ್ಯಾಂಪಸ್ ನ ಜೀಲಾನಿ ಮಸೀದಿಯಲ್ಲಿ ನಡೆಯಿತು.
ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿ ದುಆ ಆಶೀರ್ವಾದಗೈದು, “ಮಲಾಝ್ ಘಟಕವು ಅಲ್ ಮದೀನದ ಪ್ರಧಾನ ಘಟಕಗಳಲ್ಲಿ ಒಂದಾಗಿದ್ದು ಅಲ್ ಮದೀನ ಸಂಸ್ಥೆಗೆ ಇದರ ಕೊಡುಗೆ ಅಪಾರವಾಗಿದ್ದು, ಅಲ್ ಮದೀನ ಕ್ಯಾಂಪಸ್ಸಿನಲ್ಲಿ ತೆಂಗಿನ ತೋಟ, ಬೃಹತ್ತಾದ ನೀರಿನ ಟ್ಯಾಂಕ್, ಅನಾಥ ನಿರ್ಗರಿಕರಿಗೆ ಶಾಲಾ ಪಠ್ಯಪುಸ್ತಕ- ಈದ್ ವಸ್ತ್ರವಿತರಣೆ, ದೇರಳಕಟ್ಟೆ ನಗರ ಮಧ್ಯೆ ತಲೆಯಿತ್ತಿರುವ “ಮಲಾಝ್ ಟವರ್” ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ “ಅಲ್ ಮದೀನ ಮಲಾಝ್ ಕಾಂಪ್ಲೆಕ್ಸ್” ನೂತನ ಕಟ್ಟಡ ಹೀಗೆ ಹಲವಾರು ಯೋಜನೆಗಳನ್ನು ಪೂರ್ತೀಕರಿಸಿ ಉತ್ತಮವಾಗಿ ಕಾರ್ಯಪ್ರವೃತ್ತವಾಗಿದೆ ಇದರ ಹಿಂದೆ ನಿಸ್ವಾರ್ಥ ನಾಯಕರ ಹಾಗೂ ಸದಸ್ಯರ ಸೇವನೆ ಶ್ಲಾಘನೀಯ ಹಾಗೂ ಮಾದರಿಯೋಗ್ಯವಾಗಿದೆ ಎಂದರು.
ಮಲಾಝ್ ಘಟಕದ ಗೌರವಾಧ್ಯಕ್ಷ ಫಾರೂಕ್ ಅಬ್ಬಾಸ್ ಉಳ್ಳಾಲ, ಸಂಯೋಜಕರು ಮುಹಿಯುದ್ದೀನ್ ಮೊಂಟೆಪದವು, ಸದಸ್ಯರಾದ ಆರಿಫ್ ಡಿ.ಎಂ ಉಳ್ಳಾಲ, ಎಸ್ ಫಾರೂಕ್ ಉಳ್ಳಾಲ, ಎನ್ ಎಸ್ ಉಮರ್ ಹಾಜಿ ಸುಟ್ಟ, ಪುತ್ತು ಹಾಜಿ ಮೋರ್ಲ, ಹೈದರ್ ಸಖಾಫಿ, ಇಕ್ಬಾಲ್ ಮರ್ಝೂಖಿ ಮುಂತಾದವರು ಉಪಸ್ಥಿತರಿದ್ದರು, ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು, ಅಬ್ದುಲ್ ರಝಾಕ್ ಮಾಸ್ಟರ್ ಕೊನೆಯಲ್ಲಿ ಧನ್ಯವಾದಗೈದರು.