ಮೈದಾನಿಮೂಲೆ ಸುನ್ನೀ ಸೆಂಟರ್ ಉದ್ಘಾಟನೆ ಹಾಗೂ ಬೃಹತ್ ಇಫ್ತಾರ್ ಸಂಗಮ

ಕುಂಬ್ರ : ಎಸ್ ವೈ ಎಸ್ ಮೈದಾನಿಮೂಲೆ ಹಾಗೂ ಎಸ್ಸೆಸ್ಸಫ್ ಮೈದಾನಿಮೂಲೆ ಶಾಖೆ ಇದರ ವತಿಯಿಂದ ಸುನ್ನೀ ಸೆಂಟರ್ ಉದ್ಘಾಟನೆ ಹಾಗೂ ಬೃಹತ್ ಇಫ್ತಾರ್ ಸಂಗಮ ದಿನಾಂಕ 1.6.2019 ರಂದು ನಡೆಯಿತು.

ಅಸರ್ ನಮಾಝಿನ ಬಳಿಕ ನಡೆದ ಸುನ್ನೀ ಸೆಂಟರ್ ಉದ್ಘಾಟನೆಯು ಅಸ್ಸಯ್ಯಿದ್ ಮುಝಮ್ಮಿಲ್ ತಂಙಳ್ ರವರು ಉದ್ಘಾಟನೆಗೈದರು. ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷ ಕೈಕಾರ ಯೂಸುಫ್ ಹಾಜಿ ಅಧ್ಯಕ್ಷತೆ ವಹಿಸಿದರು. ಪ್ರಾಸ್ತಾವಿಕ ಸಂದೇಶವನ್ನು ನೀಡಿದ ಮೈದಾನಿಮೂಲೆ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ ಸಂಘಟನೆಗಳು ಸಮಾಜದ ಬೆಳಕಾಗಿ ಕಾರ್ಯಾಚರಿಸಿದಾಗ ಆ ಊರು ಬೆಳಗುವುದರಲ್ಲಿ ಸಂಶಯವಿಲ್ಲ. ಎಸ್ಸೆಸ್ಸಫ್ ಸಂಘಟನೆಯು ಉಲಮಾಗಳು ನೇತೃತ್ವ ನೀಡುತ್ತಿರುವ ಸಂಘಟನೆಯಾಗಿದೆ. ಯಾವುದೇ ಸಂಘಟನೆಗಳನ್ನೋ, ವ್ಯಕ್ತಿಗಳನ್ನೋ, ಉಸ್ತಾದರನ್ನೋ ಸಂಘಟನೆಯ ಹೆಸರೇಳಿಕೊಂಡು ಅಪಹಾಸ್ಯ ಮಾಡುವಂತದ್ದೋ, ನಿಂದಿಸುವಂತದ್ದೋ ಎಸ್ಸೆಸ್ಸಫ್ ಕಾರ್ಯಕರ್ತನಿಗೆ ಸಾಧ್ಯವಿಲ್ಲ, ಸಂಘಟನೆ ಅದು ಕಲಿಸಿಕೊಡುವುದೂ ಇಲ್ಲ. ಇಹ – ಪರ ಜೀವನಗಳಲ್ಲಿ ಯಶಸ್ಸು ಸಾಧಿಸಬೇಕಾದಲ್ಲಿ ಎಸ್ಸೆಸ್ಸಫ್ ನೊಂದಿಗೆ ಕೈಜೋಡಿಸಿ ಕಾರ್ಯಾಚರಿಸಿರಿ ಎಂದು ಉಪದೇಶಿಸಿದರು.

ಚಿಂತಕ, ಲೇಖಕ ಸಿ.ಎಂ ಹನೀಫ್ ಬೆಳ್ಳಾರೆ, ಪುತ್ತೂರು ವರ್ತಕ ಸಂಘದ ಉಪಾಧ್ಯಕ್ಷ ಯೂಸುಫ್ ಮೈದಾನಿಮೂಲೆ, ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಜಮಾಅತ್ ಗೌರವಾಧ್ಯಕ್ಷ ಅಸ್ಸಯ್ಯಿದ್ ಮುಝಮ್ಮಿಲ್ ತಂಙಳ್ ಕಾಸರಗೋಡು, ಜಮಾಅತ್ ಅಧ್ಯಕ್ಷ ಕೈಕಾರ ಯೂಸುಫ್ ಹಾಜಿ, ರೋಯಲ್ ಗ್ರೂಪ್ ನ ಅಶ್ರಫ್ ಮುಳಿಯಡ್ಕ ರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಅಧ್ಯಕ್ಷ ಝುಬೈರ್ ಗಟ್ಟಮನೆ, ಜಮಾಅತ್ ಪ್ರಧಾನ ಕಾರ್ಯದರ್ಶಿ ರಫೀಕ್ ಅಲ್ – ರಾಯ, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ , ಜಮಾಅತ್ ಕೋಶಾಧಿಕಾರಿ ಇಬ್ರಾಹಿಂ ನೀರ್ಪಾಡಿ, ಟೀಂ ಇಸಾಬ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ದಖೀರತುಲ್ ಉಖ್ರಾ ಯಂಗ್ ಮೆನ್ಸ್ ಅಧ್ಯಕ್ಷ ಮಹಮ್ಮದ್ ಉಜ್ರೋಡಿ, ಕುಟ್ಟಿನೋಪಿನಡ್ಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹಂಝ ಉಜ್ರೋಡಿ, ಜಮಾಅತ್ ಸದಸ್ಯರಾದ ಕೆ.ಪಿ ಇಬ್ರಾಹಿಂ ಉಜ್ರೋಡಿ, ಇಬ್ರಾಹಿಂ ಬಾಳಯ, ರೋಯಲ್ ಗ್ರೂಪ್ ನ ಅಶ್ರಫ್ ಮುಳಿಯಡ್ಕ, ಎಸ್ಸೆಸ್ಸಫ್ ಅಧ್ಯಕ್ಷ ಜಮಾಲುದ್ದೀನ್ ಎನ್.ಕೆ ಮುಂತಾದವರು ಉಪಸ್ಥಿತರಿದ್ದರು.

ನಂತರ ನಡೆದ ಇಫ್ತಾರ್ ಸಂಗಮದಲ್ಲಿ ಊರ ಹಾಗೂ ಪರವೂರ ನೂರಾರು‌ ಮಂದಿ ಭಾಗವಹಿಸಿದ್ದರು.
ಎಸ್ ವೈ ಎಸ್ ಹಾಗೂ ಎಸ್ಸೆಸ್ಸಫ್ ಕಾರ್ಯಕರ್ತರು ಸಹಕರಿಸಿದರು. ಎಸ್ ವೈ ಎಸ್ ಅಧ್ಯಕ್ಷ ಮಹಮ್ಮದ್ ಕೆ.ಎ ಸ್ವಾಗತಿಸಿ, ಹಾರಿಸ್ ಅಡ್ಕ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!