ಮೌಲಾನಾ ಶಮ್ಸುಲ್ ಹಖ್ ಖಾದ್ರಿಯವರ ಅಂತ್ಯಕ್ರಿಯೆ ನಾಳೆ: ಶಾಫಿ ಸ‌ಅದಿ

ಕರ್ನಾಟಕ‌ ಮುಸ್ಲಿಂ ಜಮಾ‌ಅತ್ ಅಧ್ಯಕ್ಷರು, ಪ್ರಮುಖ ಅಂತಾರಾಷ್ಟ್ರೀಯ ಧಾರ್ಮಿಕ‌ ವಿದ್ವಾಂಸ ಮೌಲಾನಾ ಮುಫ್ತಿ ಶಮ್ಸುಲ್ ಹಖ್ ಖಾದ್ರಿ ಹಸನಿ ವಲ್ ಹುಸೈನಿ(87) ಇಂದು(ಮೇ.29) ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕಾಟನ್ ಪೇಟೆಯ ಲಕ್ಕಡಿ ಶಾ ದರ್ಗಾ ವಠಾರದ ತನ್ನ ವಸತಿಯಲ್ಲಿ ನಿಧನರಾದರು.

ದೇಶವಿದೇಶಗಳಲ್ಲಿ ಅಪಾರ ಶಿಷ್ಯರನ್ನು ಹೊಂದಿರುವ ಅವರು ಖಾದಿರಿಯ್ಯಾ ತ್ವರೀಖತ್ ನ ಪ್ರಮುಖ ಶೈಖ್ ಗಳಲ್ಲೊಬ್ಬರು. ಹದೀಸ್ ಮತ್ತು ಹನಫೀ ಫಿಖ್ಹ್‌ಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಮೌಲಾನರವರು ಕರ್ನಾಟಕದ ವಿವಿಧ ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಮುಸ್ಲಿಂ ಜಮಾ‌ಅತ್ ನ ರಾಜ್ಯಾಧ್ಯಕ್ಷರಾಗಿ; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಸ್ಲಿಂ ಜಮಾಅತ್ ನ ಪ್ರಚಾರ ಮಾಡುವ ಕಾರ್ಯದಲ್ಲಿ ಆಸಕ್ತಿ ಹೊಂದಿದ್ದರು.

ಯೂರೋಪ್ ಆಫ್ರೀಕಾಗಳಿಂದ ಆಗಮಿಸುವ ಪ್ರತಿನಿಧಿಗಳೊಂದಿಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಿದ್ದ ಮೌಲಾನಾರಿಗೆ; ಸಿಂಗಾಪುರ ಮಲೇಶ್ಯಾಗಳಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ.
ವಿದೇಶಗಳಿಂದ ಮೌಲಾನರ ಅಭಿಮಾನಿಗಳು ಅಂತಿಮದರ್ಶನಕ್ಕೆ ಆಗಮಿಸುವವರಿರುವುದರಿಂದ ನಾಳೆ ಳುಹ್‌ರ್ ನಮಾಝಿನ ನಂತರ ಅವರ ಪೀರ್ ಬೌಂಡರಿಯಲ್ಲಿ ಜನಾಝ ನಮಾಝ್ ನಡೆಯಲಿದೆ.

ಬಳಿಕ ಚಾಮರಾಜಪೇಟೆಯ ರೋಯನ್ ಸರ್ಕಲ್ ನಲ್ಲಿರುವ ಮೌಲಾನರ ತಾತ ವಲಿಯುಲ್ಲಾಹಿ ಹಝ್ರತ್ ಮೀರ್ ಸುವಾದ್(ರ) ದರ್ಗಾದ ಪಕ್ಕದಲ್ಲಿ ದಫನ್ ನಡೆಯಲಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮುಹಮ್ಮದ್ ಶಾಫಿ ಸ‌ಅದಿ ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!