janadhvani

Kannada Online News Paper

ಕಾವಳ್ಕಟ್ಟೆ ಅಲ್ ಖಾದಿಸ ಮಕ್ಕಾ ಸಮಿತಿ: ಇಫ್ತಾರ್ ಸಂಗಮ ಮತ್ತು ಆತ್ಮೀಯ ಮಜ್ಲಿಸ್

ಈ ವರದಿಯ ಧ್ವನಿಯನ್ನು ಆಲಿಸಿ


ಮಕ್ಕಾ: ಕಾವಳ್ಕಟ್ಟೆ ಅಲ್ ಖಾದಿಸ ಎಜ್ಯುಕೇಶನ್ ಅಕಾಡೆಮಿ ಇದರ ಮಕ್ಕತುಲ್ ಮುಕರ್ರಮಃ ಸಮಿತಿಯ ವತಿಯಿಂದ ಇಫ್ತಾರ್ ಸಂಗಮ ಮತ್ತು ಆತ್ಮೀಯ ಮಜ್ಲಿಸ್ ಕಾರ್ಯಕ್ರಮ ಡಾ|ಮುಹಮ್ಮದ್ ಫಾಝಿಲ್ ರಝ್ವಿ ಕಾವಳ್ಕಟ್ಟೆ ಹಝ್ರತ್ ರವರ ನೇತೃತ್ವದಲ್ಲಿ ಸಾರಲ್ ಹಜ್ಜ್ ಅಬ್ದುಲ್ ಲತೀಫ್ ಹಾಜಿ ಯವರ ನಿವಾಸದಲ್ಲಿ ಜರಗಿತು.

ಕಾರ್ಯಕ್ರಮವನ್ನು ಅಲ್ ಖಾದಿಸ ಆರ್ಗನೈಝರ್ ಯೂಸುಫ್ ಮದನಿ ಕೊಯ್ಯೂರು ರವರು ಉದ್ಘಾಟಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಿದ ಹಝ್ರತ್ ರವರು, ಉತ್ತರ ಕರ್ನಾಟಕದ ದೀನೀಜ್ಞಾನವಿಲ್ಲದಂತಹ ವಿಧ್ಯಾರ್ಥಿಗಳನ್ನು ತಂದು ನಮ್ಮ ಸಂಸ್ಥೆಯಲ್ಲಿ ಧಾರ್ಮಿಕ ಮತ್ತು ಲೌಕಿಕ ವಿದ್ಯೆಗಳನ್ನು ಕಲಿಸಿ ಇದೀಗ ಎಲ್ಲಾ ವಿಷಯಗಳಲ್ಲಿ ಉನ್ನತ ವಿಧ್ಯಾರ್ಥಿಗಳಾಗಿ ಮಾರ್ಪಾಡಾಗಿದ್ದಾರೆ. ಉದಾರ ದಾನಿಗಳಾದ ನಿಮ್ಮೆಲ್ಲರ ಸಹಾಯ ಸಹಕಾರದಿಂದ ಅಲ್ ಖಾದಿಸ ಉತ್ತಮವಾಗಿ ಮುನ್ನಡೆಯುತ್ತಿದ್ದು, ಮುಂದಕ್ಕೂ ನಿಮ್ಮ ತುಂಬು ಹೃದಯದ ಸಹಾಯ ಸಹಕಾರ ಅಗತ್ಯವಿದೆ, ದಾನ ಎಲ್ಲಾ ವಿಪತ್ತುಗಳನ್ನು ತಡೆಯುತ್ತದೆ ದಾನದ ಫಲವಾಗಿ ಆಯುಷ್ಯವನ್ನು ಅಲ್ಲಾಹು ದೀರ್ಘ ಮಾಡಿದ ಹಲವು ಚರಿತ್ರೆಗಳಿವೆ ಎಂದರು.

ನಂತರ ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಹನೀಫ್ ಸಖಾಫಿ ಬೊಳ್ಮಾರ್, ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಇರ್ವತ್ತೂರು ಪದವು, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕಕ್ಕಿಂಜೆ ಮರು ಆಯ್ಕೆ, ಕೋಶಾಧಿಕಾರಿಯಾಗಿ ಕಬೀರ್ ಬಾಜಾರ್ ನೇಮಕಗೊಂಡರು.

ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಉಳ್ಳಾಲ, ಮೂಸ ಇರ್ವತ್ತೂರು ಪದವು, ಕಾರ್ಯದರ್ಶಿಗಳಾಗಿ ಇಕ್ಬಾಲ್ ಗಫೂರು ಕಿನ್ಯಾ, ನಝೀರ್ ಸೂರಿಂಜೆ ಹಾಗೂ ಕಾರ್ಯಕಾರಿ ಸದಸ್ಯರಾಗಿ ನವಾಝ್ ಇಮ್ದಾದಿ ಬಜಾಲ್, ಮೂಸಾ ಹಾಜಿ ಕಿನ್ಯಾ, ಉಮರುಲು ಫಾರೂಖ್ ಹನೀಫೀ ಬೋವು, ಬಶೀರ್ ಕೆಜೆಕಾರ್, ಅಬ್ದುಲ್ ಲತೀಫ್ ಹಾಜಿ ಕಡಲುಂಡಿ, ಆರ್.ಕೆ ಅಬ್ದುಲ್ ರಝ್ಝಾಖ್ ಮುಸ್ಲಿಯಾರ್ ರಂತಡ್ಕ , ಅಕ್ಬರ್ ಅಲಿ ಮಾಚಾರ್, ಅಬ್ದುಲ್ ಹಮೀದ್ ಫಜೀರ್, ಬದ್ರುದ್ದೀನ್ ಮಲಾರ್, ಮುಹಮ್ಮದ್ ಗಂಟಲ್ಕಟ್ಟೆಯವರನ್ನು ಆಯ್ಕೆ ಮಾಡಿದರು.

ಕಾರ್ಯಕ್ರಮವನ್ನು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿ, ಇಕ್ಬಾಲ್ ಕಕ್ಕಿಂಜೆ ಧನ್ಯವಾದ ಗೈದರು.

ವರದಿ: ಇಕ್ಬಾಲ್ ಕಕ್ಕಿಂಜೆ

error: Content is protected !! Not allowed copy content from janadhvani.com