ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ವತಿಯಿಂದ ಬದರ್ ಸ್ಮರಣೆ ಹಾಗೂ ಲೀಡರ್ಸ್ ಮೀಟ್, ಹೋಲಿ ಎಕ್ಸಿಕುಟೀವ್ ಮೇ 26ರಂದು ಕುಂಭಕ್ಕೋಡು ಕೊಯಂಗಿ ಹೌಸ್ ನಲ್ಲಿ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಉಪಾಧ್ಯಕ್ಷರಾದ ಸ್ವಾದಿಖ್ ಪಿ.ಜಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಕೋಶಾಧಿಕಾರಿ ಸಿದ್ದೀಖ್ ಹಿಮಮಿ ಸಖಾಫಿ ಪೈಂಬಚ್ಚಾಲು ಉದ್ಘಾಟಿಸಿದರು. ಬದರ್ ಸ್ಮರಣೆ, ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಮಜ್ಲಿಸ್ ಗೆ ಶಫೀಖ್ ಹಿಮಮಿ ಸಖಾಫಿ ನೇತೃತ್ವ ನೀಡಿದರು. ಸಲೀಂ ಹಿಮಮಿ ಅಹ್ಸನಿ ನಸೀಹತ್ ನೀಡಿದರು.
ಹಸೈನಾರ್ ಹಾಜಿ ಕೊಯಂಗಿ, ಸೆಕ್ಟರ್ ನಾಯಕರಾದ ಸ್ವಬಾಹ್ ಹಿಮಮಿ ಬೀಜಕೊಚ್ಚಿ, ಸಿದ್ದೀಕ್ ಎಲಿಮಲೆ, ರಹೀಂ ಪೈಂಬಚ್ಚಾಲು, ಆಸಿಫ್ ಪೈಂಬಚ್ಚಾಲು, ಶಾಕಿರ್ ಮೊಗರ್ಪಣೆ, ನಾಸರ್ ಎಲಿಮಲೆ, ರಫೀಕ್ ಕುಂಭಕ್ಕೋಡು, ಹಾರಿಸ್ ಗೂನಡ್ಕ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಾಲಿಕ್ ಕೊಯಂಗಿ ಸ್ವಾಗತಿಸಿ ಕಾರ್ಯದರ್ಶಿ ಅಝೀಝ್ ಮಾಸ್ಟರ್ ಏಣಾವರ ವಂದಿಸಿದರು.
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್: ಕೊಪ್ಪಳ ಜಿಲ್ಲೆಗೆ ನೂತನ ಸಾರಥ್ಯ
ಜನವರಿ 27ಕ್ಕೆ SYS ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ COUNT-20 ಕ್ಯಾಂಪ್
ಕೆ.ಸಿ.ಎಫ್ ಮಕ್ಕಾ ಸೆಕ್ಟರ್: ಐದು ಯೂನಿಟ್ ಗಳ ವಾರ್ಷಿಕ ಕೌನ್ಸಿಲ್
ಅಲ್-ಮದೀನತುಲ್ ಮುನವ್ವರ ಮೂಡಡ್ಕ: ದಮ್ಮಾಮ್ ಮಹಾಸಭೆ
ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಷನ್: ವಾರ್ಷಿಕ ಮಹಾಸಭೆ- ನೂತನ ಸಮಿತಿ ಅಸ್ತಿತ್ವಕ್ಕೆ
ಅಲ್-ಮದೀನತುಲ್ ಮುನವ್ವರ ಮೂಡಡ್ಕ: ಅಲ್ ಬಾದಿಯಾ ಮಹಾಸಭೆ