janadhvani

Kannada Online News Paper

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ವತಿಯಿಂದ ಜಲ್ಸತೇ ತಝ್ಕೀಯ ಕ್ಯಾಂಪ್ ಮೇ 26 ರಂದು ದೇರಳಕಟ್ಟೆ ತಾಜುಲ್ ಉಲಮಾ ಮಸ್ಜಿದ್ ನಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ನಮ್ಮನ್ನು ಅಗಲಿದ ಕಾರ್ಯಕರ್ತರ ಮೇಲೆ ಖುರ್ ಆನ್ ಹಾಗೂ ತಹ್ಲೀಲ್ ಪಾರಾಯನ ನಡೆಸಲಾಯಿತು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಇವೆನ್ಟ್ ಮತ್ತು ಟ್ರೈನಿಂಗ್ ಕಾರ್ಯದರ್ಶಿ ಇರ್ಫಾನ್ ನೂರಾನಿ ಯವರು “ಇಬಾದತ್” ವಿಷಯದಲ್ಲಿ ತರಗತಿ ನಡೆಸಿದರು ಹಾಗೂ ರೈಟ್ ಟೀಮ್ ಕಾರ್ಯದರ್ಶಿ ಜುನೈದ್ ಸಖಾಫಿ ಅಲ್ ಮಹೀನಿ ಬೆಳ್ಮ ರವರು “ಸಟಘನಾ”ತರಗತಿ ನಡೆಸಿದರು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ದಱ್’ವಾ ಕನ್ವಿನರ್ ಝುಭೈರ್ ಝುಹ್ರಿ ಉಸ್ತಾದ್ ರವರ ನೇತೃತ್ವದಲ್ಲಿ ದುಆ ಮಜ್ಲಿಸ್ ನಡೆಯಿತು.ಡಿವಿಶನ್ ಪ್ರದಾನ ಕಾರ್ಯದರ್ಶಿ ಹಮೀದ್ ತಲಪಾಡಿ ಯವರು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಜಾಫರ್ ಯು ಎಸ್ ಧನ್ಯವಾದವಿತ್ತರು.

ವರದಿ:ಮೊಹಮ್ಮದ್ ಆಶಿಕ್ (ಡಿವಿಶನ್ ಮಾಧ್ಯಮ ಕಾರ್ಯದರ್ಶಿ)

error: Content is protected !! Not allowed copy content from janadhvani.com