janadhvani

Kannada Online News Paper

ದೊಹಾ:ಮಹ್ಲರತುಲ್ ಬದ್ರಿಯಾ ಹಾಗೂ ಬ್ರಹತ್ ಇಫ್ತಾರ್ ಸಂಗಮ

ಕೆಸಿಎಫ್ ಖತರ್ ನ್ಯಾಷನಲ್ ಕಮಿಟಿ ಅಧೀನದಲ್ಲಿರುವ ಕೆಸಿಎಫ್ ದೋಹಾ ಝೋನ್ ಇದರ ಆಶ್ರಯ ದಲ್ಲಿ ದಿನಾಂಕ 22-05-2019 ರಂದು ಅಸ್ಮಕ್ ಹಾಲ್ ರಸ್ ಅಲ್-ಅಬು ಅಬೂದ್,ದೋಹಾ ಎಂಬಲ್ಲಿ ಬದ್ರ್ ಶುಹದಾಅ್ ಅನುಸ್ಮರಿಸಿ ಮಹ್ಲರತುಲ್ ಬದ್ರಿಯಾ ಹಾಗೂ ಬ್ರಹತ್ ಇಫ್ತಾರ್ ಕೂಟ ನಡೆಯಿತು.

ಇದರ ಅಧ್ಯಕ್ಷತೆಯನ್ನು ಕಬೀರ್ ದೇರಳಕಟ್ಟೆ ವಹಿಸಿದರು ಮುಖ್ಯ ಅತಿಥಿ ಯಾಗಿ ಮುಹಮ್ಮದಲಿ ಸಖಾಫಿ ದಾರುಲ್ ಅಶ್ಅರಿಯ್ಯ ಸುರಿಬೈಲ್ ಉಸ್ತಾದರು ಮಹ್ಲರತುಲ್ ಬದ್ರಿಯಾ ನೇತ್ರತ್ವ ನೀಡಿದರು.
ವೇದಿಕೆಯಲ್ಲಿ ಮುನೀರ್ ಮಾಗುಂಡಿ ,ಯೂಸುಫ್ ಸಖಾಫಿ,ಯಹ್ಯಾ ಸ ಅದಿ ,ಹನೀಫ್ ಪಾತೂರ್ ಹಾಗೂ ಇನ್ನಿತರ ಕೆಸಿಎಫ್ ದೋಹಾ ಝೋನ್ ನೇತಾರರು,ಸದಸ್ಯರು ಭಾಗವಹಿಸಿದರು.

ಪ್ರಾರ್ಥನೆ ಯ ನೇತ್ರತ್ವವನ್ನು ಹಾಫಿಲ್ ಫಾರೂಕ್ ಉಸ್ತಾದರು ನೆರವೇರಿಸಿದರು.
ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲಾ ಕಾರ್ಯಕರ್ತರಿಗೂ ಬ್ರಹತ್ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
ಸಿದ್ದೀಕ್ ಗಂಡೂಗುಲಿ ಸ್ವಾಗತಿಸಿ ಹಾಫಿಲ್ ಉಸ್ತಾದ್ ನಿರೂಪಿಸಿದರು.

error: Content is protected !! Not allowed copy content from janadhvani.com