janadhvani

Kannada Online News Paper

ಕೆ ಸಿ ಎಫ್ ರಿಯಾದ್ ಝೋನಲ್ ವತಿಯಿಂದ “ಗ್ರ್ಯಾಂಡ್ ಇಫ್ತಾರ್ ಮುಲಾಖಾತ್ – 2019”

ಈ ವರದಿಯ ಧ್ವನಿಯನ್ನು ಆಲಿಸಿ


ರಿಯಾದ್ :ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ವತಿಯಿಂದ “ಗ್ರ್ಯಾಂಡ್ ಇಫ್ತಾರ್ ಮುಲಾಖಾತ್ – 2019” ರಿಯಾದ್ ನ ಪ್ರತಿಷ್ಠಿತ “ನೂರ್ ಮಾಸ್” ಆಡಿಟೋರಿಯಂ ನಲ್ಲಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.

ಅರಬ್ ರಾಷ್ಟ್ರಗಳಾದ್ಯಂತ ಮಿಂಚಿನ ಸಂಚಾರವನ್ನು ಸೃಷ್ಟಿಸಿ ಪ್ರವಾಸಿಗಳ ಅಭಯಕೇಂದ್ರವಾಗಿ ಗುರುತಿಸಿಕೊಂಡಿರುವ ಕೆಸಿಎಫ್ ಪ್ರವಾಸಿ ಕನ್ನಡಿಗರ ಪಾಲಿಗೆ ಈ ಸಂಗಮ ಹೊಸ ಹುರಪನ್ನು ಸೃಷ್ಟಿಸಿತು.

ಸಾವಿರಾರು ಜನ ಸೇರಿದ್ದ ಬೃಹತ್ ಇಫ್ತಾರ್ ಸಂಗಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಫಾರೂಕ್ ಸಅದಿ ಹೆಚ್.ಕಲ್ಲು ವಹಿಸಿದ್ದರು. ಸಮಾರಂಭವನ್ನು ಕೇರಳ ಎಸ್ಸೆಸ್ಸೆಫ್ನ ಮಾಜಿ ಅಧ್ಯಕ್ಷರಾದ ಸೈಯ್ಯದ್ ತುರಾಬ್ ತಂಙಳ್ ಉದ್ಘಾಟಿಸಿ ಕೆಸಿಎಫ್ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು .

KCF ರಾಷ್ಟ್ರೀಯ ಸಮಿತಿಯ ಶಿಕ್ಷಣ ಇಲಾಖೆಯ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಕೆಸಿಎಫ್ ಉತ್ತರ ಕರ್ನಾಟಕದಲ್ಲಿ ಮಾಡುತ್ತಿರುವ ದೀನೀ ಕ್ರಾಂತಿಯನ್ನು ವಿವರಿಸಿದರು. ನಂತರ ನಡೆದ ಹ್ರಸ್ವ ಚಿತ್ರಣದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಅತ್ಯಂತ ಮಹತ್ವಪೂರ್ಣವಾದ ಪಾತ್ರವನ್ನು ನಿಭಾಯಿಸುತ್ತಿರುವ KCF ಬಡವರ ಕಣ್ಣೀರೊರೆಸುವ ,

ಶೈಕ್ಷಣಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕದಲ್ಲಿ “ಇಹ್ಸಾನ್” ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ನಡೆಸುತ್ತಿರುವ, ಸೌದಿಯಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದವರ ಜನಾಝ(ಮಯ್ಯಿತ್) ವಿಲೇವಾರಿ, ಜೈಲುಪಾಲಾದ ಅಮಾಯಕರಿಗೆ, ಪ್ರಾಯೋಜಕರ (ಕಫೀಲ್) ತೊಂದರಯಲ್ಲಿದ್ದು ಊರಿಗೆ ಹೋಗಲಾಗದವರಿಗೆ ಹಾಗೂ ಹಲವುರೀತಿಯ ಕಷ್ಟ ಕಾರ್ಪಣ್ಯಗಳಿಗೆ ಸಹಕರಿಸುವ, ಸೌದಿ ಅರೇಬಿಯಾ ಕೆ.ಸಿ.ಎಫ್ “ಹಜ್ಜ್ ಸ್ವಯಂಸೇವಕರ ತಂಡ” (HVC) ಹಜ್ಜಾಜ್ ಗಳ ಸೇವನೆಗಳನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು.

ರಿಯಾದ್ ಝೋನಲ್ ಕೋಶಾಧಿಕಾರಿ ಹಾಗೂ ಇಫ್ತಾರ್ ಸ್ವಾಗತ ಸಮಿತಿ ಅಧ್ಯಕ್ಷ ಉಮರ್ ಹಾಜಿ ಅಳಕೆಮಜಲು ಕಾರ್ಯಕ್ರಮದ ಯಶಸ್ವಿಗಾಗಿ ಆಹೋರಾತ್ರಿ ದುಡಿದ ಸ್ವಾಗತ ಸಮಿತಿ ಮತ್ತು ಉಪಸಮಿತಿಯ ಚೆಯರ್ಮೆನ್, ಕನ್ವೀನರ್, ಸ್ವಯಂಸೇವಕ ಕಾರ್ಯಕರ್ತರು ಹಾಗೂ ಪ್ರತಿಯೊಬ್ಬರನ್ನು ಅಭಿನಂದಿಸಿ ಹರ್ಷ ವ್ಯಕ್ತ ಪಡಿಸಿದರು.

ಗಲ್ಫ್ ಇಶಾರ ಚಂದಾ ಅಭಿಯಾನದಲ್ಲಿ ಬಂಪರ್ ವಿಜೇತರಾದ ಅಶ್ರಫ್ ರಬುವ’ರವರಿಗೆ ಚಿನ್ನದ ನಾಣ್ಯ ಹಾಗೂ ಲಕ್ಕಿ ಡ್ರಾ ಮೂಲಕ ವಿಜೇತರಾದ ಇಬ್ರಾಹಿಂ’ರವರಿಗೆ ಉಚಿತ ಉಮ್ರಾ ಟಿಕೆಟ್ ನೀಡಿ ಗೌರವಿಸಲಾಯಿತು. ಸೌದಿ ದೂತವಾಸದ ನೋರ್ಕಾ ಜನರಲ್ ಅಸಿಸ್ಟಂಟ್ ಶಿಹಾಬ್ ಕೊಟ್ಟುಗಾಡು ತಮ್ಮಬಿಡುವಿಲ್ಲದ ವೇಳೆಯಲ್ಲಿಯೂ ಕೂಡಾ ಈ ಕಾರ್ಯಕ್ರಮದ ಕೊನೆಯಲ್ಲಿ ಬಂದು ಶುಭಹಾರೈಸಿದರು.

ICF ಪ್ರತಿನಿಧಿ ಉಮರ್ ಮುಸ್ಲಿಯಾರ್ ಪನ್ನಿಯೂರು, ಮುಲಾಖಾತ್ ಆರ್ಥಿಕ ತಂಡದ ನಿರ್ದೇಶಕರಾದ ಅಬ್ದುಲ್ ರಝಾಖ್ ಹಾಜಿ ಉಜಿರೆ, RSC ನೇತಾರ ಲತೀಫ್ ಸಅದಿ ಉರುಮಿ ಶುಭಹಾರೈಸಿದರು, KSWA ನ್ಯಾಷನಲ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ತಂಙಳ್ ಕೊಡಗು, ಸಯ್ಯದ್ ಜಾಫರ್ ಸ್ವಾದಿಖ್ ತಂಙಳ್, ಅಶ್ರಫ್ ಓಚ್ಚಿರ, ಝೋನಲ್ ಇಹ್ಸಾನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ, ಬತ್ತಾ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಮುಸ್ಲಿಯಾರ್ ನಾಟೆಕಲ್, ರಬುವ ಸೆಕ್ಟರ್ ಅಧ್ಯಕ್ಷ ನಝೀರ್ ಮುಸ್ಲಿಯಾರ್ ನಂದಾವರ, ಮುರೂಜ್ ಸೆಕ್ಟರ್ ಅಧ್ಯಕ್ಷರಾದ PK ದಾವೂದ್ ಸಅದಿ ಉರುವಾಲು ಪದವು, ಸನಯ್ಯ ಸೆಕ್ಟರ್ ಅಧ್ಯಕ್ಷ ಇದ್ದಿನ್ ಕುಂಞ ಸೆರಾಜೆ, ಬದಿಯ್ಯ ಸೆಕ್ಟರ್ ಅಧ್ಯಕ್ಷ ಹಮೀದ್ ಮುಲ್ಕಿ, INC ಮುಖಂಡರಾದ ನಝೀರ್ ಹಾಜಿ ಕಾಶಿಪಟ್ನ, ಮುಲಾಖಾತ್ ಆರ್ಥಿಕ ತಂಡದ ಚೆಯರ್ಮೇನ್ ಹಂಝ ಮೈಂದಾಳ, ಕನ್ವೀನರ್ ಹನೀಫ್ ಕಣ್ಣೂರು, ಪ್ರಚಾರ ಸಮಿತಿ ಚೆಯರ್ಮೇನ್ ಇಸ್ಮಾಯಿಲ್ ಮೊಂಟೆಪದವು, ಕನ್ವೀನರ್ ಅಶ್ರಫ್ ಕಿಲ್ಲೂರು, ಹಾಗೂ ಇತರ ಉಪ ಸಮಿತಿಗಳ ನೇತಾರರಾದ ಮಜೀದ್ ವಿಟ್ಲ, ಯೂಸುಫ್ ಹಾಜಿ ಕಳಂಜಿಬೈಲು, ನಝೀರ್ ಕಕ್ಕಿಂಜೆ, ಹಬೀಬ್ TH, ಇಸ್ಮಾಯಿಲ್ ಕನ್ನಂಗಾರು, ನವಾಝ್ ಚಿಕ್ಕಮಗಳೂರು, ಝಹೀರ್ ಅಬ್ಬಾಸ್, ಶಮೀರ್ ಜೆಪ್ಪು, ರಮೀಝ್ ಕುಳಾಯಿ, ಹಾಗೂ ವಿವಿಧ ಸುನ್ನೀ ಸಂಘ ಸಂಸ್ಥೆಗಳ ನಾಯಕರಾದ ಅಝೀಝ್ ಬಜ್ಪೆ, ದಾವೂದ್ ಕಜೆಮಾರ್, ಹಮೀದ್ ಸುಳ್ಯ, ಅಬೂಬಕರ್ ಹಾಜಿ ಸಾಲೆತ್ತೂರು, ಉಮರ್ ಹಾಜಿ ಬನ್ನೂರು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜೆ ನಡೆದ ಆಧ್ಯಾತ್ಮಿಕ ಮಜ್ಲಿಸ್’ಗೆ ಶಿಕ್ಷಣ ಇಲಾಖೆ ಅಧ್ಯಕ್ಷ ಇಲ್ಯಾಸ್ ಲತ್ವೀಫಿ ನೇತೃತ್ವ ನೀಡಿದರು.

ರಿಯಾದ್ ಝೋನಲ್ ಪ್ರ.ಕಾರ್ಯದರ್ಶಿ ನಿಝಾಮ್ ಸಾಗರ್ ಆರಂಭದಲ್ಲಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಅನ್ಸಾರ್ ಮುಹಮ್ಮದ್ ಉಳ್ಳಾಲ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com