ಹಗಲನ್ನು ಬೆವರಿನಲ್ಲೂ, ರಾತ್ರಿಯನ್ನು ಕಣ್ಣೀರಿನಲ್ಲೂ ಒದ್ದೆ ಮಾಡಿಕೊಂಡು ಬದುಕು ಸಾಗಿಸುವ ಅನಿವಾಸಿಯು ಪರಲೋಕದ ವಿಜಯಕ್ಕಾಗಿ ಸಮಾಜ ಸೇವೆಗಾಗಿ ತನ್ನನ್ನು ತೊಡಗಿಸಿ ಸುಖಃ ಸಂತೋಷ ಪಡುತ್ತಾನೆ.
ತನ್ನ ಪರಲೋಕ ಬದುಕು ನೆಮ್ಮದಿ ಮತ್ತು ಸುಖಕರವಾಗಿರಬೇಕೆಂಬ ಉದ್ದೇಶದಿಂದ ಅನಿವಾಸಿಗಳು ಊರು,ಮನೆ,ಕುಟುಂಬದವರನ್ನು ಬಿಟ್ಟು ಸುಡು ಬಿಸಿಲಿನಲ್ಲೂ ಕೊರೆಯುವ ಚಳಿಯಲ್ಲೂ ದುಡಿದು ಕೇವಲ ವಾಟ್ಸಫ್ , ವೀಡಿಯೋ ಮೂಲಕ ಮಾತ್ರ ನೋಡಿ ಮಾತನಾಡಿ ಸಂತೋಷ ಪಡುವ ಅನಿವಾಸಿ ತನ್ನ ಮನಸ್ಸಿನ ಭಾವನೆಗಳಿಗೆ ಸಂತೋಷದಿಂದ ಸಾಂತ್ವಾನ ನೀಡಲು ಇರುವ ವೇದಿಕೆಯಾಗಿದೆ ಗಲ್ಫ್ ಫ್ರೆಂಡ್ಸ್ ಅಜ್ಜಿನಡ್ಕ ವಾಟ್ಸಫ್ ಗ್ರೂಫ್.
ಇಂದಿನ ಯುವ ಸಮೂಹ ಯಾರ ಭಯವಿಲ್ಲದೆ ಇಂಟರ್ನೆಟ್ ಎಂಬ ಮಾಯಾಲೋಕದಲ್ಲಿ, ಫೇಸ್ ಬುಕ್, ವಾಟ್ಸಫ್ ,ಟಿಕ್ ಟಾಕ್, ಟ್ವಿಟರ್, ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುವಾಗ ಗಲ್ಫ್ ಫ್ರೆಂಡ್ಸ್ ಅಜ್ಜಿನಡ್ಕ ವಾಟ್ಸಫ್ ನಲ್ಲಿರುವ ಸದಸ್ಯರು ಸಮುದಾಯದ ವರ್ತಮಾನ , ಭವಿಷ್ಯಗಳನ್ನು ಸುಂದರವಾಗಿ ರೂಪಿಸಲು ಅದರ ಜವಾಬ್ದಾರಿ ತನ್ನ ಹೆಗಲ ಮೇಲೆ ಹೊತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಊರ ಪರವೂರಿನಲ್ಲಿ ಇರುವ ಧಾನಿಗಳ ತುಂಬುಹೃದಯದ ಸಹಕಾರದೊಂದಿಗೆ ಮುನ್ನಡೆಯುವ ಈ ಗ್ರೂಫ್ ನ ಫಲವಾಗಿ ನಮ್ಮ ಸಮುದಾಯದ ಯತೀಂ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಆಶಾಕಿರಣವಾಗಿ ಮೂಡಿಬಂದ ಗಲ್ಫ್ ಫ್ರೆಂಡ್ಸ್ ಅಜ್ಜಿನಡ್ಕ ಗ್ರೂಫ್ ಅಲ್ಲಾಹನ ಅಪಾರ ಅನುಗ್ರಹದಿಂದ ಸಮುದಾಯದ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಎರಡು ಯತೀಂ ಹೆಣ್ಣು ಮಕ್ಕಳ ಮದುವೆಗೆ ಬೇಕಾಗಿ ಧನ ಸಹಾಯ ನೀಡಿದೆ. ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ನಿರ್ಗತಿಕ ಐದು ಹೆಣ್ಣುಮಕ್ಕಳ ಮದುವೆಗೆ ಧನ ಸಹಾಯಾಮಾಡಲಾಗಿರುತ್ತದೆ . ಮಾತ್ರವಲ್ಲದೆ ಮಹಿಳೆಯೋರ್ವರಿಗೆ ಮತ್ತು ವಿದೇಶದಲ್ಲಿ ದುಡಿಯುತಿದ್ದು ಅನಾರೋಗ್ಯ ನಿಮಿತ್ತ ಊರಿಗೆ ಹಿಂತಿರುಗಿರುವ ಸಹೋದರನೋರ್ವರಿಗೂ ಚಿಕಿತ್ಸೆಗಾಗಿ ಧನ ಸಹಾಯಮಾಡಲಾಯಿತು.
ಭೀಕರ ಅಪಘಾತದಲ್ಲಿ ಮೃತ ಪಟ್ಟ ಕುಟುಂಬದವರಿಗೂ ಈ ಅಪಘಾತದಲ್ಲಿ ಯತೀಮ್ ಆದ ಮಕ್ಕಳಿಗೂ ಧನ ಸಹಾಯ ಮಾಡಲಾಯಿತು. ಆರ್ಥಿಕವಾಗಿ ತೀರಾ ಹಿಂದುಳಿದ ನಮ್ಮ ಸಹೋದರ ಸಮುದಾಯದ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿ ಕೊಟ್ಟಿದೆ. ಜಾತಿ ಮತ ಭೇದ ಇಲ್ಲದೆ ಎಲ್ಲರಿಗೂ ಸಾಂತ್ವಾನದ ಹಸ್ತ ವನ್ನು ನೀಡಿದೆ.ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ನಮ್ಮ ಸಮುದಾಯದ ಮೂರು ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಅಪೇಕ್ಷೆ ಬಂದಿದ್ದು ಸಹೃದಯಿಗಳಾದ ತಾವು ಎಂದಿನಂತೆ ಸಹಕರಿಸಿ ಈ ಬಡ ಕುಟುಂಬದ ಕನಸಿನ ಕೂಸಾದ ತಮ್ಮದಾದ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿದೆ.
ಅಲ್ಲದೆ ಧಾರ್ಮಿಕವಾಗಿಯೂ ಈ ಗ್ರೂಫ್ ನ ವತಿಯಿಂದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಕಳೆದ ರಮಳಾನ್ ತಿಂಗಳಲ್ಲಿ ಬೃಹತ್ ಇಫ್ತಾರ್ ಕೂಟವನ್ನು ನಡೆಸಲಾಗಿತ್ತು. ಅಲ್ಲಾಹನು ಈ ಎಲ್ಲಾ ಚಟುವಟಿಕೆಗಳನ್ನು ಸತ್ಕರ್ಮವನ್ನಾಗಿ ಸ್ವೀಕರಿಸಲಿ ಆಮೀನ್ ಯಾ ರಬ್ಬಲ್ ಆಲಮೀನ್.
ನೆಮ್ಮದಿಯ ನಾಳಿನ ಬದುಕಿಗಾಗಿ ಗಲ್ಫ್ ಫ್ರೆಂಡ್ಸ್ ಅಜ್ಜಿನಡ್ಕ ವಾಟ್ಸಾಪ್ ಗ್ರೂಫ್ ನಲ್ಲಿ ಕೈಜೋಡಿಸಿ ಸಾಮಾಜಿಕ ಸಾಂತ್ವಾನಗಳಿಗೆ ಸಹಕರಿಸಿ.