ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಅಧೀನದಲ್ಲಿರುವ ರಬುವ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಮಿತಿ ಅಧ್ಯಕ್ಷರಾದ ಸಿರಾಜುದ್ದೀನ್ ವಳಾಲು ಇವರ ಘನ ಅಧ್ಯಕ್ಷತೆಯಲ್ಲಿ ಜರುಗಿತು.

ಪ್ರ.ಕಾರ್ಯದರ್ಶಿ ಪಿ.ಕೆ.ಎಂ.ಹನೀಫ್ ಉರುವಾಲು ಪದವು ಸ್ವಾಗತಿಸಿದ ಸಭೆಯನ್ನು ಇಸ್ಮಾಯಿಲ್ ಮದನಿ ಒಕ್ಕೆತ್ತೂರು ಖಿರಾಅತ್ ಪಠಿಸಿದರು.ಉದ್ಘಾಟನೆಯನ್ನು ರಿಯಾದ್ ಝೋನ್ ಆಡ್ಮಿನ್ ವಿಂಗ್ ಚೆಯರ್ಮ್ಯಾನ್ ಇಸ್ಮಾಯಿಲ್ ಮೊಂಟೆಪದವು ನೆರವೇರಿಸಿದರು.
”ಅಲೈಕುಮ್ ಬಿಲ್ ಜಮಾಅಃ” ಎಂಬ ಘೋಷ ವಾಕ್ಯದಲ್ಲಿ ಕೆ.ಸಿ.ಎಫ್.ರಾಷ್ಟ್ರೀಯ ಸಮಿತಿ ಆರ್ಗನೈಝ್ ವಿಂಗ್ ಚೆಯರ್ಮ್ಯಾನ್ ಸಿದ್ದೀಖ್ ಸಖಾಫಿ ಪೆರುವಾಯಿ ವಿಷಯ ಮಂಡನೆ ನಡೆಸುತ್ತಾ ” ಸಾಂಘಿಕ ಸಂಬಂದಗಳನ್ನು ನಮ್ಮ ವೈಯುಕ್ತಿಕ ಲಾಭಗಳಿಗೆ ಬಳಸಿಕೊಳ್ಳಬಾರದೆಂದು ಕಿವಿಮಾತು ಹೇಳಿದರು.

ಬಳಿಕ ಕಾರ್ಯದರ್ಶಿ ಪಿ.ಕೆ.ಎಂ.ಹನೀಫ್ ಉರುವಾಲು ಪದವು ವಾಚಿಸಿದ 2017-19ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಬಳಿಕ ಚುಣಾವಣಾ ವೀಕ್ಷಕರಾಗಿ ಆಗಮಿಸಿದಂತ ಝೋನ್ ನಾಯಕರಾದ ಹನೀಫ್ ಕಣ್ಣೂರು ಮತ್ತು ಇಸ್ಮಾಯಿಲ್ ಮೊಂಟೆಪದವು ಇವರ ನೇತೃತ್ವದಲ್ಲಿ ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

2019-21ಸಾಲಿನ ನೂತನ ಸಾರಥಿಗಳು
ಅಧ್ಯಕ್ಷರು: ನಝೀರ್ ಮುಸ್ಲಿಯಾರ್,ನಂದಾವರ
ಪ್ರ.ಕಾರ್ಯದರ್ಶಿ: ಪಿ.ಕೆ.ಎಂ.ಹನೀಫ್ ಉರುವಾಲು ಪದವು
ಕೋಶಾಧಿಕಾರಿ: ಸಿರಾಜುದ್ದೀನ್ ವಳಾಲು
ಸಂಘಟನಾ ಇಲಾಖೆ ಅಧ್ಯಕ್ಷರು: ಸಂಶುದ್ದೀನ್ ಉಜಿರೆ
ಸಂಘಟನಾ ಇಲಾಖೆ ಕಾರ್ಯದರ್ಶಿ: ಅಬ್ದುಸ್ಸಲಾಂ ಹಳೆಯಂಗಡಿ
ಶಿಕ್ಷಣಾ ಇಲಾಖೆ ಅಧ್ಯಕ್ಷರು: ಇಸ್ಮಾಯಿಲ್ ಮದನಿ,ಒಕ್ಕೆತ್ತೂರು
ಶಿಕ್ಷಣಾ ಇಲಾಖೆ ಕಾರ್ಯದರ್ಶಿ: ರಿಯಾಝ್ ಮಲಾರ್
ಸಾಂತ್ವನ ಇಲಾಖೆ ಅಧ್ಯಕ್ಷರು: ಪಿ.ಕೆ.ಎಂ.ಆಸಿಫ್ ಉರುವಾಲು ಪದವು
ಸಾಂತ್ವನ ಇಲಾಖೆ ಕಾರ್ಯದರ್ಶಿ: ಅಬ್ದುಲ್ ಮಜೀದ್ ಹಳೆಯಂಗಡಿ
ಪಬ್ಲಿಷಿಂಗ್ ಇಲಾಖೆ ಅಧ್ಯಕ್ಷರು : ಇಲ್ಯಾಸ್ ಅಜ್ಜಿಕಟ್ಟೆ
ಪಬ್ಲಿಷಿಂಗ್ ಇಲಾಖೆ ಕಾರ್ಯದರ್ಶಿ: ಇಸ್ಮಾಯಿಲ್ ದೊಂಪ
ಹಾಗೂ 13 ಮಂದಿ ಕಾರ್ಯಕಾರಿ ಸಮಿತಿ ಮತ್ತು 5 ಮಂದಿ ಝೋನ್ ಕೌನ್ಸಿಲರ್ ಗಳನ್ನೊಳಗೊಂಡ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಬಳಿಕ ಚುಣಾವಣಾ ನಾಯಕರಾದ ಹನೀಫ್ ಕಣ್ಣೂರು ಮಾತನಾಡಿ
ನೂತನ ಸಮಿತಿಗೆ ಶುಭ ಹಾರೈಸಿದರು.
ತದನಂತರ ನೂತನ ಅದ್ಯಕ್ಷರಾದ ನಝೀರ್ ಮುಸ್ಲಿಯಾರ್ ಮಾತನಾಡಿದರು.
ನೂತನ ಕಾರ್ಯದರ್ಶಿ ಪಿ.ಕೆ.ಎಂ.ಹನೀಫ್ ಉರುವಾಲು ಪದವು ವಂದಿಸಿದ ಸಭೆಯು 3 ಸ್ವಲಾತಿನೊಂದಿಗೆ ಕೊನೆಗೊಂಡಿತು.
ಪಬ್ಲಿಷಿಂಗ್ ಇಲಾಖೆ
ಕೆ.ಸಿ.ಎಫ್.ರಬುವ ಸೆಕ್ಟರ್.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ