janadhvani

Kannada Online News Paper

ವಾಷಿಂಗ್ಟನ್, ಮಾ.23- ಇತ್ತೀಚಿನ ದಿನಗಳಲ್ಲಂತೂ ವಾಟ್ಸಾಪ್ ಒಂದು ರೀತಿಯ ಮೇಘಸಂದೇಶದಂತಾಗಿದೆ. ಯಾವುದೇ ಮಾಹಿತಿಯನ್ನು ತಕ್ಷಣ ರವಾನಿಸಲು ಬಳಕೆದಾರರ ಬೆರಳು ಚಲಿಸುವುದು ಸ್ಮಾರ್ಟ್ ಫೋನ್ ವಾಟ್ಸಾಪ್ ಐಕಾನ್‍ನತ್ತ.

ನೀವು ನಿಮ್ಮ ಸ್ನೇಹಿತರಿಗೂ ಅಥವಾ ಇನ್ಯಾರಿಗೂ ಕಳುಹಿಸುವ ವಾಟ್ಸಾಪ್ ಸಂದೇಶಗಳ ಸಂಖ್ಯೆ ಎಷ್ಟು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ…? ಅಥವಾ ಲೆಕ್ಕ ಹಾಕಿದ್ದೀರಾ…? ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ ಅದನ್ನು ತಿಳಿಯಲು ವಾಟ್ಸಾಪ್ ಎರಡು ವಿಶಿಷ್ಟ ತಂತ್ರಜ್ಞಾನ ಅಭಿವೃದ್ಧಿಗೊಳಿಸಿದೆ.

ಫಾರ್ವಡಿಂಗ್ ಇನ್ಫೋ ಮತ್ತು ಫ್ರಿಕ್ವೆಂಲ್ಟಿ ಫಾರ್ವಡೆಡ್ ಎಂಬ ತಂತ್ರಜ್ಞಾನ ಬಳಸಿ ನೀವು ಕಳುಹಿಸಿರುವ ಅಥವಾ ನಿಮಗೆ ಸ್ವೀಕೃತವಾಗಿರುವ ಸಂದೇಶಗಳ ಒಟ್ಟು ಸಂಖ್ಯೆಯನ್ನು ನಿರ್ದಿಷ್ಟ ಅವಧಿಗೆ ತಿಳಿಯಬಹುದಾಗಿದೆ.

ಇದಕ್ಕೆ ಏನು ಮಾಡಬೇಕು..? ಸೆಂಡ್ ಮೆಸೇಜ್ ಮೇಲೆ ದೀರ್ಘ ಬೆರಳಿಟ್ಟು ಇನ್‍ಫೋ ಐಕಾನ್ ಮೇಲೆ ಟ್ಯಾಪ್ ಮಾಡಿದರೆ ನೀವು ರವಾನಿಸಿರುವ ಸಂದೇಶಗಳ ಮಾಹಿತಿ ಸಿಗುತ್ತದೆ.

ಇದರ ಪ್ರಯೋಜನವೇನು? ನೀವು ಹಿಂದೊಮ್ಮೆ ಕಳುಹಿಸಿದ ಸಂದೇಶವನ್ನು ಅಥವಾ ನಿಮಗೆ ಮತ್ತೆ ಲಭಿಸದಿರುವ ಚಿತ್ರ ಅಥವಾ ಮಾಹಿತಿಯನ್ನು ನೀವು ಮರಳಿ ಪಡೆಯಬಹುದು. ಅಲ್ಲದೆ ನೀವು ನಿರ್ದಿಷ್ಟ ಅವಧಿಗೆ ಕಳುಹಿಸುವ ಸರಾಸರಿ ಸಂದೇಶದ ಬಗ್ಗೆ ತಿಳಿದುಕೊಳ್ಳಬಹುದು.

ಇದರ ಮತ್ತೊಂದು ಪ್ರಯೋಜನವೆಂದರೆ ನೀವು ರವಾನಿಸಿದ ಸಂದೇಶ ಅಥವಾ ಮಾಹಿತಿಯನ್ನು ಕಿಡಿಗೇಡಿಗಳು ಇತರ ಉದ್ದೇಶಗಳಿಗೆ(ಫೆಕ್‍ನ್ಯೂಸ್, ಫೆಕ್ ಮೆಸೇಜ್) ಬಳಸಿಕೊಳ್ಳುವುದನ್ನು ಪತ್ತೆ ಮಾಡಿ ಅವರಿಗೆ ತಕ್ಕಶಾಸ್ತಿ ಮಾಡಬಹುದು.

error: Content is protected !! Not allowed copy content from janadhvani.com