janadhvani

Kannada Online News Paper

ಇನ್ಮುಂದೆ ಮೊಬೈಲ್ ನಲ್ಲಿ ಜಿ-ಮೇಲ್ ಆಪ್ ಬಳಸುವಂತಿಲ್ಲ

ನವದೆಹಲಿ : ಮೊಬೈಲ್‌ ನಲ್ಲಿ ಜಿ-ಮೇಲ್‌ ಆಪ್‌ ಬಳಸುತ್ತಿದ್ದವರಿಗೆ ಒಂದು ಬ್ಯಾಡ್ ನ್ಯೂಸ್, ಏಪ್ರಿಲ್ 1 ರಿಂದ ಜಿಮೇಲ್‌ ಆಪ್‌ ಬಳಸಲು ಸಾಧ್ಯವಿಲ್ಲ.
ಸೋಶಿಯಲ್ ಮಿಡಿಯಾದಲ್ಲಿನ ಸ್ಪರ್ಧೆಯ ನಡುವೆ ಗೂಗಲ್‌ ಪ್ಲಸ್‌ ಹೆಚ್ಚು ಪ್ರಸಿದ್ಧಿ ಹೊಂದಿಲ್ಲ ಎನ್ನುವ ಕಾರಣದಿಂದ ಸರ್ಚ್ ಇಂಜಿನ್ ಗೂಗಲ್‌ ಈಗಾಗಲೇ ಗೂಗಲ್‌ ಪ್ಲಸ್‌ನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಷ್ಟೇ ಅಲ್ಲ, ಇದೀಗ ಜಿ-ಮೇಲ್‌ ಇನ್‌ ಬಾಕ್ಸ್‌ ಆಪ್‌ ನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಇನ್‌ ಬಾಕ್ಸ್‌ ಜೀ-ಮೇಲ್‌ ನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆಯೇ ಗೂಗಲ್‌ ಹೇಳಿಕೊಂಡಿತ್ತು. ಜಿ ಮೇಲ್ ಇನ್‌ ಬಾಕ್ಸ್‌ ಆಪ್‌ ಸ್ಥಗಿತಗೊಳಿಸುವ ಬಗ್ಗೆ ಅಧಿಕೃತವಾಗಿ ಗೂಗಲ್‌ ಘೋಷಿಸಿದ್ದು, ಏಪ್ರಿಲ್ 1 ರಿಂದ ಮೊಬೈಲ್‌ ನಲ್ಲಿ ಆಪ್‌ ಹಾಕಿಕೊಂಡಿದ್ದರೂ ಈ ಸೇವೆ ಲಭ್ಯವಿಲ್ಲ

error: Content is protected !! Not allowed copy content from janadhvani.com