ರಿಯಾದ್: ಸೌದಿ ಅರೇಬಿಯಾಕ್ಕೆ ಹೊಸ ವೀಸಾಗಳಲ್ಲಿ ಬರುವ ಅನಿವಾಸಿಗರಿಗೆ ತಮ್ಮ ಕುಟುಂಬಗಳನ್ನು ಜೊತೆಗೆ ಕರೆತರಲು ಹೊಸ ಸೌಲಭ್ಯಗಳನ್ನು ಘೋಷಿಸಲಾಗಿದೆ. ಜೀವನಮಟ್ಟವನ್ನು ಸುಧಾರಿಸುವ ಕ್ರಮಗಳ ಭಾಗವಾಗಿ ಈ ಹೊಸ ವ್ಯವಸ್ಥೆಯನ್ನು ಘೋಷಿಸಲಾಗಿದೆ. ವಿದೇಶಾಂಗ ಸಚಿವಾಲಯ ಹಾಗೂ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೊಸ ವೀಸಾಗಳಲ್ಲಿ ನಿರ್ದಿಷ್ಟ ಅರ್ಹತೆ ಹೊಂದಿರುವ ಕುಟುಂಬದ ಮುಖ್ಯಸ್ಥರ ಉದ್ಯೋಗ ವೀಸಾ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಸಮಯದಲ್ಲೇ, ನಿಗದಿಪಡಿಸಿದ ಷರತ್ತುಗಳನ್ನು ಪಾಲಿಸಿ ಕುಟುಂಬದ ಸದಸ್ಯರಿಗೂ ದೇಶಕ್ಕೆ ಪ್ರವೇಶಿಸಲು ಪ್ರವೇಶ ವೀಸಾ (ಎಂಟ್ರಿ ವೀಸಾ) ಲಭ್ಯವಾಗುವ ಸೌಲಭ್ಯವನ್ನು ಘೋಷಿಸಲಾಗಿದೆ. ಕುಟುಂಬದ ಮುಖ್ಯಸ್ಥರಾದ ಪತಿ ಅಥವಾ ಪತ್ನಿ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಅವಿವಾಹಿತ ಹೆಣ್ಣುಮಕ್ಕಳು ಈ ಸೌಲಭ್ಯಕ್ಕೆ ಅರ್ಹರಾದ ಕುಟುಂಬದ ಸದಸ್ಯರು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಸ್ತುತ, ಉನ್ನತ ಹುದ್ದೆಗಳಿಗೆ ಆಗಮಿಸುವವರಿಗೂ ಸಹ ಮೊದಲ ಬಾರಿಗೆ ದೇಶಕ್ಕೆ ಬರುವಾಗ ಕುಟುಂಬವನ್ನು ಜೊತೆಗೆ ಕರೆತರಲು ಸಾಧ್ಯವಿರಲಿಲ್ಲ. ಸೌದಿಗೆ ತಲುಪಿ, ಇಖಾಮಾ (ರೆಸಿಡೆನ್ಸಿ ಪರ್ಮಿಟ್) ಪಡೆದ ನಂತರವಷ್ಟೇ ಫ್ಯಾಮಿಲಿ ವೀಸಾ ಅರ್ಜಿ ಸೇರಿದಂತೆ ಇತರ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುತ್ತಿತ್ತು. ಆದರೆ ಹೊಸ ಸಡಿಲಿಕೆಯ ಪ್ರಕಾರ, ಕುಟುಂಬದ ಮುಖ್ಯಸ್ಥರ ವೀಸಾ ಪ್ರಕ್ರಿಯೆಗಳು ನಡೆಯುತ್ತಿರುವಾಗಲೇ ಅರ್ಹ ಕುಟುಂಬ ಸದಸ್ಯರಿಗೂ ಎಂಟ್ರಿ ವೀಸಾ ಪಡೆಯಲು ಮತ್ತು ಜೊತೆಯಲ್ಲೇ ಸೌದಿಗೆ ವಿಮಾನವೇರಲು ಸಾಧ್ಯವಾಗುತ್ತದೆ.
ಎಂಟ್ರಿ ವೀಸಾದ ಮೂಲಕ ಸೌದಿಗೆ ತಲುಪಿದ ನಂತರ, ಚಾಲ್ತಿಯಲ್ಲಿರುವ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಕುಟುಂಬದ ಸದಸ್ಯರ ವಾಸಾನುಮತಿ (ರೆಸಿಡೆನ್ಸಿ) ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಇತಿಹಾದ್ ರೈಲ್ ಟಿಕೆಟ್ನಲ್ಲಿ ಮೆಟ್ರೋ ಮತ್ತು ಬಸ್ ಪ್ರಯಾಣವೂ ಲಭ್ಯ- ದುಬೈ ‘ನೋಲ್ ಪಾಸ್’ ಸೇವೆಯ ಸಂಪೂರ್ಣ ಮಾಹಿತಿ
ಸೌದಿ: ಎರಡು ವಿಮಾನನಿಲ್ದಾಣಗಳ ಮೇಲೆ ಹೂತಿಗಳ ದಾಳಿ- ಮೂವರಿಗೆ ಗಾಯ
‘ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ’ ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಶೈಖ್ ಹಮ್ದಾನ್
ಸೌದಿ: ನಜ್ರಾನ್ನಲ್ಲಿ ಶಾಲೆ ಮೇಲೆ ಹೂತಿ ದಾಳಿ- ಅಹದ್ ರುಫೈದಾದಲ್ಲಿ ಏಷ್ಯಾ ಮೂಲದ ವ್ಯಕ್ತಿಗೆ ಗಾಯ
ಸೌದಿ: ವಿವಿಧ ಪ್ರಾಂತ್ಯಗಳಲ್ಲಿ ಮಳೆ, ಪ್ರವಾಹ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್