janadhvani

Kannada Online News Paper

ಅಕ್ಟೋಬರ್ 6ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ

ಮಂಗಳೂರು: ಪ್ರಕಾಶಮಾನ 100 ವರ್ಷಗಳು ಎಂಬ ಘೋಷಣೆ ಯೊಂದಿಗೆ

ಸಮಸ್ತ ಸೆಂಟಿನರಿಯ ಆಚರಣೆ ಯ ಸಮಾರೋಪ ಸಮಾರಂಭವು ಕೇರಳದ ಮಲಪುರಂ ನ ವಾದಿ ಹರಮೈನಿಯಲ್ಲಿ 2027 ಜನವರಿ 28,29,30,31 ದಿನಾಂಕಗಳಲ್ಲಿ ನಡೆಯಲಿದ್ದು ಇದರ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರಂತೆ ದಕ ಜಿಲ್ಲಾ ವೆಸ್ಟ್ ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್ ನೇತೃತ್ವದಲ್ಲಿ ಜಿಲ್ಲಾ ಅಸೆಂಬ್ಲಿಯನ್ನು ಅಕ್ಟೋಬರ್ 6 ರಂದು ಮಂಗಳವಾರ ಸಾಗರ ಆಡಿಟೋರಿಯಂ ಬಿಸಿ ರೋಡಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9.30 ಕ್ಕೆ ಸ್ಥಳೀಯ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಧ್ವಜಾರೋಹಣ ಮಾಡಲಿದ್ದು ನಂತರ ನಡೆಯುವ ಸಮಾವೇಶದಲ್ಲಿ ದ ಕ ಜಿಲ್ಲಾ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಎಕ್ಸಿಕ್ಯೂಟಿವ್ ಕೌನ್ಸಿಲ್ ಕರ್ನಾಟಕ ರಾಜ್ಯಾಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ,ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಮತ್ತಿತರರು ಮಾತನಾಡಲಿದ್ದು ಕೇರಳ ರಾಜ್ಯ ಎಸ್ ಎಸ್ ಎಫ್ ಕೋಶಾಧಿಕಾರಿ ಅನಸ್ ಅಮಾನಿ ಪುಷ್ಪಗಿರಿ ಮುಖ್ಯ ತರಗತಿ ಮಂಡಿಸಲಿದ್ದಾರೆ. ಅಲ್ಲದೇ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್, ಜಂಇಯ್ಯತುಲ್ ಉಲಮಾ, ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನೀ ಮಾನೇಜ್ಮೆಂಟ್ ಅಸೋಸಿಯೇಷನ್, ಸಂಘಟನೆಗಳ 1000 ಕಾರ್ಯಕರ್ತರು ಶಿಬಿರಾರ್ಥಿಗಳಾಗಿ ಭಾಗವಹಿಸಲಿದ್ದಾರೆ

ಎಂದು ಎಕ್ಸಿಕ್ಯೂಟಿವ್ ಕೌನ್ಸಿಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೂಫ್ ಹಿಮಮಿ ಕಾಮಿಲ್ ಸಖಾಫಿ ಹಳೆಯಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...