ದುಬೈ: ಇತಿಹಾದ್ ರೈಲಿನಲ್ಲಿ ದುಬೈಗೆ ಪ್ರಯಾಣಿಸುವವರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು ‘ಎಂಡ್-ಟು-ಎಂಡ್’ ಸೇವೆಯನ್ನು ಆರಂಭಿಸಲಾಗಿದೆ. ರೈಲು ಟಿಕೆಟ್ ಬುಕ್ ಮಾಡುವಾಗಲೇ ದುಬೈನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಬಳಸಬಹುದಾದ ‘ನೋಲ್ ಒನ್ ಡೇ ಪಾಸ್’ (Nol One-Day Pass) ಅನ್ನು ಸಹ ಜೊತೆಗೆ ಸೇರಿಸಿಕೊಳ್ಳುವ ಸೌಲಭ್ಯ ಲಭ್ಯವಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದಾಗಿ, ರೈಲಿನಿಂದ ಇಳಿದು ಮೆಟ್ರೋ ಅಥವಾ ಬಸ್ ಹತ್ತಲು ಪ್ರತ್ಯೇಕ ಟಿಕೆಟ್ ಪಡೆಯಲು ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಒಂದೇ QR ಕೋಡ್ ಬಳಸಿ ಇತಿಹಾದ್ ರೈಲು ಹಾಗೂ ದುಬೈ ಮೆಟ್ರೋ, ಟ್ರಾಮ್ ಮತ್ತು RTA ಬಸ್ಗಳಲ್ಲಿ ತಡೆರಹಿತವಾಗಿ ಪ್ರಯಾಣಿಸಬಹುದು.
ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವುದು ಹೇಗೆ?
ಇತಿಹಾದ್ ರೈಲಿನ ದುಬೈನಲ್ಲಿರುವ ‘ಅಲ್ ಯಲಾಯೀಸ್’ (Al Yalayis) ಸ್ಟೇಷನ್ ಅನ್ನು ಪಾದಚಾರಿ ಮೇಲ್ಸೇತುವೆ (Pedestrian Footbridge) ಮೂಲಕ ‘ಜುಮೇರಾ ಗೋಲ್ಫ್ ಎಸ್ಟೇಟ್ಸ್’ ಮೆಟ್ರೋ ಸ್ಟೇಷನ್ಗೆ ನೇರವಾಗಿ ಸಂಪರ್ಕಿಸಲಾಗಿದೆ. ರೈಲಿನಿಂದ ಇಳಿದು ಮೇಲ್ಸೇತುವೆಯ ಮೂಲಕ ನಡೆದು ಕೆಲವೇ ನಿಮಿಷಗಳಲ್ಲಿ ಮೆಟ್ರೋ ಹತ್ತಬಹುದು. ಬುಕಿಂಗ್ ಸಮಯದಲ್ಲಿ ಎರಡು ರೀತಿಯ ಪಾಸ್ಗಳು ಲಭ್ಯವಿರುತ್ತವೆ:
- ರೆಗ್ಯುಲರ್ ಪಾಸ್: ರೆಗ್ಯುಲರ್ ಕ್ಲಾಸ್ ಮೆಟ್ರೋ ಮತ್ತು ಬಸ್ ಪ್ರಯಾಣಕ್ಕೆ 22 ದಿರ್ಹಮ್ ದರ.
- ಗೋಲ್ಡ್ ಪಾಸ್: ಗೋಲ್ಡ್ ಕ್ಲಾಸ್ ಪ್ರಯಾಣಕ್ಕೆ 42 ದಿರ್ಹಮ್ ದರ.
ಅವಧಿ ಮತ್ತು ಬಳಸುವ ವಿಧಾನ
ಪಾಸ್ ಖರೀದಿಸಿದ ದಿನಾಂಕದಿಂದ 90 ದಿನಗಳ ಒಳಗೆ ಯಾವಾಗ ಬೇಕಾದರೂ ಇದನ್ನು ಸಕ್ರಿಯಗೊಳಿಸಬಹುದು (ಆಕ್ಟಿವೇಟ್ ಮಾಡಬಹುದು). ಇತಿಹಾದ್ ರೈಲಿನಲ್ಲಿ ಪ್ರಯಾಣಿಸುವ ಅದೇ ದಿನವೇ ಇದನ್ನು ಬಳಸಬೇಕು ಎಂಬ ಕಡ್ಡಾಯವೇನೂ ಇಲ್ಲ. ಮೆಟ್ರೋದ ರೆಡ್ ಮತ್ತು ಗ್ರೀನ್ ಲೈನ್ಗಳು, ಟ್ರಾಮ್ ಹಾಗೂ ಅನುಮತಿಸಲಾದ ವಲಯಗಳ RTA ಬಸ್ಗಳಲ್ಲಿ ಇದನ್ನು ಬಳಸಬಹುದು. ಆದರೆ, ಇಂಟರ್ಸಿಟಿ (ನಗರಾಂತರ) ಮತ್ತು ಸೀಝನಲ್ ಬಸ್ಗಳಲ್ಲಿ ಈ ಪಾಸ್ ಬಳಸಲು ಸಾಧ್ಯವಿಲ್ಲ.
ಬುಕಿಂಗ್ ವಿಧಾನ
ಇತಿಹಾದ್ ರೈಲ್ ಆಪ್ ಅಥವಾ ವೆಬ್ಸೈಟ್ನಲ್ಲಿ ನಿಮ್ಮ ಪ್ರಯಾಣವನ್ನು ಆಯ್ಕೆಮಾಡಿ. ಚೆಕ್ಔಟ್ಗೆ ಎದುರು ಕಾಣಿಸುವ ‘End-to-End Journey Options’ ಮೇಲೆ ಕ್ಲಿಕ್ ಮಾಡಿ. ಅಲ್ಲಿಂದ ‘Nol One-Day Pass’ ಆಯ್ಕೆಮಾಡಿ, ರೆಗ್ಯುಲರ್ ಅಥವಾ ಗೋಲ್ಡ್ ಪಾಸ್ ಸೆಲೆಕ್ಟ್ ಮಾಡಿ. ಪಾವತಿ ಪೂರ್ಣಗೊಂಡಾಗ ಆಪ್ ಮತ್ತು ಇಮೇಲ್ನಲ್ಲಿ ಒಂದು QR ಕೋಡ್ ದೊರೆಯುತ್ತದೆ. ಇಡೀ ಪ್ರಯಾಣದ ಉದ್ದಕ್ಕೂ ಈ ಒಂದೇ QR ಕೋಡ್ ಬಳಸಿ ರೈಲು ಹಾಗೂ ದುಬೈ ಸಾರ್ವಜನಿಕ ಸಾರಿಗೆಯನ್ನು ಪ್ರವೇಶಿಸಬಹುದು. Nol Pay ಮತ್ತು S’hail ಆಪ್ಗಳ ಮೂಲಕವೂ ಈ ಸೌಲಭ್ಯ ಲಭ್ಯವಿದೆ.















ಇನ್ನಷ್ಟು ಸುದ್ದಿಗಳು
ಸೌದಿ ವೀಸಾ ನಿಯಮ ಸಡಿಲಿಕೆ: ಹೊಸಬರಿಗೆ ಕುಟುಂಬವನ್ನೂ ಕರೆತರಲು ಅವಕಾಶ
ಸೌದಿ: ಎರಡು ವಿಮಾನನಿಲ್ದಾಣಗಳ ಮೇಲೆ ಹೂತಿಗಳ ದಾಳಿ- ಮೂವರಿಗೆ ಗಾಯ
‘ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ’ ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಶೈಖ್ ಹಮ್ದಾನ್
ಸೌದಿ: ನಜ್ರಾನ್ನಲ್ಲಿ ಶಾಲೆ ಮೇಲೆ ಹೂತಿ ದಾಳಿ- ಅಹದ್ ರುಫೈದಾದಲ್ಲಿ ಏಷ್ಯಾ ಮೂಲದ ವ್ಯಕ್ತಿಗೆ ಗಾಯ
ಸೌದಿ: ವಿವಿಧ ಪ್ರಾಂತ್ಯಗಳಲ್ಲಿ ಮಳೆ, ಪ್ರವಾಹ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್