ರಿಯಾದ್: ಸೌದಿ ಅರೇಬಿಯಾದ ಜಿಝಾನ್ ಮತ್ತು ನಜ್ರಾನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣಗಳ ಮೇಲೆ ಹೂತಿಗಳು ದಾಳಿ ನಡೆಸಿದ್ದಾರೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿನ್ನೆ ಸಾಯಂಕಾಲ ಈ ದಾಳಿ ನಡೆದಿದೆ.
ದಾಳಿ ನಡೆದ ತಕ್ಷಣವೇ ತುರ್ತು ರಕ್ಷಣಾ ತಂಡಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ದಾಳಿಯಿಂದ ವಿಮಾನನಿಲ್ದಾಣಗಳಿಗೆ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಜ್ರಾನ್ ಮತ್ತು ಜಿಝಾನ್ ಸೌದಿ ಅರೇಬಿಯಾದ ಯೆಮೆನ್ ಗಡಿಗೆ ಹೊಂದಿಕೊಂಡಿರುವ ಪ್ರಾಂತ್ಯಗಳಾಗಿವೆ. ದಾಳಿಯ ಹಿನ್ನೆಲೆಯಲ್ಲಿ ವಾರಗಳ ಕಾಲ ವಿಮಾನನಿಲ್ದಾಣವನ್ನು ಮುಚ್ಚಲಾಗಿದೆ. ವಿಮಾನನಿಲ್ದಾಣಗಳಲ್ಲಾದ ಹಾನಿಯನ್ನು ಪರಿಶೀಲಿಸಲು ಮತ್ತು ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿ ವೀಸಾ ನಿಯಮ ಸಡಿಲಿಕೆ: ಹೊಸಬರಿಗೆ ಕುಟುಂಬವನ್ನೂ ಕರೆತರಲು ಅವಕಾಶ
ಇತಿಹಾದ್ ರೈಲ್ ಟಿಕೆಟ್ನಲ್ಲಿ ಮೆಟ್ರೋ ಮತ್ತು ಬಸ್ ಪ್ರಯಾಣವೂ ಲಭ್ಯ- ದುಬೈ ‘ನೋಲ್ ಪಾಸ್’ ಸೇವೆಯ ಸಂಪೂರ್ಣ ಮಾಹಿತಿ
‘ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ’ ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಶೈಖ್ ಹಮ್ದಾನ್
ಸೌದಿ: ನಜ್ರಾನ್ನಲ್ಲಿ ಶಾಲೆ ಮೇಲೆ ಹೂತಿ ದಾಳಿ- ಅಹದ್ ರುಫೈದಾದಲ್ಲಿ ಏಷ್ಯಾ ಮೂಲದ ವ್ಯಕ್ತಿಗೆ ಗಾಯ
ಸೌದಿ: ವಿವಿಧ ಪ್ರಾಂತ್ಯಗಳಲ್ಲಿ ಮಳೆ, ಪ್ರವಾಹ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್