janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಮಡಿಕೇರಿ: ಕೊಂಡಂಗೇರಿ ದರ್ಗಾಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಬಹು ಮರ್ಹೂಂ ಅಸಯ್ಯಿದ್ ಅಬ್ದುಲ್ಲಾಹಿ ಸಖಾಫ್ ಅಲ್ ಹಳ್ರಮಿ ಹಾಗೂ ಪವಾಡ ಪುರುಷರುಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮಖಾಂ ಉರೂಸ್ ತಾ.22 ರಿಂದ 29ರ ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಕೊಂಡಗೇರಿ ಸುನ್ನಿ ಮುಸ್ಲಿಂ ಜಮಾಅತ್‍ನ ಸಂಚಾಲಕ ಹನೀಫ್ ಸಖಾಫಿ ಈ ಬಗ್ಗೆ ಮಾಹಿತಿ ನೀಡಿ, ತಾ. 22 ರಂದು ಮಧ್ಯಾಹ್ನ 2 ಗಂಟೆಗೆ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಸೀದಿಯ ಮುಖ್ಯ ದ್ವಾರದ ಉದ್ಘಾಟನೆ ನಡೆಯಲಿದ್ದು, ಇದರ ನೇತೃತ್ವವನ್ನು ಕಣ್ಣೂರು ಮಡಕರದ ಸುಹೈಲ್ ಸಖಾಫ್ ತಂಙಳ್ ಮತ್ತು ಕೊಂಡಂಗೇರಿ ಮುದರಿಸ್ ಉಮ್ಮರ್ ಸಖಾಫಿ ವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್‍ನ ಅಧ್ಯಕ್ಷರಾದ ಕೆ.ಕೆ. ಯೂಸುಫ್ ಹಾಜಿ ಹಾಗೂ ಉಪಾಧ್ಯಕ್ಷರಾದ ಎಂ.ಎಂ. ಮೊಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್‍ಗೆ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ 8.30 ಗಂಟೆಗೆ ಆಯೋಜಿತ ಕೊಂಡಂಗೇರಿ ಉಮ್ಮರ್ ಸಖಾಫಿ ಅವರು ನಡೆಸಿಕೊಡಲಿರುವ ಮತ ಪ್ರಭಾಷಣವನ್ನು ಕೊಂಡಂಗೇರಿ ಕೆಡಿಎಂಒ ವ್ಯವಸ್ಥಾಪಕರಾದ ಅಲ್‍ಹಾಜ್ ಶಾದುಲಿ ಫೈಝಿ ಉದ್ಘಾಟಿಸಲಿದ್ದಾರೆ.ಅಂದು ನಡೆಯುವ ಜಲಾಲಿಯ ರಾತೀಬ್ ನೇತೃತ್ವವನ್ನು ಕುಂಬೊಲ್ ಅಸ್ಸಯ್ಯಿದ್ ಜಹಫರ್ ಸಾದಿಕ್ ತಂಙಳ್ ವಹಿಸಲಿದ್ದಾರೆಂದು ಮಾಹಿತಿ ನೀಡಿದರು.

ತಾ.23 ರಂದು ರಾತ್ರಿ 8.30 ಗಂಟೆಗೆ ಆಟೀರಿ ತಂಙಳ್ ಸಯ್ಯದ್ ಅಬ್ದುಲ್ ರಹ್ಮಾನ್ ಧಾರಿಮಿ ‘ಮರಣಂ’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದು, ತಾ. 24 ರಂದು ರಾತ್ರಿ 8.30 ಗಂಟೆಗೆ ಪಾಂಡಿಕಾಡ್ ಝಬೈರ್ ಲತೀಫಿ “ಮಾತಾ-ಪಿತೃ”(ಮಾದಾ ಪಿದಾಕಳ್) ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದರೆಂದು ತಿಳಿಸಿದರು.

ತಾ. 25 ರಂದು ಬೆಳಿಗ್ಗೆ 5 ಗಂಟೆಗೆ ಮೌಲೂದ್ ಪಾರಾಯಣ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಧಾರ್ಮಿಕ ಪ್ರವಚನ ನಡೆಯಲಿದ್ದು, ಇದನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿಯಾದ ಅಲ್‍ಹಾಜ್ ಕೆ.ಎ. ಮಹಮೂದ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಮುಖ್ಯ ಭಾಷಣವನ್ನು ಕೂಟಂಬಾರ ಅಬ್ದುಲ್ ರೆಹಮಾನ್ ದಾರಿಮಿ ನಡೆಸಿಕೊಡಲಿ ದ್ದಾರೆ. ಅಂದು ಸಂಜೆ 4 ಗಂಟೆಗೆ ಅನ್ನದಾನ ನಡೆಯಲಿದೆ. ಅಂದು ರಾತ್ರಿ 8.30 ಗಂಟೆಗೆ ಕಾಂದಪುರಂನ ಡಾ. ಎ.ಪಿ. ಅಬ್ದುಲ್ ಹಖೀಮ್ ಅಝ್‍ಹರಿ ಮುಖ್ಯ ಭಾಷಣ ಮಾಡಲಿದ್ದಾರೆ.

ತಾ. 26 ರಂದು ರಾತ್ರಿ 8.30ಕ್ಕೆ ಕಳಸ ನೌಫಲ್ ಸಖಾಫಿ “ಜೌಲಿ ಯಾಕಳುಂ ಕರಾಮತುಂ” ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ತಾ. 27 ರಂದು ರಾತ್ರಿ 8.30 ಗಂಟೆಗೆ ಕಿಲ್ಲೂರ್ ಹಮೀದ್ ಫೈಝಿ “ಸೈಬರ್ ಯುಗದಲ್ಲಿ ಯುವಕ-ಯುವತಿಯರು” ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ತಾ. 28 ರಂದು ರಾತ್ರಿ 8.30ಕ್ಕೆ ಗೂಡಲ್ಲೂರ್ ಮಶ್‍ಹೂದ್ ಸಖಾಫಿ ‘ಅಯಲ್‍ಕಾರೆ ಸ್ನೇಹಿಕುಗ’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆಂದು ವಿವರಗಳನ್ನಿತ್ತರು.

ತಾ.29 ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಭಾಷಣಕಾರ ರಾಗಿ ಕುಟ್ಟಿಯಾಡಿ ಸಿರಾಜುಲ್ ಹುದಾ ಜನರಲ್ ಸೆಕ್ರೆಟರಿ ಪೇರೋಡ್ ಅಬ್ದುಲ್ ರೆಹ್‍ಮಾನ್ ಸಖಾಫಿ ಭಾಗವಹಿಸಲಿದ್ದಾರೆ. ಉರೂಸ್ ನಡೆಯುವ ಪ್ರತಿ ದಿನ ರಾತ್ರಿ 7 ಗಂಟೆಗೆ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ಹಾಗೂ ಎಂ.ಎಸ್. ಎಸ್.ಎ ದರ್ಸ್ ವಿದ್ಯಾರ್ಥಿ ಗಳಿಂದ ಬುರ್ದಾ ಮಜ್ಲಿಸ್ ಇರುತ್ತದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್‍ನ 2ನೇ ತಕ್ಕ ಮುಖ್ಯಸ್ಥರಾದ ಕೆ.ಎಂ.ಯಾಹ್ಯಾ, ಉಪಾಧ್ಯಕ್ಷರಾದ ಎಂ.ಎಂ. ಮೊಹಮ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಪಿ.ಇ. ಶಾದುಲಿ, ಸದಸ್ಯರಾದ ಪಿ.ಎ. ಅಬ್ಬಾಸ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com