ಮನಾಮ : ನೊಂದವರ ಬಾಳಿನ ಅಭಯ ಕೇಂದ್ರ ಉಜಿರೆ ಮಲ್ಜಹ್ ಸಂಸ್ಥೆಯ ಬಹರೈನ್ ಸಮಿತಿಯ ಮಹಾಸಭೆಯು 15-03-2019 ಶುಕ್ರವಾರದಂದು ಉಮ್ಮುಲ್ ಹಸ್ಸಂ ಜಮಾಲುದ್ದೀನ್ ವಿಟ್ಟಲ್ ನಿವಾಸದಲ್ಲಿ ಮಲ್ಜಹ್ ಬಹರೈನ್ ಸಮಿತಿಯ ಅಧ್ಯಕ್ಷರಾದ ಹನೀಫ್ ಕಿನ್ಯರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಮಲ್ಜಹ್ ಸಾರಥಿ ಬಹು ಅಸ್ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ತಂಗಳ್ರವರು ದುವಾಕ್ಕೆ ನೇತೃತ್ವ ನೀಡಿದರು.
ಕೆ.ಸಿ.ಎಫ್ ಐಎನ್ಸಿ ರಿಲೀಫ್ ವಿಂಗ್ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್ ಸಭೆಯನ್ನು ಉದ್ಘಾಟಿಸಿದರು. ಮಲ್ಜಹ್ ಬಹರೈನ್ ಸಮಿತಿ ಓರ್ಗನೈಸರ್ ಕಲಂದರ್ ಷರೀಫ್ ಕಕ್ಕೆಪದವು ಸ್ವಾಗತ ಭಾಷಣ ಮಾಡಿದರು. ಮಲ್ಜಹ್ ರೂವಾರಿ ಅಸ್ಸಯ್ಯಿದ್ ಜಲಾಲುದ್ದೀನ್ ಉಜಿರೆ ತಂಗಳ್ ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಮಗ್ರ ವಿವರಣೆಯನ್ನು ನೀಡಿದರು.
ಎಂ.ಹೆಚ್.ಮದನಿಯವರು ಮಲ್ಜಹ್ ಬಹರೈನ್ ಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಹರೈನ್ ಸಮಿತಿ ಕೋಶಾಧಿಕಾರಿ ಹನೀಫ್ ಜಿ.ಕೆ. ಲೆಕ್ಕ ಪತ್ರ ವರದಿಯನ್ನು ಮಂಡಿಸಿದರು.
ಹಳೇ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಹೊಸ ಸಮಿತಿಯನ್ನು ರೂಪಿಸಲಾಯ್ತು.
ನೂತನ ಸಮಿತಿ ಪಧಾಧಿಕಾರಿಗಳು
ಅಧ್ಯಕ್ಷರು : ಉಸ್ಮಾನ್ ಸಂಪ್ಯ
ಪ್ರಧಾನ ಕಾರ್ಯದರ್ಶಿ : ಅಬ್ದುಸ್ಸಮದ್ ಉಜಿರೆಬೆಟ್ಟು
ಕೋಶಾಧಿಕಾರಿ : ಹನೀಫ್ ಗುರುವಾಯನಕೆರೆ.
ಉಪಾಧ್ಯಕ್ಷರು:-ಹಾರಿಸ್ ಒಕ್ಕೆತ್ತೂರ್, ಹಾರಿಸ್ ಸಂಪ್ಯ
ಜೊತೆ ಕಾರ್ಯದರ್ಶಿ:-ಸೂಫಿ ಪೈಂಬಚ್ಚಾಳ್, ಮನ್ಸೂರ್ ಬೆಳ್ಮ
ನಿರ್ದೇಶಕರು:ಜಮಾಲುದ್ದೀನ್ ವಿಟ್ಲ,
ಅಲಿ ಮುಸ್ಲಿಯಾರ್, ಹನೀಫ್ ಕಿನ್ಯ
ಏರಿಯಾ ಕಾರ್ಯದರ್ಶಿಗಳು
ಮನಾಮ:- ಸಮದ್ ಉಜಿರೆಬೆಟ್ಟು, ಶರೀಫ್ ಬೋಂದೆಳ್
ಮುಹರ್ರಕ್:-ರಶೀದ್ ಈಶ್ವರ ಮಂಗಲ ,ಅಝೀಝ್ ಪುರುಸಂಗೋಡಿ
ಗುದೈಬಿಯ:-ಸೂಫಿ ಪೈಂಬಚ್ಚಾಲ್
ಝಕರಿಯ ಎನ್ಮೂರ್
ರಿಫ:- ಅಲಿ ಹಾಜಿ ಚೆನ್ನಾರ, ಅಯಾಜ್ ರಿಫ
ಸಲ್ಮಾಬಾದ್:-ಮನ್ಸೂರ್ ಬೆಳ್ಮ, ಆಸಿಫ್ ರೆಂಜಾಡಿ.
ಬುದಯ್ಯ;- ಶರೀಫ್ ಆತೂರು.
ನೂತನ ಅಧ್ಯಕ್ಷ ಉಸ್ಮಾನ್ ಸಂಪ್ಯ ರವರು ಮಾತನಾಡುತ್ತಾ ಮಲ್ಜಹ್ ಸಮಿತಿಯ ಕಾರ್ಯಾಚರಣೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಎ ಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.
ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ನೂತನ ಸಮಿತಿಗೆ ಶುಭ ಹಾರೈಸಿದರು.
ಹನೀಫ್ ಜಿ.ಕೆ ಧನ್ಯವಾದಗೈದರು.