janadhvani

Kannada Online News Paper

ರಿಯಾದ್:ಕೆಸಿಎಫ್ ನೂತನ ನಖೀಲ್ ಸೆಕ್ಟರ್ ಅಸ್ತಿತ್ವಕ್ಕೆ

ಈ ವರದಿಯ ಧ್ವನಿಯನ್ನು ಆಲಿಸಿ


ರಿಯಾದ್: ಕೆ.ಸಿ.ಎಫ್ ರಿಯಾದ್ ಝೋನ್ ಗೊರ್ನಾಥ ಸೆಕ್ಟರ್ ಅಧೀನದಲ್ಲಿ ನೂತನ ನಖೀಲ್ ಯೂನಿಟ್ ರಚನೆ ಹಾಗೂ ಸ್ವಲಾತ್ ಮಜ್ಲಿಸ್ 14/03/2019 ರಂದು ಜನಾಬ್ ಸಿತಾರ ಮುಹಮ್ಮದ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಹ್’ಲುಸುನ್ನತ್ತಿ ವಲ್ ಜಮಾಅತಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ, ಕೆ.ಸಿ.ಎಫ್ ನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸಬೇಕೆಂದು ವಿನಂತಿಸಿ ನವಾಝ್ ಚಿಕ್ಕಮಗಳೂರು ಸ್ವಾಗತ ಭಾಷಣ ಮಾಡಿದರು.

ಕೆಸಿಎಫ್ ಸೌದಿ ಅರೇಬಿಯಾ ಸಂಘಟನೆ ವಿಭಾಗ ಅಧ್ಯಕ್ಷರು ಸಿದ್ದೀಕ್ ಸಖಾಫಿ ಪೆರುವಾಯಿಯವರು ಇಂದಿನ ಯುವ ಸಮೂಹ ಯಾರ ಭಯವಿಲ್ಲದೆ ಇಂಟರ್‌ನೆಟ್ ಎಂಬ ಮಾಯಾಲೋಕದಲ್ಲಿ ಫೇಸ್ಬುಕ್,ವಾಟ್ಸಫ್,ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುವಾಗ ಕೆಸಿಎಫ್ ಸಂಘಟನೆಯಲ್ಲಿ ಇರುವ ಕಾರ್ಯಕರ್ತರ ವರ್ತಮಾನ, ಭವಿಷ್ಯಗಳನ್ನು ಸುಂದರವಾಗಿ ರೂಪಿಸಲು ಅದರ ಜವಾಬ್ದಾರಿ ತನ್ನ ಹೆಗಲ ಮೇಲೆ ಹೊತ್ತು ಕೆಸಿಎಫ್ ನ ಉನ್ನತಿಗಾಗಿ ಎಲ್ಲರೂ ಪ್ರಯತ್ನಿಸಬೇಕೆಂದು ಕರೆ ನೀಡಿ, ಇಬ್ಲೀಸ್‌’ನ ವಂಚನೆಗೊಳಗಾಗದೆ ತಮ್ಮ ಅಮೂಲ್ಯ ಸಮಯವನ್ನು ದೀನೀ ಸೇವೆಗಾಗಿ ಉಪಯೋಗಿಸಬೇಕೆಂದು ನೆನಪಿಸುತ್ತ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೆ.ಸಿ.ಎಫ್ ಎಂಬ ಮೂರು ಅಕ್ಷರಗಳನ್ನು ನೋಡುವಾಗಲೆ ಅದ್ಯಾಕೋ ಮನಸ್ಸಿಗೆ ರೋಮಾಂಚನ,ಮರಳುಗಾಡಿನಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರಿಗೆ ಹೆಮ್ಮೆ,ನೆಮ್ಮದಿಯ ನಾಳೆಯ ಬದುಕಿಗಾಗಿ ಕೆ.ಸಿ.ಎಫ್ ನೊಂದಿಗೆ ಕೈ ಜೋಡಿಸಿ, ನಮ್ಮನ್ನು ನಾವು ಸಂಘಟನೆಯಲ್ಲಿ ತೊಡಗಿಸಿಕೊಂಡು ಇನ್ನಷ್ಟು ಬಲಿಷ್ಟಗೊಳಿಸಬೇಕೆಂದು ರಿ-ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಇಸ್ಮಾಯಿಲ್ ಕನ್ನಂಗರ್ ರವರು ವಿವರಿಸಿ 2019-2021 ನೇ ಸಾಲಿನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.

ಅಧ್ಯಕ್ಷರು: ಮುಸ್ತಫಾ ವಿಟ್ಲ.

ಉಪಾಧ್ಯಕ್ಷರುಗಳು:
ಶರೀಫ್ ಪಲ್ಲತಾರು,
ಖಲಂದರ್ KMS.

ಪ್ರಧಾನ ಕಾರ್ಯದರ್ಶಿ: ಇಲ್ಯಾಸ್ ಮೂಳೂರು.

ಜೊತೆ ಕಾರ್ಯದರ್ಶಿಗಳು: ರಝ್ಝಾಖ್ ಬೆಳ್ಳಾರೆ, ಜಾಬಿರ್ ಕರಿಂಬಿಲ.

ಕೋಶಾಧಿಕಾರಿ: ಝಹೀದುಲ್ಲಾ ಬೆಂಗಳೂರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ನವಾಝ್ CKM, ಇಸ್ಮಾಯಿಲ್ ದೇರಳಕಟ್ಟೆ, ಮಜೀದ್ ಮಂಜನಾಡಿ, ಅಜ್ಮಾನ್ ತಲಪಾಡಿ, ಇಬ್ರಾಹಿಂ ಪಂಜಿಲ, ಝಕರಿಯಾ ಬೈರಿಕಟ್ಟೆ, ರಫೀಕ್ ತೀರ್ಥಹಳ್ಳಿ, ನವಾಝ್ ಪೆರುವಾಯಿ, ಅಶ್ರಫ್, ಫಾರೂಕ್ ಮಂಚಕಲ್, ಜಾಫರ್ UP, ಖಾದರ್ ವಿಟ್ಲ ಎಂಬವರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com