ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ರಿಯಾದ್ ಝೋನಿನ ಬದಿಯ ಸೆಕ್ಟರ್ ಅಧೀನದಲ್ಲಿ 4ನೇ ಶಾಖೆಯಾಗಿ ವಾದಿ ಲೆಬನ್ ಯುನಿಟ್ ಅಸ್ತಿತ್ವಕ್ಕೆ ತರಲಾಯಿತು.
ಕೆ.ಸಿ.ಎಫ್ ಬದಿಯ ಸೆಕ್ಟರ್ ಅಧ್ಯಕ್ಷರಾದ ಉಮ್ಮರ್ ಹಾಜಿ ಅಳಕೆಮಜಲ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಸ್ಸಲಾಂ ಸುಳ್ಯ, ಉಪಾಧ್ಯಕ್ಷರುಗಳಾಗಿ ಶಫೀಕ್ ಅಹ್ಸನಿ ಪಟ್ಲ, ಅಬ್ದುಲ್ ಕರೀಂ ಮುಸ್ಲಿಯಾರ್ ಕೊಡಗು, ಪ್ರಧಾನ ಕಾರ್ಯದರ್ಶಿ ನಝೀರ್ ಕೃಷ್ಣಾಪುರ, ಜತೆ ಕಾರ್ಯದರ್ಶಿಗಳಾಗಿ ಸಾದಿಕ್ ಸವನಾಲು, ಇರ್ಫಾನ್ ಕಾವಲ್ಕಟ್ಟೆ, ಕೋಷಾಧಿಕಾರಿಯಾಗಿ ಅಬ್ದುರ್ರಝ್ಝಾಕ್ ಪುತ್ತೂರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮೀರ್ ಕಲ್ಲಾಪು, ರಿಯಾ ನೆಲ್ಯಾಡಿ, ಸದಕತ್ ಸವನಾಲು, ಝುಬೈರ್ ಮೈಸೂರು, ಫಾರೂಕ್ ಬೋಂದೆಲ್, ಅಬ್ದುಲ್ ಶಮೀರ್ ಕೃಷ್ಣಾಪುರ, ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಗಳಾಗಿ ಕೆಸಿಎಫ್ ರಿಯಾದ್ ಝೋನಲ್ ನಾಯಕರಾದ ಫಾರೂಕ್ ಸಅದಿ, ನಿಝಾಂ ಸಾಗರ್ ರವರು ಆಗಮಿಸಿ ನೂತನ ಸಮಿತಿ ರಚಿಸಿ ಸಂಘಟನೆಯ ನೀತಿ ನಿಯಮ ಕುರಿತಂತೆ ಮಾಹಿತಿ ನೀಡಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತಂದರು. ಈ ಸಂದರ್ಭದಲ್ಲಿ ಕೆಸಿಎಫ್ ನಾಯಕರಾದ ಯೂಸುಫ್ ಕಳಂಜಿಬೈಳ್, ಸೆಕ್ಟರ್ ಪ್ರ,ಕಾರ್ಯದರ್ಶಿ ಮಜೀದ್ ವಿಟ್ಲ, ಹಮೀದ್ ಮುಲ್ಕಿ, ಶಫೀಕ್ ಮುಲ್ಕಿ ಮೊದಲಾದವರು ಉಪಸ್ಥಿತರಿದ್ದರು.
ಬಶೀರ್ ಮೂರುಗೋಳಿ ಸ್ವಾಗತಿಸಿ ರಿಯಾ ನೆಲ್ಯಾಡಿ ವಂದಿಸಿದರು.
ವರದಿ:ರಿಯಾ ನೆಲ್ಯಾಡಿ















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ