janadhvani

Kannada Online News Paper

ರಜಬ್ 27 ಪುಣ್ಯ ಭೂಮಿಯಲ್ಲಿ : ಕೈಗೆಟಕುವ ದರದಲ್ಲಿ ಉಮ್ರಾ ಯಾತ್ರೆಗೆ ಸುವರ್ಣಾವಕಾಶ

ಈ ವರದಿಯ ಧ್ವನಿಯನ್ನು ಆಲಿಸಿ


ಅಲ್ಲಾಹನಿಗೆ ಬೇಕಾಗಿ ಹಜ್ಜ್ ಮತ್ತು ಉಮ್ರಾ ಪೂರ್ತಿಗೊಳಿಸಿರಿ. ಅಲ್ಲಾಹನ ಸುಂದರವಾದ ಸಂದೇಶ. ನನಗೆ ಬೇಕಾಗಿ ಹಜ್ಜ್ ಮತ್ತು ಉಮ್ರಾ ಪೂರ್ತಿಗೊಳಿಸಿರಿ ಎಂದು. ಸತ್ಯ ವಿಶ್ವಾಸಿಯ ಜೀವನದಲ್ಲಿ ಅತ್ಯಂತ ಸಂತಸ-ಸಂತೋಷ ಸನ್ನಿವೇಶವಾಗಿದೆ ಹಜ್ಜ್ ಮತ್ತು ಉಮ್ರಾ. ಅದರ ಮಹತ್ವಗಳನ್ನು ವಿವರಿಸುವ ಹಲವಾರು ಹದೀಸ್’ಗಳನ್ನು ಕೂಡಾ ಕಾಣಲು ಸಾಧ್ಯವಾಗುತ್ತದೆ. ಅಷ್ಟಕ್ಕೂ ಪುಣ್ಯವಿರುವ ಆರಾಧನೆಯಾಗಿದೆ ಹಜ್ಜ್ ಮತ್ತು ಉಮ್ರಾ.

ಹೌದು ಪ್ರವಾಸಿ ಬದುಕು ಸವೆಸುವ ನಾವು ಊರಿಗೆ ಹೋಗಲು ಅಣಿಯಾದರೆ ನಮ್ಮ ಮುದ್ದು ಕಂದಮ್ಮಗಳ ಮನಸ್ಸನ್ನು ಸಂತೋಷಗೊಳಿಸಲಿಕ್ಕಾಗಿ ಅವರಿಗಿಷ್ಟವಾದ ಟಾಬ್, ಟೋಯ್ಸ್, ಡ್ರೆಸ್ಸ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಸಾವಿರಾರು ದಿರ್ಹಮ್ ಖರ್ಚು ಮಾಡಿ ಖರೀದಿಸುತ್ತೇವೆ.
ಪ್ರಿಯ ಪತ್ನಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿನ್ನ ಒಡವೆಗಳನ್ನು ಖರೀದಿಸಿ ಕೂಡಿಹಾಕುತ್ತೇವೆ!

ಮನೆಮಂದಿ ಹೆಸರಲ್ಲಿ ಬೇಕಾದದ್ದು, ಬೇಡವಾದದ್ದು ಎಲ್ಲವನ್ನು ಜಮಾಮಾಡುತ್ತೇವೆ. ಅದಕ್ಕಾಗಿ ಸಾವಿರಗಟ್ಟಲೆ ದಿರ್ಹಮ್ ನೀರಿನಂತೆ ಪೋಲು ಮಾಡುತ್ತೇವೆ.
ಆದರೆ ಬರೀ ಒಂದು ಸಾವಿರ ಮಾತ್ರ ಖರ್ಚು ತಗಲುವ ಉಮ್ರಾ ಯಾತ್ರೆ ಮಾಡುವುದರಲ್ಲಿ ಮಾತ್ರ ನಾವು ಎಡವಿದ್ದೇವೆ!
ಯಾಕೆ ಹೀಗಾಗಿದೆ?
ಮುಂದಿನ ತಿಂಗಳು… ಮುಂದಿನ ವರ್ಷ ಹೀಗೆ ಅನಂತವಾಗಿ ಹಿಂದೂಡುವುದು ಯಾಕೆ? ಅದೂ ಕಡ್ಡಾಯ ಕರ್ಮವೊಂದನ್ನು!

ಇಷ್ಟೆಲ್ಲಾ ಅನುಗ್ರಹ ನೀಡಿದ ಅಲ್ಲಾಹನ ಭವನವನ್ನೊಮ್ಮೆ ಸಂದರ್ಶಿಸಲು ನಮ್ಮ ಮನಸ್ಸು ಯಾಕೆ ತವಕಿಸುವುದಿಲ್ಲ?
ಸರ್ವಸ್ವವೂ ನೀಡಿದ ಅಲ್ಲಾಹನ ಪವಿತ್ರ ಕ‌ಅಬಾವನ್ನು ಕಣ್ಣಾರೆ ನೋಡಬೇಕೆಂದು
ನನ್ನ ಮನಸ್ಸಿಗೆ ಚಿಂತೆ ಬರುವುದಿಲ್ಲ ಅಂದ್ರೆ ಆ ಹೃದಯ ಅದೆಷ್ಟು ಕ‌ಠೋರ!
(ಅಲ್ಲಾಹನು ಕಾಪಾಡಲಿ)

ಇಲ್ಲ ;
ನಾವು ಬದಲಾಗಲೇ ಬೇಕು.
ಖಂಡಿತವಾಗಿಯೂ ನಮ್ಮ ಮನಸ್ಸನ್ನು ಪರಿವರ್ತಿಸಲೇ ಬೇಕು.
ನಮ್ಮ ಮೇಲೆ ಕಡ್ಡಾಯವಾದ ಉಮ್ರಾ ಕರ್ಮವನ್ನು ಉದಾಸೀನತೆಯಿಂದಾಗಿ ಮುಂದೂಡಿ ಕೊನೆಗೆ ಮಯ್ಯಿತ್ ಆದರೆ, ಕಡ್ಡಾಯ ಉಮ್ರಾ/ಹಜ್ ಬಾಧ್ಯತೆಗಳನ್ನು ತೀರಿಸದೆ ಸೊತ್ತು ಪಾಲು ಮಾಡುವಂತಿಲ್ಲ!

ನಾನು ಮಯ್ಯಿತ್ ಆದರೆ ನನ್ನ ಸಾಲ ಬಾಧ್ಯತೆ ತೀರಿಸುವುದು ವಾರೀಸುದಾರರಿಗೆ ಕಡ್ಡಾಯವಾಗಿದ್ದರೂ ಅದಕ್ಕಿಂತ ಹೆಚ್ಚು ಪ್ರಾಧಾನ್ಯತೆ ನೀಡಬೇಕಾದುದು ಹಜ್ ಉಮ್ರಾದಂತಹ ಧರ್ಮ ಸಂಬಂಧಿತ ಬಾಧ್ಯತೆಗಳಿಗಾಗಿದೆಯೆಂದು ಪುಣ್ಯ ರಸೂಲ್ ಹೇಳಿದ್ದಾರೆ.
ಅಷ್ಟೊಂದು ಪ್ರಾಧಾನ್ಯತೆಯಿಂದ ಕೂಡಿದ ಸಂಗತಿಯಾಗಿದೆ ಹಜ್ ಅಥವಾ ಉಮ್ರಾ.

ಇಬ್ನ್ ಹಜರ್ (ರ) ಹೇಳುವುದು ನೋಡಿ,
ಹಜ್ ಉಮ್ರಾ ಕರ್ಮಕ್ಕಾಗಿ
ಜೀವನ ಮಾರ್ಗವಾದ ವ್ಯಾಪರ, ಇತರ ಸಂಪಾದನೆ, ಮಾತ್ರವಲ್ಲ ಭೂ ಸಂಪತ್ತನ್ನು ಬಳಸುವುದು ಕಡ್ಡಾಯವಾಗಿದೆ!
ವ್ಯಾಪಾರ ಸಾಮಾಗ್ರಿಗಳು, ತೋಟಗಳು, ಕೃಷಿ ಭೂಮಿ ಮುಂತಾದುವುಗಳೆಲ್ಲವೂ ಭವಿಷ್ಯದ ಆದಾಯ ಮಾರ್ಗಗಳಾಗಿವೆ. ಹಜ್ಜ್ ಉಮ್ರಾ ಕಡ್ಡಾಯವಾಗುವುದರಲ್ಲಿ ಭವಿಷ್ಯದ ಆದಾಯ ಮಾರ್ಗಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಆದಾಯ ಮಾರ್ಗಗಳಾದ ವ್ಯಾಪಾರ ಸಾಮಾಗ್ರಿಗಳು ಹಾಗೂ ತೋಟಗಳನ್ನು ಹಜ್ ಹಾಗೂ (ಉಮ್ರಾ) ನಿರ್ವಹಿಸಲಿಕ್ಕಾಗಿ ಮಾರಾಟ ಮಾಡುವುದು ಕಡ್ಡಾಯವಾಗಿದೆ.
(ತುಹ್ಫಾ 4-20/21)

ನಾವು ಸಂಪತ್ತು ಕೂಡಿಹಾಕುವ ಪೈಪೋಟಿಯಲ್ಲಿದ್ದೇವೆ. ಅದರೆಡೆಯಲ್ಲಿ ಕನಿಷ್ಟ ಉಮ್ರಾವನ್ನಾದರೂ ನಿರ್ವಹಿಸದೆ ಬೇಕಾಬಿಟ್ಟಿಯಾಗಿ ಬದುಕುತ್ತಿದ್ದೇವೆ. ನಾವು ಹಜ್ ಅಥವಾ ಉಮ್ರಾದ ಪಾವಿತ್ರ್ಯತೆ ಬಗ್ಗೆ ಗಮನ ಹರಿಸುವುದೇ ಇಲ್ಲ. ಇದಕ್ಕೊಂದು ಬದಲಾವಣೆ ಬರಲೇಬೇಕು.
ಹಜ್ ಉಮ್ರಾ ಕಡ್ಡಾಯವಾದ ವ್ಯಕ್ತಿ ಮರಣಹೊಂದುವಾಗ ಆತನ ಬಳಿ ಸೊತ್ತು ಇಲ್ಲದಿದ್ದರೆ ಆತನ ಸಂಭಂಧಿಕರ ಮೇಲೆ ಅದು ಕಡ್ಡಾಯವಾಗುತ್ತದೆಯೆಂದು ಇಸ್ಲಾಂ ಹೇಳುವಾಗ ನಾವೇಕೆ ಇಷ್ಟೊಂದು ಮಹತ್ತರವಾದ ಕರ್ಮದ ಬಗ್ಗೆ ಅಸಡ್ಡೆ ತೋರಿಸುತ್ತಿರುವುದು.?

ಮುಸ್ಲಿಮರಾದ ನಮ್ಮ ಪಾಲಿಗೆ ಮಕ್ಕಾ ನಾಡು ಪವಿತ್ರ ತಾನೇ?
ಕ‌ಅಬಾ ನಮ್ಮ ಖಿಬ್ಲಾ ತಾನೆ?
ಮಖಾಂ ಇಬ್ರಾಹಿಂ ನೋಡಬೇಕೆಂಬ ಆಸೆ ಇಲ್ಲವೇ?
ಜೊತೆಗೆ ಅಲ್ಲೆಲ್ಲಾ ನಡೆಸುವ ಪ್ರಾರ್ಥನೆಗೆ ಉತ್ತರ ಅಲ್ಲಾಹನು ನೀಡಿಯೇ ತೀರುವನು.

ನಿಮಗಾಗಿ ಸುಸಜ್ಜಿತ ಸೌಕರ್ಯ ಗಳೊಂದಿಗೆ‌, ಪರಿಣಿತ ಅಮೀರ್ ಗಳ ಉನ್ನತ ಸೇವೆಯೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್ (KCF UAE) ನಿಮಗಾಗಿ ಉಮ್ರಾ ಝಿಯಾರತ್ ಟೂರನ್ನು ಸಂಘಟಿಸಿದೆ…..

ನಮ್ಮನ್ನು ಸೃಷ್ಠಿಸಲು ಕಾರಣರಾದ ಪ್ರವಾದಿ ಸ್ವಲ್ಪಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ತಲುಪುವುದು ಸತ್ಯ ವಿಶ್ವಾಸಿಯ ಅಚಂಚಲವಾದ ಪ್ರೇಮವಾಗಿದೆ. ಕೆ.ಸಿ.ಎಫ್ ಉಮ್ರಾ ಅದಕ್ಕೂ ಅವಕಾಶ ಕಲ್ಪಿಸುತ್ತಿದೆ. ಅದೂ ರಜಬ್ 27 ರಂದು ಪುಣ್ಯ ಮದೀನಾದಲ್ಲಿ. ಪ್ರವಾದಿ ಸ್ವಲ್ಪಲ್ಲಾಹು ಅಲೈಹಿ ವಸಲ್ಲಮರು ಜಿಬ್ರೀಲ್ ಅಲೈಹಿಸ್ಸಲಾಮ್ ರೊಂದಿಗೆ ನಡೆಸಿದ ಅದ್ಬುತ ಯಾತ್ರೆಯಾದ ಇಸ್ರಾ ಮೀರಾಜ್,ಇಸ್ಲಾಂನ ಆಧಾರ ಸ್ಥಂಭಗಳಲ್ಲಿ ಒಂದಾದ ಐದು ವಕ್ತ್ ನಮಾಝೆ ಕಡ್ಡಾಯಗೊಳಿಸಲ್ಪಟ್ಟ ದಿನದಂದು ಅನುಗ್ರಹೀತ ಪುಣ್ಯ ಭೂಮಿಯಲ್ಲಿ.
ಮಾರ್ಚ್ 27 ರಂದು ಹೊರಟು ಎಪ್ರಿಲ್ 6 ರಂದು ತಲುಪಲಿದೆ.

ಇಂದೇ ಬುಕಿಂಗ್ ಮಾಡಿ,
ನಿಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಿ..
ಹೊರಡುವ ದಿನಾಂಕ : 27- ಮಾರ್ಚ್- 2019..
ಚೀಫ್ ಅಮೀರ್- ಸೈಯ್ಯಿದ್ ಮುಸ್ತಫಾ ಪೂಕೋಯ ಅಲ್ ಬುಖಾರಿ ಮಿಸ್ಬಾಹಿ..

ಇಂದೇ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ..
ದುಬೈ ಸೌತ್ ಝೋನ್ – +971544524549
(Burdubai, AL qouz,Satwa jabal ali)

ದುಬೈ ನಾರ್ತ್ ಝೋನ್ – +971527341313
(Deira, horlanz, qisais..)

ಅಬುಧಾಬಿ – +971508291383

ಅಬುಧಾಬಿ, ಮುಸಫ್ಪ – +971558029105

ಶಾರ್ಜ +971507947665

ಅಜ್ಮಾನ್ – +971588311272

error: Content is protected !! Not allowed copy content from janadhvani.com