ಮಜ್ಲಿಸ್ ಎಜ್ಯು ಪಾರ್ಕ್’ನಲ್ಲಿ ಮುಡಿಪು’ವಿನ ಸುನ್ನೀ ಆಸ್ಥಾನ ಕೇಂದ್ರ ಉದ್ಘಾಟನೆ

ಮುಡಿಪು: (ಮಾರ್ಚ್ 11) ಮುಡಿಪು ಪರಿಸರದ ಸುನ್ನೀ ಕಾರ್ಯಕರ್ತರ ಅಭಿಲಾಷೆ ನಮ\nಗೊಂದು ಅಸ್ಥಾನ ಬೇಕು ಎಂದಾಗಿತ್ತು. ಅದು ಈಗ ಈಡೇರಿದೆ ಸುನ್ನೀ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಆಸ್ಥಾನ ಕೇಂದ್ರ ಬಹಳ ಮುಖ್ಯ,ಅದನ್ನು ಸಯ್ಯದ್ ಮುಹಮ್ಮದ್ ಅಶ್ರಪ್ ಅಸ್ಸಖಾಪ್ ಮದನಿ ಅದೂರು’ ರವರ ಎಜು ಪಾರ್ಕ್ ಮುಡಿಪು’ ವಿನಲ್ಲಿ ಕಾರ್ಯಾಚರಿಸುತ್ತಿರುವ ಝಹ್ರತುಲ್ ಕುರಾನ್’ನ ಕಟ್ಟಡದಲ್ಲಿ ನಿರ್ಮಿಸಿ ಕೊಟ್ಟಿದ್ದು,ಅದರ ಉದ್ಘಾಟನಾ ಸಮಾರಂಭವು ಮಂಗಳವಾರದಂದು ಖುರ್ರತ್ತುಸ್ಸಾದಾತ್ ಸಯ್ಯಿದ್ ಕೂರ್ ತಂಙಳ್ ನಿರ್ವಹಿಸಿದರು, ಸಯ್ಯದ್ ಅದೂರು ತಂಙಳ್’ರವರು ಸ್ವಾಗತಿಸಿ ಒಮ್ಮತ ದಿಂದ ಮುಂದೆ ಸಾಗಲಿ ಎಂದು ಆಶೀರ್ವದಿಸಿದರು.S.k.ಅಬ್ದುಲ್ ಕಾದರ್ ಹಾಜಿ, ಮುಹಮ್ಮದ್ ಹಾಜಿ ಪೊಯ್ಯತ್ತಬೈಲು, ಮುಹಮ್ಮದ್ ಶಾಲಿಮಾರ್, ಬಶೀರ್ ಮುಡಿಪು, ಬಶೀರ್ ಪೆರೋಡ್, ಬಶೀರ್ ಕೂರ್ನಾಡ್, ಅಬ್ದುಲ್ಲಾ ಪುರುಷಂಗೋಡಿ, ಉಮ್ಮರ್ ಮುಸ್ಲಿಯಾರ್, ಅಬ್ದುಲ್ ಖಾದರ್ ಮದನಿ ಮದ್ಯನಡ್ಕ, ಹಮೀದ್ ಮುದುಂಗಾರ್, ಉಮ್ಮರ್ ಮೈದಾನಿ ಮೂಲೆ, ಅಬ್ದುಲ್ ರಹ್ಮಾನ್ ಅದೂರು, ಅಬ್ಬು ಪುರುಷಂಗೋಡಿ, ಹಾಗೂ ಉಲಮಾ, ಉಮರಾ ನೇತಾರರು ಮತ್ತು ಸಂಘ ಕುಟುಂಬಗಳ ನೇತಾರರು, ಕಾರ್ಯಕರ್ತರು ಭಾಗವಹಿಸಿದ್ದರು. K.E. ಸಾಲೆತ್ತೂರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!