janadhvani

Kannada Online News Paper

ಕೆ.ಸಿ.ಎಫ್ ಝಾಯಿದಿ ಯೂನಿಟ್ ಮಹಾಸಭೆ

ಕೆ.ಸಿ.ಎಫ್ ಜಿದ್ದಾ ಝೋನಿನ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿರುವ ಝಾಯಿದಿ ಯೂನಿಟ್ ನ ಮಾಸಿಕ ಮಹ್ಲರತುಲ್ ಬದ್ರಿಯಾ ಹಾಗೂ ಮಹಾಸಭೆ ಕಾರ್ಯಕ್ರಮ ಯೂನಿಟ್ ಅಧ್ಯಕ್ಷರು ಬಶೀರ್ ಕೆಜೆಕಾರ್ ರವರ ಅಧ್ಯಕ್ಷತೆಯಲ್ಲಿ ಝಾಯಿದಿ ICF ನೇತಾರರ ನಿವಾಸದಲ್ಲಿ ಇತೀಚೆಗೆ ಜರಗಿತು.

ಕಾರ್ಯಕ್ರಮವನ್ನು ICF ಝಾಯಿದಿ ಯೂನಿಟ್ ಅಧ್ಯಕ್ಷರು ಝೈನುಲ್ ಆಬಿದೀನ್ ಅಂಜದಿ ನಿಲಂಬೂರು ಉದ್ಘಾಟಿಸಿದರು

ಕಳೆದ ವರ್ಷದ ವರದಿ ಮತ್ತು ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಶರೀಫ್ ಪಲ್ಲಮಜಲ್ ಮಂಡಿಸಿದರು

ನಂತರ ಸೆಕ್ಟರ್ ನಿಂದ R.O ಆಗಿ ಆಗಮಿಸಿದ ಇಕ್ಬಾಲ್ ಕಕ್ಕಿಂಜೆ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಬಶೀರ್ ಕೆಜೆಕಾರ್, ಪ್ರ.ಕಾರ್ಯದರ್ಶಿ ಶರೀಫ್ ಪಲ್ಲಮಜಲ್, ಕೋಶಾಧಿಕಾರಿ ರಿಯಾಝ್ ಕಟ್ಟತ್ತಿಲ ಉಪಾಧ್ಯಕ್ಷರುಗಳಾಗಿ ಅಬ್ದುಲ್ಲಾ ಬಿ.ಸಿ ರೋಡ್, ಸಿ.ಎಚ್ ಅಶ್ರಫ್ ಕನ್ಯಾನ. ಕಾರ್ಯದರ್ಶಿಗಳಾಗಿ ಜಾಬಿರ್ ಬಾಜಾರ್, ಅಬ್ದುಲ್ ಮಜೀದ್ ಬಜಾಲ್. ಕಾರ್ಯಕಾರಿ ಸದಸ್ಯರಾಗಿ ಸ್ವಾದಿಖ್ ಹಾಸನ, ಇಸ್ಮಾಯಿಲ್ ಕುಂತೂರು ಎಂಬವರನ್ನು ಆಯ್ಕೆ ಮಾಡಲಾಯಿತು

ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಶರೀಫ್ ಪಲ್ಲಮಜಲ್ ಸ್ವಾಗತಿಸಿ, ಕೋಶಾಧಿಕಾರಿ ರಿಯಾಝ್ ಕಟ್ಟತ್ತಿಲ ಧನ್ಯವಾದ ಸಲ್ಲಿಸಿದರು