ಜಿದ್ದಾ:ಕೆ.ಸಿ.ಎಫ್ ಜಿದ್ದಾ ಝೋನಿನ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿ ನೂತನ ಜಬಲುನ್ನೂರ್ ಯೂನಿಟ್ ರಚನೆ ಹಾಗೂ ಆತ್ಮೀಯ ಮಜ್ಲಿಸ್ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಜಬಲನ್ನೂರು ಮೂಸಾ ಹಾಜಿ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸೆಕ್ಟರ್ ಸಂಘಟನೆ ವಿಭಾಗ ಅಧ್ಯಕ್ಷರು ಸ್ವಾದಿಖ್ ಸಖಾಫಿ ಕಿಲ್ಲೂರು ಉದ್ಘಾಟಿಸಿದರು. ಕೆಸಿಎಫ್ ನೀತಿ ನಿಯಮಗಳ ಬಗ್ಗೆ ಹಾಗೂ ರಜಬ್ ತಿಂಗಳ ಮಹತ್ವವನ್ನು ತಿಳಿಸಿ ಹನೀಫ್ ಸಖಾಫಿ ಬೊಳ್ಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಂತರ ಸೆಕ್ಟರ್ ನಿಂದ R.O ಆಗಿ ಆಗಮಿಸಿದ ಇಕ್ಬಾಲ್ ಕಕ್ಕಿಂಜೆ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.
ಅಧ್ಯಕ್ಷರಾಗಿ ಅಬ್ಬಾಸ್ ಸಾಲ್ಮರ, ಪ್ರ.ಕಾರ್ಯದರ್ಶಿ ಅಶ್ರಫ್ ಮಂಗಿಲಪದವು, ಕೋಶಾಧಿಕಾರಿ ಹಾರಿಸ್ ಕಿನ್ಯಾ, ಉಪಾಧ್ಯಕ್ಷರುಗಳಾಗಿ ಅಬ್ದುಲ್ಲಾ ಮುಸ್ಲಿಯಾರ್ ಕಡಬ, ಅಬ್ದುಲ್ ಅಝೀಝ್ ವೇಣೂರು. ಕಾರ್ಯದರ್ಶಿಗಳಾಗಿ ಜಮಾಲುದ್ದೀನ್ ಪೇರಾಜೆ, ಆಸೀಫ್ ಮಠ. ಕಾರ್ಯಕಾರಿ ಸದಸ್ಯರಾಗಿ ಸ್ವಾದಿಖ್ ಸಖಾಫಿ ಕಿಲ್ಲೂರು, ಮೂಸಾ ಹಾಜಿ ಕಿನ್ಯಾ, ಶರೀಫ್ ಝೈನಿ ಈಶ್ವರಮಂಗಿಲ, ಬಶೀರ್ ಕುಕ್ಕಾಜೆ, ಅಶ್ಫಖ್ ಪರ್ಲಡ್ಕ, ಹಾರಿಸ್ ಅರಿಯಡ್ಕ ಎಂಬವರನ್ನು ಆಯ್ಕೆ ಮಾಡಲಾಯಿತು
ಈ ವೇಳೆ ಮುಹಿಮ್ಮಾತ್ ಆರ್ಗನೈಝರ್ ಅಬೂಬಕ್ಕರ್ ಸಖಾಫಿ ಹಾಗೂ ಡಿಕೆಎಸ್ಸಿ ನೇತಾರ ಅಬ್ಬಾಸ್ ಹಾಜಿ ಎಲಿಮಲೆ ಶುಭ ಹಾರೈಸಿ ಮಾತನಾಡಿದರು
ಕಾರ್ಯಕ್ರಮವನ್ನು ಮೂಸಾ ಹಾಜಿ ಕಿನ್ಯಾ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಂಗಿಲಪದವು ಧನ್ಯವಾದ ಸಲ್ಲಿಸಿದರು.