janadhvani

Kannada Online News Paper

ಮುಡಿಪು: ಎಜುಪಾರ್ಕ್ ನಲ್ಲಿ ಮಾಸಂಪ್ರತಿ ನಡೆಸಲ್ಪಡುವ ಸಖಾಫಿಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮವು ಮಾರ್ಚ್.8 ಸಂಜೆ 7.00ಕ್ಕೆ ನಡೆಯಿತು.

ಸಯ್ಯದ್ ಮುಹ್ಮದ್ ಅಶ್ರಫ್ ಅಸ್ಸಖಾಫ್ ಮದನಿ ತಂಙಳ್ ಆದೂರ್ ಇವರ ನೇತೃತ್ವದಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮ ಪ್ರಮುಖ ವಾಗ್ಮಿ ಬಹು: ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಮುಖ್ಯ ಪ್ರಭಾಷಣ ನಡೆಸಿ ಕುರಾನ್ ನಿಂದ ಮಾತ್ರ ಇಹಪರ ವಿಜಯ ಸಾಧ್ಯ .ಕುರಾನ್ ಕಲಿಸುವಂತಹ ಝಹ್ರತುಲ್ ಕುರಾನ್ ನನ್ನು ಮಕ್ಕಳಿಗೆ ಕಲಿಸಲು ಮುಂದೆ ಬರಬೇಕು ಸಯ್ಯದ್ ರವರು ನಡೆಸುವ ಈ ಸ್ಥಾಪನೆ ಅದಕ್ಕೆ ಉದಾಹರಣೆಯಾಗಿದೆ .ಎಂದು ಕಾರ್ಯ ಕರ್ತ ರಿಗೆ ವಿವರಿಸಿದರು. k E ಸಾಲೆತ್ತೂರು ಸ್ವಾಗತಿಸಿ.

ಬಹು ರಪೀಕ್ ಅಹ್ಸನಿ. ಹೂಹಾಕುವ ಕಲ್ಲು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಬಹು ಸಯ್ಯಿದ್ ಜಲಾಲುದ್ದೀನ್ ಜಮಲುಲೈಲಿ ಪಾತೂರು, ಮುಹಮ್ಮದ್ ಹಾಜಿ ಪೂಯ್ಯತ್ತಬೈಲು, ಎಸ್.ಕೆ.ಖಾದರ್ ಹಾಜಿ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಉಪಸ್ಥಿತ ರಿದ್ದರು ಕೊನೆಗೆ ಸಯ್ಯದ್ ರವರು ದುವಾ ನಡೆಸಿದರು ಎಂದು ಮಜ್ಲಿಸ್ಎಜು ಪಾರ್ಕ್ ಮಿಡಿಯಾ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com