ಕಾಪು, ಜೂನ್ 22; ರಾಜ್ಯ ಎಸ್ಸೆಸ್ಸೆಫ್ ಮಹಾತ್ವಾಕಾಂಕ್ಷೆಯ ಯೋಜನೆ ಸನ್ನದ್ಧ ಕಾರ್ಯಕರ್ತರ ಪಡೆಯನ್ನು ಮುಂದಿನ ಪೀಳಿಗೆಗಾಗಿ ಸಕ್ರೀಯ ಕಾರ್ಯಾಚರಣೆಗೆ ಸಿದ್ಧಪಡಿಸುವ ಉದ್ದೇಶದೊಂದಿಗೆ ರಾಜ್ಯ ಕ್ಯೂಡಿ ಉಪಸಮಿತಿ ಅಧೀನದಲ್ಲಿ “ಸುಹ್ಬಾ ಕ್ಯಾಂಪ್” ರಾಜ್ಯಾಧ್ಯಂತ ನಡೆಯುತ್ತಿರುವ ಅಂಗವಾಗಿ ಎಸ್ಸೆಸ್ಸೆಫ್ ಕಾಪು ಡಿವಿಷನ್ ವತಿಯಿಂದ 2022 ಜೂನ್ 24 ಶುಕ್ರವಾರ ಜೇಸಿಐ ಭವನ ಕಾಪುವಿನಲ್ಲಿ ನಡೆಯಲಿದೆ.
ಡಿವಿಷನ್ ಅಧ್ಯಕ್ಷ ಮುಹಮ್ಮದ್ ಮುಸ್ತಫ ಸಖಾಫಿ ಅಧ್ಯಕ್ಷತೆಯಲ್ಲಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಶಿರ್ವ ಸ್ವಾಗತಿಸಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಉಧ್ಘಾಟಿಸಲಿದ್ದಾರೆ.
ರಾಜ್ಯ ಕ್ಯೂಡಿ ಕಾರ್ಯದರ್ಶಿ ಮುಸ್ತಫ ನಈಮಿ ಹಿಮಮಿ ಹಾವೇರಿ ವಿಷಯ ಮಂಡಿಸಲಿದ್ದು, ಜಿಲ್ಲಾ ಕ್ಯೂಡಿ ಕನ್ವೀನರ್ ಮುಹಿಯ್ಯುದ್ದೀನ್ ಸಖಾಫಿ ಪಯ್ಯಾರು, ರಾಜ್ಯ ಸದಸ್ಯ ಹಾಗೂ ಡಿವಿಷನ್ ಉಸ್ತುವಾರಿ ಮನ್ಸೂರ್ ಕೆಎಸ್ಸೆಮ್ ಉಡುಪಿ, ರಾಜ್ಯ ಸದಸ್ಯ ಮುಹಮ್ಮದ್ ರಕೀಬ್ ಕನ್ನಂಗಾರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೂರು ಹಾಗೂ ಡಿವಿಷನ್ ಸದಸ್ಯರು ಉಪಸ್ಥಿತರಿರುವರು.
ಈ ಕ್ಯಾಂಪಿನಲ್ಲಿ ಡಿವಿಷನ್ ವ್ಯಾಪ್ತಿಯ ಶಾಖೆಗಳ ನೊಂದಾಯಿತ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಪು ಡಿವಿಷನ್ ಕ್ಯೂಡಿ ಕಾರ್ಯದರ್ಶಿ ಆಸಿಫ್ ಬೆಳಪು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಡಿವಿಷನ್ ಮೀಡಿಯಾ ಸೆಲ್ ವರದಿ ಮಾಡಿದೆ.
















ಇನ್ನಷ್ಟು ಸುದ್ದಿಗಳು
ಸುನ್ನೀ ಕೋ-ಓಡಿನೇಶನ್ ವತಿಯಿಂದ ಎಮ್ ಎ ಗಫೂರ್ ರವರಿಗೆ ಸನ್ಮಾನ
ಉಡುಪಿಯಲ್ಲಿ : ಎಸ್ ವೈ ಎಸ್ ‘ಸೌಹಾರ್ದ ಸಂಚಾರ’
ನಮ್ಮ ನಾಡ ಒಕ್ಕೂಟ: ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಹಾಯಧನ ವಿತರಣೆ
ಎನ್.ಎನ್.ಓ ಉಡುಪಿ ಜಿಲಾ ಸಮಿತಿ: ಕಟ್ಟಡ ದಾನಿಗೆ ಸನ್ಮಾನ
ಉಡುಪಿ: ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸಹಾಯಧನ ಹಸ್ತಾಂತರ
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಪದಗ್ರಹಣ ಹಾಗೂ ಸನ್ಮಾನ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬರಿಗೆ ಸನ್ಮಾನ
ಖಿದ್ಮಾ ಫೌಂಡೇಶನ್ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿದ ಎನ್.ಎನ್. ಓ ಉಡುಪಿ ಜಿಲ್ಲಾ ನಿಯೋಗ
ನಮ್ಮ ನಾಡ ಒಕ್ಕೂಟ, ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್- ಸಹಾಯಧನ ಹಸ್ತಾಂತರ