ನಾವುಂದ: SჄS ನಾವುಂದ ಸೆಂಟರ್ ಹಾಗೂ SSF ನಾವುಂದ ಸೆಕ್ಟರ್ ಇದರ ಜಂಟಿ ಆಶ್ರಯದಲ್ಲಿ ಇದೇ ಬರುವ ದಿನಾಂಕ ಡಿಸೆಂಬರ್ 14ನೇ ಮಂಗಳವಾರ ಮಗರಿಬ್ ನಮಾಝಿನ ಬಳಿಕ ಮುಹ್ಯಿದ್ದೀನ್ ಜುಮಾ ಮಸೀದಿ ಮರವಂತೆ – ನಾವುಂದ ವಠಾರದಲ್ಲಿ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಸಾವಿರಾರು ಮುಅ್’ಮಿನ್ ಗಳ ಮನಸ್ಸುಗಳನ್ನು ತನ್ನ ಶಬ್ಧದಿಂದ ಪವಿತ್ರ ಮದೀನಾದತ್ತ ಕೊಂಡೊಯ್ಯುವ ಯುವ ಗಾಯಕ, ಪ್ರವಾದಿ ಕುಟುಂಬದ ಅಗ್ರಗಣ್ಯ ಸಾರಥಿ ಅಸ್ಸಯ್ಯಿದ್ ತ್ವಾಹಾ ತಂಙಲ್ ಪೂಕಟೂರು ಪ್ರಸ್ತುತ ಬುರ್ದಾ ಮಜ್ಲಿಸಿನ ನೇತೃತ್ವ ವಹಿಸಲಿದ್ದಾರೆ. ಸಿನಿಮಾ ಹಾಡುಗಳಿಗೆ ಎಡಿಟ್ ಆಗಿದ್ದ ಯುವಸಮೂಹವನ್ನು ತನ್ನ ಕೋಗಿಲಕಂಠದಿಂದ ಪ್ರವಾದಿ ಹಾಡುಗಳ ಮೂಲಕ ಯುವಸಮೂಹವನ್ನು ಪ್ರವಾದಿ ಪ್ರೇಮಿಗಳಾಗಿ ಪರಿವರ್ತಿಸಿದ ಖ್ಯಾತ ಗಾಯಕ ಶಾಹಿನ್ ಬಾಬು ತಾನೂರು ಪವಿತ್ರ ಮದ್ಹ್ ಹಾಡಿಗೆ ನೇತೃತ್ವ ನೀಡಲಿದ್ದಾರೆ.
ಖ್ಯಾತ ಮಾತುಗಾರರೂ, ಸಯ್ಯಿದ್ ಕುಟುಂಬದ ಹಿರಿಯ ಸಾರಥಿಯೂ, ಆದ ಅಸ್ಸಯ್ಯಿದ್ ಕಾಜೂರು ತಂಙಳ್ ಅನುಸ್ಮರಣಾ ಪ್ರಭಾಷಣ ಹಾಗೂ ಕೂಟು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಅಲ್ಲದೆ ಇನ್ನಿತರ ಹಲವಾರು ಸಾದಾತುಗಳು, ಉಲಮಾಗಳು, ಉಮರಾಗಳು, ಸಂಘಟನಾ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸ್ತ್ರೀಯರಿಗೂ ಪ್ರತ್ಯೇಕ ಸ್ಥಳಾವಕಾಶ ಏರ್ಪಡಿಸಿದ ಈ ಪುಣ್ಯ ಕಾರ್ಯಕ್ರಮದಲ್ಲಿ ದೀನಿ ಸ್ನೇಹಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕಾಗಿ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಕೊಂಬಾಳಿ ಝುಹುರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸುನ್ನೀ ಕೋ-ಓಡಿನೇಶನ್ ವತಿಯಿಂದ ಎಮ್ ಎ ಗಫೂರ್ ರವರಿಗೆ ಸನ್ಮಾನ
ಉಡುಪಿಯಲ್ಲಿ : ಎಸ್ ವೈ ಎಸ್ ‘ಸೌಹಾರ್ದ ಸಂಚಾರ’
ನಮ್ಮ ನಾಡ ಒಕ್ಕೂಟ: ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಹಾಯಧನ ವಿತರಣೆ
ಎನ್.ಎನ್.ಓ ಉಡುಪಿ ಜಿಲಾ ಸಮಿತಿ: ಕಟ್ಟಡ ದಾನಿಗೆ ಸನ್ಮಾನ
ಉಡುಪಿ: ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸಹಾಯಧನ ಹಸ್ತಾಂತರ
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಪದಗ್ರಹಣ ಹಾಗೂ ಸನ್ಮಾನ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬರಿಗೆ ಸನ್ಮಾನ
ಖಿದ್ಮಾ ಫೌಂಡೇಶನ್ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿದ ಎನ್.ಎನ್. ಓ ಉಡುಪಿ ಜಿಲ್ಲಾ ನಿಯೋಗ
ನಮ್ಮ ನಾಡ ಒಕ್ಕೂಟ, ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್- ಸಹಾಯಧನ ಹಸ್ತಾಂತರ