janadhvani

Kannada Online News Paper

ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ SDPI ಪ್ರತಿಭಟನೆ

ಬೆಳ್ತಂಗಡಿ, ಡಿ. 06:ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕಿನ ಸುನ್ನತ್ ಕೆರೆ ಜಂಕ್ಷನ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ನಿಸಾರ್ ಕುದ್ರಡ್ಕ ನೇತೃತ್ವ ವಹಿಸಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಿಝಾಮ್ ಗೇರುಕಟ್ಟೆ ಮಾತನಾಡುತ್ತ “ಬಾಬರಿ ಮಸೀದಿ ಧ್ವಂಸವು ಸ್ವಾತಂತ್ರ್ಯ ಭಾರತ ಕಂಡ ಎರಡನೇ ಭಯೋತ್ಪಾದಕ ಕೃತ್ಯವಾಗಿದೆ. ಸುಪ್ರೀಂ ಕೋರ್ಟ್ ಅನ್ಯಾಯದ ತೀರ್ಪು ನೀಡಿದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಹಾಗೂ ಧ್ವಂಸವಾದ ಸ್ಥಳದಲ್ಲೇ ಬಾಬರಿ ಮಸೀದಿ ಪುನರ್ ನಿರ್ಮಿಸಬೇಕು” ಎಂದು ಆಗ್ರಹಿಸಿದರು.

ಉಪಾಧ್ಯಕ್ಷರಾದ ಹನೀಫ್ ಪುಂಜಲ್ ಕಟ್ಟೆ, ಸಮಿತಿ ಸದಸ್ಯರಾದ ಸಾಲಿ ಮದ್ದಡ್ಕ, ಕುವೆಟ್ಟು ಬ್ಲಾಕ್ ಕಾರ್ಯದರ್ಶಿ ಸಮೀಮ್ ಯೂಸುಫ್, ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷರಾದ ದಾವೂದ್ ಜಿ.ಕೆರೆ ಉಪಸ್ಥಿತರಿದ್ದರು. ನವಾಝ್ ಸುನ್ನತ್ ಕೆರೆ ಯವರು ಬಾಬರಿ ಮಸ್ಜಿದ್ ಹಾಡಿನೊಂದಿಗೆ ಪ್ರತಿಭಟನೆ ಕೊನೆಗೊಂಡಿತು.

ಇದನ್ನೂ ಓದಿರಿ...