ಕಣ್ಣೂರು(ಕೇರಳ) ಜು.14: ಸಲಫಿ ಉಪನ್ಯಾಸಕರೂ, ಮುಜಾಹಿದ್ ನಾಯಕರಾದ ಡಾ.ಝಕರಿಯಾ ಸ್ವಲಾಹಿ(54) ವಾಹನ ಅಪಘಾತದಲ್ಲಿ ಮರಣ ಹೊಂದಿದರು.
ಇಂದು ಮಧ್ಯಾಹ್ನ ತಲಷ್ಶೇರಿ ಮನೇಕೆರೆಯಲ್ಲಿ ಅವರು ಸಂಚರಿಸುತ್ತಿದ್ದ ಸ್ಕೂಟರಿಗೆ ಬಸ್ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ರಕ್ಷಿಸಲಾಗಿಲ್ಲ.
ಮುಜಾಹಿದ್ ಸಂಘಟನೆಯ ಮೊದಲ ಭಿನ್ನತೆಯ ಬಳಿಕ ಕೆಎನ್ಎಂ ಅಧಿಕೃತ ಸಂಘಟನೆಯಲ್ಲಿ ಗುರುತಿಸಿಕೊಂಡು ಯುವಜನ ವಿಭಾಗಕ್ಕೆ ನೇತೃತ್ವ ನೀಡಿದರು. ಮತ್ತೆ ಯುವಜನ ನಾಯಕರೊಂದಿಗೆ ವಿಸ್ಡಂ ರೂಪೀಕರಿಸುವಲ್ಲಿ ಸಕ್ರಿಯರಾದರು. ಮತ್ತೆ ವಿಸ್ಡಂ ಗ್ಲೋಬಲ್ ವಿಷನ್ ನೇತಾರರೊಂದಿಗೆ ಅಭಿಪ್ರಾಯ ಭಿನ್ನತೆಯಿಂದ ಸ್ವತಂತ್ರರಾಗಿ ಕಾರ್ಯಾಚರಿಸುತ್ತಿದ್ದರು.
ಕೇರಳ ಸಲಫಿಗಳ ಹಲವು ಆಶಯಗಳಿಗೆ ಭಾಷಣ, ಲೇಖನಗಳ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು.
ಪಾಲಕ್ಕಾಡ್ ಜಿಲ್ಲೆಯವರಾದ ಅವರು ಕಣ್ಣೂರಿನ ಕಡವತ್ತೂರಿನಲ್ಲಿ ವಾಸಿಸುತ್ತಿದ್ದರು. ಎಡವಣ್ಣ ಜಾಮಿಯಾ ನದ್ವಿಯ್ಯಾದಿಂದ ಪದವಿ ಪಡೆದು, ಅಲೀಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.
ನಂತರ ಕಡವತ್ತೂರು ನುಸ್ರತುಲ್ ಇಸ್ಲಾಂ ಅರಬಿಕ್ ಕಾಲೇಜ್ ನಲ್ಲಿ ಅಧ್ಯಾಪಕರಾಗಿ ಸೇವೆ ಗೈಯುತ್ತಿದ್ದರು.
ಕೃಪೆ: ಸಿರಾಜ್ ಡೈಲಿ















ಇನ್ನಷ್ಟು ಸುದ್ದಿಗಳು
‘ಈದುಲ್ ಫಿತ್ರ್’ ಖುತ್ಬಾ ವೇಳೆ ಇಮಾಮ್ ಕುಸಿದು ಬಿದ್ದು ಮೃತ್ಯು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ಬಿಗ್ ಬಾಸ್ ನ ಒಳಗೇನು? ತನಿಖೆಗೆ ಆದೇಶಿಸಿದ ಹೈಕೋರ್ಟ್
ರಹೀಮ್ ವಿಮೋಚನಾ ಅಭಿಯಾನ: ಮೊಬೈಲ್ ಆಪ್ ಸಿದ್ಧಪಡಿಸಿದವರರು ಇವರು
ರಿಯಾಜ್ ಮೌಲವಿ ಹತ್ಯೆ ಪ್ರಕರಣದ ನ್ಯಾಯಾಧೀಶರ ವರ್ಗಾವಣೆಗೆ ಕೆಟಿ ಜಲೀಲ್ ಟೀಕೆ
ರಿಯಾಜ್ ಮೌಲ್ವಿ ಹತ್ಯೆ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ವರ್ಗಾವಣೆ
ತಾಂತ್ರಿಕ ವಿವಿಗಳಲ್ಲಿ ಸರ್ಚ್ ಸಮಿತಿ ರಚನೆ ಗೆ ಮುಂದಾದ ಕೇರಳ ಸರಕಾರ- ವಿವಿ ಕುಲಾಧಿಪತಿ ರಾಜ್ಯಪಾಲರಿಗೆ ಸಡ್ಡು
ರಿಯಾಝ್ ಮೌಲವಿ ಹತ್ಯೆ: ತೀರ್ಪಿನಲ್ಲಿ ಪ್ರಾಸಿಕ್ಯೂಷನ್ ಮತ್ತು ತನಿಖಾಧಿಕಾರಿ ವಿರುದ್ಧ ಗಂಭೀರ ಆರೋಪ
ರಿಯಾಝ್ ಮೌಲವಿ ಹತ್ಯೆ: ಅನಿರೀಕ್ಷಿತ ತೀರ್ಪು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳಲಿದೆ- ಎಸ್ವೈಎಸ್
ಕಾಸರಗೋಡು: ರಿಯಾಝ್ ಮೌಲವಿ ಹತ್ಯೆ ಪ್ರಕರಣ- ಆರ್ಎಸ್ಎಸ್ ಕಾರ್ಯಕರ್ತರಾದ ಆರೋಪಿಗಳು ಖುಲಾಸೆ