ಮಂಗಳೂರು , ಮೇ 14: ಮಂಗಳೂರು ಮೂಲದ ಚೊಕ್ಕಬೆಟ್ಟು ನಿವಾಸಿ, ಶಾಜಹಾನ್ (33) ರವರು, ಸುಮಾರು 9 ವರ್ಷಗಳಿಂದ ಕತ್ತರ್ ನಲ್ಲಿ ಉದ್ಯೋಗದಲ್ಲಿದ್ದು, ದಿನಾಂಕ 10-05-2026 ಭಾನುವಾರದಂದು ರಾತ್ರಿ, ಕತ್ತರ್, ದೋಹಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮರಣಹೊಂದಿದ್ದು ಪತ್ನಿ, ಇಬ್ಬರು ಮಕ್ಕಳು ಸಹಿತ ಕುಟುಂಬವನ್ನು ಅಗಲಿರುತ್ತಾರೆ.
ಮೃತದೇಹವನ್ನು ಊರಿಗೆ ಕಳುಹಿಸುವಲ್ಲಿ ಪ್ರಮುಖ ಸಂಘಟನೆಯಾದ ಕೆಸಿಎಫ್ ಕತ್ತರ್ ಮತ್ತು ಡಿಕೆಎಸ್ಸಿ ನಾಯಕರುಗಳಾದ ಅಬ್ದುಲ್ಲ ಕುಂಞಿ, ಹಕೀಮ್ ಪಾತೂರು ಮತ್ತು ಆಶಿಕ್ ಬೈರಿಕಟ್ಟೆ ಮುಂತಾದವರು ಸೇರಿಕೊಂಡು ಭಾರತೀಯ ರಾಯಭಾರಿ ಕಚೇರಿ ಮತ್ತು ಇತರ ಸಂಬಂಧಪಟ್ಟ ಕಚೇರಿಗಳಿಂದ ಪ್ರಮಾಣ ಪತ್ರಗಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಡಲಾಯ್ತು. ಸಂಘಟನೆಯ ಕಾರ್ಯಕರ್ತರನೇಕರು ಸೇರಿಕೊಂಡು ದುಆ ಮತ್ತು ಮಯ್ಯಿತ್ ನಮಾಜ್ ನಿರ್ವಹಿಸಿ, ಮೃತದೇಹವನ್ನು ಊರಿಗೆ ಕಳುಹಿಸಿಕೊಡಲಾಯ್ತು.
ವರದಿ: ಹಸೈನಾರ್ ಕಾಟಿಪಳ್ಳ
















ಇನ್ನಷ್ಟು ಸುದ್ದಿಗಳು
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ