ಬೆಂಗಳೂರು: SSF ಬೆಂಗಳೂರು ಜಿಲ್ಲಾ ಕೌನ್ಸಿಲ್ ಹಲಸೂರ್ ಮರ್ಕ್ಹಿನ್ಸ್ ಆಡಿಟೋರಿಯಂ ನಲ್ಲಿ ನಡೆಯಿತು, ಅಧ್ಯಕ್ಷ ಸ್ಥಾನವನ್ನು SSF ಜಿಲ್ಲಾಧ್ಯಕ್ಷ ರಾದ ತಾಜುದ್ದೀನ್ ಫಾಳಿಲಿ ವಹಿಸಿದರು.
SJM ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ರಾಜ್ಯ SSF ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ ತರಗತಿ ನಡೆಸಿದರು.
ನಂತರ ಜನರಲ್ ವರದಿ,ಕ್ಯಾಂಪಸ್ ವರದಿ,ಫಿನಾನ್ಸ್ ವರದಿಯನ್ನು ಕ್ರಮವಾಗಿ ಮುಹಮ್ಮದ್ ಅನ್ವರ್ ಉಸ್ತಾದ್, ಶಬೀಬ್, ಹಾಗೂ ಅಬ್ದುಲ್ಲಾ ಎನ್ ಸಿ ರವರು ವಾಚಿಸಿದರು.
2019-21 ವರ್ಷದ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಹಬೀಬಲ್ಲಾಹ್ ನೂರಾನಿ.ಪ್ರ.ಕಾರ್ಯದರ್ಶಿ-ಮುಹಮ್ಮದ್ ಶಿಹಾಬುದ್ದೀನ್.
ಫೈನಾನ್ಸ್ ಕಾರ್ಯದರ್ಶಿ-ಶಾಫಿ ಸಅದಿ
ಕ್ಯಾಂಪಸ್ ಕಾರ್ಯದರ್ಶಿ-ಅಖ್ತರ್ ಹುಸೈನ್
ಹಾಗೂ ಅನ್ವರ್ ಉಸ್ತಾದ್.
ಉಪಾಧ್ಯಕ್ಷರಾಗಿ ಎ.ಪಿ ನುಫೇಲ್ ,ಅಬ್ದುಲ್ ಹಕೀಮ್,ಅಬ್ದುಲ್ಲಾಹ್ ಎನ್. ಸಿ.
ಜೊತೆ ಕಾರ್ಯದರ್ಶಿಗಳಾಗಿ ಶಬೀಬ್ ಎ ಬಿ ,ಶಂಸುದ್ದೀನ್ ಅಝ್ಹರಿ,ಅಬ್ದುರ್ರಝಾಖ್ ಕೆ,ಮುಹಮ್ಮದ್ ನಬೀಲ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಫೈನಾನ್ಸ್ ಕಾರ್ಯದರ್ಶಿ ಶರೀಫ್ ಮಾಸ್ಟರ್ ಕೌನ್ಸಿಲ್ ಕಾರ್ಯಕ್ರಮವನ್ನು ನಿಯಂತ್ರಿಸಿದರು.
ಕಾರ್ಯಕ್ರಮದಲ್ಲಿ SYS ಜಿಲ್ಲಾ ಕಾರ್ಯದರ್ಶಿ ಮುಜೀಬ್ ಸಖಾಫಿ , SMA ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ, ಅಬ್ದುಲ್ ರವೂಫ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಡಿವಿಷನ್ ಗಳಿಗೂ,ಯೂನಿಟ್ ಗಳಿಗೂ ಕಾರ್ಯಕ್ರಮದಲ್ಲಿ ಜಿಲ್ಲೆಯ ಗೌರವ ಪ್ರಶಸ್ತಿ ಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿ ಮುನೀರ್ ಈರ್ ಪೋಲ ಸ್ವಾಗತಿಸಿ ಶಾಫಿ ಸಅದಿ ಯವರು ಧನ್ಯವಾದ ಅರ್ಪಿಸಿದರು.