ಉಜಿರೆ: SSF ಉಜಿರೆ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು 22-12-2018 ರಂದು SSF ಸೆಕ್ಟರ್ ಕಛೇರಿ,ಉಜಿರೆಯಲ್ಲಿ ಸೆಕ್ಟರ್ ಅಧ್ಯಕ್ಷ ಅಶ್ರಫ್ ಉಜಿರೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
SSF ಬೆಳ್ತಂಗಡಿ ಅಧ್ಯಕ್ಷರಾದ MAM ಕಾಸಿಂ ಮುಸ್ಲಿಯಾರ್ ಮಾಚಾರು ಸಭೆಯನ್ನು ಉದ್ಘಾಟಿಸಿದರು. 2017-18 ನೇ ಸಾಲಿನ ವಾರ್ಷಿಕ ವರದಿಯನ್ನು ಅನ್ವರ್,ಬೆಳಾಲು ಹಾಗೂ ಲೆಕ್ಕಪತ್ರವನ್ನು ಮುಹಮ್ಮದ್ ಅಲಿ,ಕುಕ್ಕಾವು ಮಂಡಿಸಿದರು.
SSF ಕರ್ನಾಟಕ ರಾಜ್ಯ ಕಾರ್ಯದರ್ಶಿಯಾದ ಹಾಫಿಲ್ ಸುಫಿಯಾನ್ ಸಖಾಫಿ ಸಂಘಟನೆಯ ಕಾರ್ಯ ವೈಖರಿಗಳ ಬಗ್ಗೆ ಅರ್ಥವತ್ತಾಗಿ ವಿವರಿಸಿದರು.
2018-19 ಸಾಲಿನ ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ಇಕ್ಬಾಲ್,ಮಾಚಾರು ಉಪಾಧ್ಯಕ್ಷರಾಗಿ ಹಮೀದ್ ಸಅದಿ ಕುಕ್ಕಾವು, ಅಶ್ರಫ್ ನೆರಿಯ, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಮುಬೀನ್ ಉಜಿರೆ, ಜೊತೆ ಕಾರ್ಯದರ್ಶಿಗಳು ಸಿದ್ದೀಕ್ ಮುಂಡಾಜೆ, ಬಾಸಿತ್ ಬೆಳಾಲು. ಕೋಶಾಧಿಕಾರಿಯಾಗಿ ಸಿದ್ದೀಕ್ ಕಾಜೂರು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಫೀಕ್ ಉಜಿರೆ ಸಹಿತ 21 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಸಭೆಯಲ್ಲಿ SSF ಬೆಳ್ತಂಗಡಿ ಡಿವಿಷನ್ ಜೊತೆ ಕಾರ್ಯದರ್ಶಿ ಶರೀಫ್ ನಾವೂರು,KCF ರಾಷ್ಟ್ರೀಯ ಸಾಂತ್ವನ ವಿಭಾಗದ ಚೇರ್ ಮೆನ್ ಸಲೀಂ ಕನ್ಯಾಡಿ, ಮಲ್ಜಅ್ ಜನರಲ್ ಮ್ಯಾನೇಜರ್ ಮೆಹಬೂಬ್ ಸಖಾಫಿ,ಕಿನ್ಯ ಸಹಿತ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಸೆಕ್ಟರ್ ಪ್ರ.ಕಾರ್ಯದರ್ಶಿ ಅನ್ವರ್ ಬೆಳಾಲು ಸ್ವಾಗತಿಸಿ, ಮುಹಮ್ಮದ್ ಮುಬೀನ್ ಉಜಿರೆ ಧನ್ಯವಾದಗೈದರು.
ವರದಿ: ಎಂ.ಎಂ.ಉಜಿರೆ