ದೇರಳಕಟ್ಟೆ: ಡಿಸಂಬರ್ 14: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಇದರ ದೇರಳಕಟ್ಟೆ ಸೆಕ್ಟರ್ ವ್ಯಾಪ್ತಿಯ ಕಾನೆಕೆರೆ ಶಾಖೆಯ ಮಹಾಸಭೆ ಜರುಗಿತು. 2018-19ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಮುಹಮ್ಮದ್ ರಫೀಖ್ ರವರ ಅಧ್ಯಕ್ಷತೆಯಲ್ಲಿ ಸಭೆಯೂ ನಡೆಯಿತು. ವಿ. ಯು. ಇಸ್ಹಾಖ್ ಝುಹುರಿ ಉಸ್ತಾದರು ಸಭೆಯನ್ನು ಉದ್ಘಾಟಿಸಿದರು. ಚುನಾವಣಾ ವೀಕ್ಷಕರಾಗಿ ಸೆಕ್ಟರ್ ಎಸ್. ಬಿ. ಎಸ್ ಕನ್ವಿನರ್ ಅಲ್ತಾಫ್ ಶಾಂತಿಬಾಗ್ ಹಾಗೂ ಅಲ್ತಾಫ್ ಬದ್ಯಾರ್ ಆಗಮಿಸಿದ್ದರು.
ನೂತನ ಅಧ್ಯಕ್ಷರಾಗಿ ಸಾಜಿದ್ ಹಿಮಮಿ, ಪ್ರಧಾನ ಕಾರ್ಯದರ್ಶಿ ಇಫಾಝ್ ತಮೀಂ,ಕೋಶಾಧಿಕಾರಿ ಅಹ್ಮದ್ ಕಬೀರ್, ಉಪಾಧ್ಯಕ್ಷರಾಗಿ ಇರ್ಷಾದ್ ಕೆ. ಎ, ಜೊತೆ ಕಾರ್ಯದರ್ಶಿಗಳಾಗಿ ಶಫೀಖ್ ಕೆ, ರವರನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ಎಸ್. ವೈ. ಎಸ್ ಅಧ್ಯಕ್ಷರು ಬಿ. ಕೆ. ಮುಹಮ್ಮದ್, ಎಸ್, ವೈ. ಎಸ್ ಸದಸ್ಯರು ಉಮರಾಕ,ಹಸೈನಾರ್, ಹೈದರ್, ಮತ್ತಿತ್ತರು ಉಪಸ್ಥಿತರಿದ್ದರು.
ಇಫಾಝ್ ತಮೀಂ ಸ್ವಾಗತಿಸಿ, ನಿರೂಪಿಸಿದರು.