ಕೆಸಿಎಫ್ ಜಿದ್ದಾ ಝೋನಲ್ ಅಧೀನದಲ್ಲಿ ಇಲೈಕ ಯಾ ರಸೂಲಲ್ಲಾಹ್ (ﷺ) ಕಾರ್ಯಕ್ರಮ.

ಜಿದ್ದಾ (ಜನಧ್ವನಿ ವಾರ್ತೆ): ಕೆಸಿಎಫ್ ಜಿದ್ದಾ ಝೋನಲ್ ಅಧೀನದಲ್ಲಿ ಡಿಸಂಬರ್ 07 ರಂದು ಜುಮುಅ ನಮಾಝಿನ ಬಳಿಕ ಮದೀನಾದಲ್ಲಿ ಇಲೈಕ ಯಾ ರಸೂಲಲ್ಲಾಹ್ (ﷺ) ಎಂಬ ನಾಮ ದಲ್ಲಿ ಬೃಹತ್ ಕಾರ್ಯಕ್ರಮ ನಡೆಸಲಾಯಿತು.

ಸದ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಜಿದ್ದಾ ಝೋನಲ್ ಅಧ್ಯಕ್ಷರಾದ ಹನೀಫ್ ಸಖಾಫಿ ಸಾಲೆತ್ತೂರು ಉಸ್ತಾದರು ವಹಿಸಿದರು. ಕಾರ್ಯದರ್ಶಿ ಇಬ್ರಾಹಿಮ್ ಕಿನ್ಯಾರವರು ಸ್ವಾಗತಿಸಿದ ಕಾರ್ಯಕ್ರಮದ ಉದ್ಘಾಟನೆಯನ್ನು ಮದೀನಾ ಝೋನಲ್ ಅಧ್ಯಕ್ಷರಾದ ಫಾರೂಕ್ ನಯೀಮಿ ಉಸ್ತಾದರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಜಿದ್ದಾ ಝೋನಲ್ ಅಡ್ಮಿನ್ ವಿಭಾಗದ ಅಧ್ಯಕ್ಷರಾದ ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರ ನೇತ್ರತ್ವದಲ್ಲಿ ಸುಮಧುರ ಬುರ್ದಾ ಮಜ್ಲಿಸ್ ನಡೆಸಲಾಯಿತು.

ಕಾರ್ಯಕ್ರದಲ್ಲಿ ಜಿದ್ದಾ ಝೋನಲ್ ಅಧೀನದಲ್ಲಿರುವ ಮಕ್ಕತುಲ್ ಮುಕರ್ರಮ, ಶರಫಿಯ್ಯಾ, ಬವಾದಿ, ರಹೀಲಿ, ತ್ವಾಯಿಫ್, ಭೇಷ್ ಹಾಗೂ ಖಮೀಸ್ ಸೆಕ್ಟರ್ ನೇತಾರರು ಹಾಗೂ ಕಾರ್ಯಕರ್ತರು ನೆರದಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರ ಸನ್ನಿದಿಗೆ ಮೂರು ಕೋಟಿಗಿಂತಲೂ ಅಧಿಕ ಸ್ವಲಾತ್ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಮೇಲೆ ತಿಳಿಸಲಾದ ಎಲ್ಲಾ ಸೆಕ್ಟರ್ ನೇತಾರರು ಹಾಗೂ ರಾಷ್ಟ್ರೀಯ ಸಮಿತಿ ನೇತಾರರು ಶುಭಕೋರಿದರು.

ಪ್ರವಾಸಿ ಜೀವನಕ್ಕೆ ವಿರಾಮ ಹೇಳಿ ಊರಿಗೆ ಹೋಗುತ್ತಿರುವ ಜಿದ್ದಾ ಝೋನ್ ಅಧ್ಯಕ್ಷರಾದ ಹನೀಫ್ ಸಖಾಫಿ ಸಾಲೆತ್ತೂರು ಉಸ್ತಾದರನ್ನು ಝೋನಲ್ ಸಮಿತಿ ಹಾಗೂ ಅಧೀನದಲ್ಲಿರುವ ಎಲ್ಲಾ ಸೆಕ್ಟರ್ ನೇತಾರರು ಶಾಲು ಹೊದಿಸಿ ಆದರಿಸಿ ವಿಜ್ರಂಭನೆಯಿಂದ ಬೀಳ್ಕೊಡಲಾಯಿತು.

ಝೋನಲ್ ಪಬ್ಲಿಕೇಶನ್ಸ್ ವಿಭಾಗದ ಅಧ್ಯಕ್ಷರಾದ ಬಹು ಸಿ ಎಚ್ ಅಬ್ದುಲ್ಲಾ ಸಖಾಫಿ ಉಸ್ತಾದರು ನೆರೆದಿದ್ದ ಕಾರ್ಯಕರ್ತರಿಗೆ ಗಲ್ಫ್ ಇಶಾರದ ಮಹತ್ವದ ಬಗ್ಗೆ ವಿವರಿಸಿ, ಅಬ್ದುಲ್ಲತೀಫ್ ಕನ್ಯಾನ ಹಾಗೂ ಅಬ್ದುಲ್ಲತೀಫ್ ಸೂರಿಂಜೆಯವರಿಗೆ ಗಲ್ಫ್ ಇಶಾರ ನೀಡುವ ಮೂಲಕ 2019ನೇ ಸಾಲಿನ ಗಲ್ಫ್ ಇಶಾರ ಚಂದಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು

ಕಾರ್ಯಕ್ರಮ ಕೊನೆಯಲ್ಲಿ ಉಮ್ಮರ್ ಸಖಾಫಿ ಪರಪ್ಪು ಉಸ್ತಾದರು ಹುಬ್ಬುರ್ರಸೂಲ್ ಪ್ರಭಾಷಣ ಮಾಡಿ ದುಆ ನೆರವೇರಿಸಿದರು.

ಸದ್ರಿ ಕಾರ್ಯಕ್ರದ ವೇದಿಕೆಯಲ್ಲಿ ರಾಷ್ಟೀಯ ಸಮಿತಿ ನೇತಾರರು ಹಾಗೂ ಮದೀನಾ ಝೋನಲ್ ನೇತಾರರು ಮತ್ತು ಹನೀಫ್ ಸಖಾಫಿ ಬೊಳ್ಮಾರ, ಮೂಸಾ ಹಾಜಿ ಕಿನ್ಯಾ, ಯಹ್ಯಾ ಬಿಳಿಯೂರು, ಇಸ್ಮಾಯಿಲ್ ರದ್ವಾ ಮತ್ತಿತರ ನೇತಾರರೂ ಹಾಗೂ ಕಾರ್ಯಕರ್ತರು ನೆರೆದಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿರಾಜುದ್ದೀನ್ ತೆಕ್ಕಾರ್ ಹಾಗೂ ಸಿದ್ದೀಕ್ ಬಾಳೆಹೊನ್ನೂರು ರವರ ಮದ್’ಹ್ ಗಾನದ ಬಳಿಕ ಝೋನಲ್ ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆಯವರು ಧನ್ಯವಾದ ಹೇಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!