janadhvani

Kannada Online News Paper

ಶಾರ್ಜಾ: “ಇಲೈಕ ಯಾ ರಸೂಲಲ್ಲಾಹ್” (ಸಂದೇಶ ವಾಹಕರೇ ತಮ್ಮೆಡೆಗೆ) ಎಂಬ ಶೀರ್ಷಿಕೆಯಲ್ಲಿ , ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ‌ಶಾರ್ಜಾ ಝೋನ್ ಇದರ ವತಿಯಿಂದ 2018 ಡಿಸೆಂಬರ್ 1ರಂದು ಮಗ್ರಿಬ್ ನಮಾಝಿನ ಬಳಿಕ ರೋಲಾದಲ್ಲಿರುವ‌ ಮುಬಾರಕ್ ಸೆಂಟರ್‌ನಲ್ಲಿ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ನೆಬಿ ಸ.ಅ ರವರ 1493ನೇ ಜನ್ಮದಿನ ಹಾಗೂ 47ನೇ ಯು.ಎ.ಇ ನ್ಯಾಷನಲ್ ‌ಡೇ ಆಚರಣೆ ಬೃಹತ್ ವಿಜ್ರಂಭಣೆಯಿಂದ ನಡೆಯಿತು.

ಕೆ.ಸಿ.ಎಫ್ ಶಾರ್ಜ ಝೋನಿನ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾದ ಅಬ್ದುಲ್ ರಝಾಕ್ ಮುಸ್ಲಿಯಾರ್ ಇವರ ನೇತ್ರತ್ವದಲ್ಲಿ ಮೌಲಿದ್ ಹಾಗೂ ನಅತೇ ಶರೀಫ್ ನಡೆಯಿತು. ನಂತರ ಕೆ.ಸಿ.ಎಫ್ ಶಾರ್ಜ ಝೋನಿನ ಬುರ್ದಾ ತಂಡದಿಂದ‌ ಮನಮೋಹಕ ‌ಶೈಲಿಯಲ್ಲಿ ಬುರ್ದಾ‌ ಆಲಾಪಣೆ ಹಾಗೂ ದಫ್‌ ಕಾರ್ಯಕ್ರಮ ‌ನಡೆಯಿತು.

ಹುಬ್ಬ್ ರಸೂಲ್ ಕಾರ್ಯಕ್ರಮವು ಬಹುಮಾನ್ಯರಾದ ಶಿವಮೊಗ್ಗ ತಂಙಳರ ದುವಾದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಹು! ಕಮಾಲುದ್ದೀನ್ ಅಂಬ್ಲಮೊಗರುವರು ವಹಿಸಿ, ಕೆ.ಸಿ.ಎಫ್ ಶಾರ್ಜ‌ ಝೋನಿನ ಸಂಘಟನಾ ವಿಭಾಗದ ಅಧ್ಯಕ್ಷರಾದ ಬಹು. ಇಬ್ರಾಹಿಮ್ ಸಖಾಫಿ ಕೆದುಂಬಾಡಿಯವರು ಸ್ವಾಗತಸಿದ ಸಭೆಯನ್ನು ಕೆ.ಸಿ.ಎಫ್ ಯು.ಎ‌.ಇ ರಾಷ್ಟ್ರೀಯ ಅಧ್ಯಕ್ಷರಾದ ಬಹು.ಅಬ್ದುಲ್ ಹಮೀದ್ ಸಅದಿಯವರು ಉದ್ಘಾಟಿಸಿದರು.

ಕೆ.ಸಿ.ಎಫ್ ಶಾರ್ಜ ಝೋನ್‌ ಪ್ರಧಾನ ಕಾರ್ಯದರ್ಶಿಯಾದ ರಜಬ್ ಮುಹಮ್ಮದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಅಗಮಿಸಿದ ಯುನಿಪೆಕ್ಸ್ ಇಂಟರ್ ನ್ಯಾಶನಲ್ ದುಬೈ ಇದರ ಚೇರ್ಮ್ಯಾನ್ ಬಹು! ಅಹ್ಮದ್ ಇಬ್ರಾಹೀಮ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ‌ಅಗಮಿಸಿದ ಆಧ್ಯಾತ್ಮಿಕ ನೇತಾರ ಬಹು! ಅಸ್ಸಯ್ಯಿದ್ ವಿ.ಪಿ.ಎ ತಂಙಳ್ ದಾರಿಮಿ ಅಠೀರೀ ಮುಖ್ಯ ಪ್ರಭಾಷಣ‌ ಮಾಡಿ, ದುಆ ನೆರವೇರಿಸಿದರು.

ಕೆ.ಸಿ.ಎಫ್ ಶಾರ್ಜ ಝೋನಿನ ಮೀಲಾದ್ ಸಮಿತಿಯ ಅಧ್ಯಕ್ಷರಾದ ಕಮಾಲುದ್ದೀನ್‌, ಬಿ. ಟಿ. ಅಶ್ರಫ್ ಲತೀಫಿ, ಮುಖ್ಯ ಪ್ರಾಯೋಜಕರಾದ ಫೈಝಲ್ ಪಿ.ಕೆ., ವನಿತಾ ವಿಭಾಗದ ಮುಖ್ಯಸ್ಥೆ, ದಫ್ ತರಬೇತುದಾರ ದಾವೂದ್ ಎನ್ಮೂರ್ ಮತ್ತು ಝೋನ್ ಫೈನಾನ್ಸ್ ಕಂಟ್ರೋಲರ್ ರಝಾಕ್ ಹಾಜಿಯವರ ಮಕ್ಕಳಾದ ಮುಹ್ಯಿದ್ದೀನ್ ಹಾಫಿಳ್ ಮತ್ತು ಅಬೂಬಕರ್ ಅಫ್ಲಾಹ್ ರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಕೆ.ಸಿ.ಎಫ್ ಶಾರ್ಜ ಝೋನಿನ ಅಧ್ಯಕ್ಷರಾದ ಬಹು. ಅಬೂಸ್ವಾಲಿಹ್ ಸಖಾಫಿ, ಫೈಝಲ್ ಪಿ ಕೆ ಅಂಬ್ಲಮೊಗರು, ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು, ರಾಷ್ಟ್ರೀಯ ಮತ್ತು ಝೋನಲ್ ನೇತಾರರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಕೊನೆಯಲ್ಲಿ ಮೀಲಾದ್ ಸಮಿತಿಯ ಜನರಲ್ ಕನ್ವೀನರ್ ಮೂಸ ಹಾಜಿ ಬಸರಾ ಧನ್ಯವಾದ ಕೋರಿದರು.

ವರದಿ:
ತಾಜುದ್ದೀನ್ ಅಮ್ಮುಂಜೆ ಕೆ.ಸಿ.ಎಫ್ ಶಾರ್ಜ ಝೋನ್

error: Content is protected !! Not allowed copy content from janadhvani.com