janadhvani

Kannada Online News Paper

ಅಲ್ ಖಾದಿಸ ಕಾವಳಕಟ್ಟೆಯಲ್ಲಿ unakho-2k18

ಕಾವಳಕಟ್ಟೆ: ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ವಿದ್ಯಾರ್ಥಿ ಪ್ರತಿಭೆಗಳ unakho-2k18 ವಿದ್ಯಾರ್ಥಿ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮಗಳು ಇಂದು ಆರಂಭಗೊಳ್ಳಲಿದೆ.
ಸಂಸ್ಥೆಯ ಶಿಲ್ಪಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ರವರ ಅಧ್ಯಕ್ಷತೆ ವಹಿಸಲಿದ್ದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೌಲಾನಾ SP ಹಂಝ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಪ್ರಾಂಶುಪಾಲರಾದ ಹಾಫಿಲ್ ಸುಫ್ಯಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ನೂರರಷ್ಟು ವಿದ್ಯಾರ್ಥಿಗಳು 146 ವಿವಿಧ ಸ್ಪರ್ಧೆಗಳಲ್ಲಿ ಮೂರು ವಿಭಾಗವಾಗಿ ಸ್ಪರ್ಧಿಸಲಿದ್ದು ಭಾಷಣ ಬರಹಗಳು, ಸೆಮಿನಾರ್, ಚರ್ಚಾಗೋಷ್ಠಿ, ಸೈನ್ಸ್ ಮೋಡೆಲ್ ಹಾಗೂ ಇನ್ನಿತರ ಹಲವು ರೀತಿಯ ವೈವಿದ್ಯಮಯ ಕಾರ್ಯಕ್ರಮಗಳು ಪ್ರತ್ಯೇಕ ಆಕರ್ಷಣೆಯಾಗಲಿದೆ.
Cm ಹನೀಫ್ ಬೆಳ್ಳಾರೆ, ಜುನೈದ್ ಸಖಾಫಿ ಜೀರ್ಮುಖಿ, ಉಬೈದ್ ಸಖಾಫಿ ಅಡ್ಡೂರು, ಸಿನಾನ್ ಸಖಾಫಿ ಕೃಷ್ಣಾಪುರ, ಮುನವ್ವರ್ ಜೋಗಿಬೆಟ್ಟು ಮುಖ್ಯ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com