ಕುಂಬ್ರ : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಕರ್ನಾಟಕ ಇದರ ಸದಸ್ಯತ್ವ ಅಭಿಯಾನದ ಪ್ರಯುಕ್ತ ರಾಜ್ಯದಾದ್ಯಂತ ಎಲ್ಲಾ ಶಾಖೆಗಳಲ್ಲಿ ಏಕಕಾಲದಲ್ಲಿ ನಡೆಯುವ ಸದಸ್ಯತ್ವ ಅಭಿಯಾನದ ಅಂಗವಾಗಿ ಎಸ್ಸೆಸ್ಸಫ್ ಮೈದಾನಿಮೂಲೆ ಶಾಖೆಯಲ್ಲಿ 2.11.2018 ರಂದು ಜುಮಾ ನಮಾಝಿನ ಬಳಿಕ ಎಸ್ಸೆಸ್ಸಫ್ ಕಚೇರಿ ಮುಂಭಾಗದಲ್ಲಿ ವಿಶೇಷವಾಗಿ ನಿರ್ಮಿಸಲಾದ ಮೆಂಬರ್ಶಿಪ್ ಕೌಂಟರ್ ನಲ್ಲಿ ರಫೀಕ್ ಇಮ್ದಾದಿಯವರಿಗೆ ಸದಸ್ಯತನ ಕೂಪನ್ ನೀಡುವುದರ ಮೂಲಕ ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷರಾದ ಯೂಸುಫ್ ಹಾಜಿ ಕೈಕಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೈದಾನಿಮೂಲೆ ಖತೀಬರಾದ ಅಬ್ದುಲ್ ರಝಾಕ್ ಕಾಸಿಮಿ, ಯಂಗ್ ಮೆನ್ಸ್ ಅಧ್ಯಕ್ಷರಾದ ಮುಹಮ್ಮದ್ ಯು.ಕೆ, ಜಮಾಅತ್ ಕಮಿಟಿ ಸದಸ್ಯರು, ಎಸ್ ವೈ ಎಸ್, ಹಾಗೂ ಎಸ್ಸೆಸ್ಸಫ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.