ಬೆಂಗಳೂರು: ಸುನ್ನೀ ಮುಸಲ್ಮಾನರ ಅಧಿಕೃತ ಧ್ವನಿಯಾಗಿರುವ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಉಸ್ತಾದರ ನಿರ್ದೇಶನದಂತೆ ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯ್ಯಃ ವಿಶೇಷ ಕಾರ್ಯಕ್ರಮದ ವಾರ್ಷಿಕ ಸಮ್ಮೇಳನವು ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ತವಕ್ಕಲ್ ಮಸ್ತಾನ್ ದರ್ಗಾ ವಠಾರದಲ್ಲಿ ನವೆಂಬರ್ 2 ರಂದು ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಬಶೀರ್ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಪ್ರಭಾಷಣ ಲೋಕದ ಅಮೃತತಾರೆ ಬಹು.ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಆಗಮಿಸಲಿದ್ದಾರೆ.
ಸಯ್ಯದ್ ಶಿಹಾಬುದ್ದೀನ್ ಅಮಾನಿ ತಂಙ್ಙಳ್ರವರ ನೇತೃತ್ವದಲ್ಲಿ ಇಶಾಅ್ ನಮಾಜ್ ಬಳಿಕ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಂಡು ಮರ್ಖಿನ್ಸ್ ವಿದ್ಯಾರ್ಥಿ ತಂಡಗಳಿಂದ ವಿಶೇಷ ಶೈಲಿಯ ಬುರ್ದಾ ಆಲಾಪನೆಯ ಮೂಲಕ ಮುಂದುವರೆಯಲಿದೆ. ಎಸ್.ಎಂ.ಎ. ಬೆಂಗಳೂರು ಜಿಲ್ಲಾಧ್ಯಕ್ಷ ಎಸ್.ಎಸ್.ಎ.ಖಾದರ್ ಹಾಜಿ ಉದ್ಘಾಟಿಸಿ,ಕರ್ನಾಟಕ ಇಹ್ಸಾನ್ ಚೆಯರ್ಮ್ಯಾನ್ ಎನ್. ಕೆ.ಎಂ. ಶಾಫಿ ಸ ಅದಿ ಪ್ರಾಸ್ತಾವಿಕ ಭಾಷಣಗೈಯ್ಯಲಿದ್ದಾರೆ.ಎಸ್.ವೈ.ಎಸ್. ಜಿಲ್ಲಾ ಕಾರ್ಯದರ್ಶಿ ಮುಜೀಬ್ ಸಖಾಫಿ,ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್.ಜೆ.ಯು. ಜಿಲ್ಲಾಧ್ಯಕ್ಷ ಎನ್.ಎಂ.ಜಲಾಲುದ್ದೀನ್ ಮುಸ್ಲಿಯಾರ್,ಕಾರ್ಯದರ್ಶಿ ಜಾಫರ್ ನೂರಾನಿ,ಎಸ್.ವೈ.ಎಸ್. ರಾಜ್ಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್,ಎಸ್.ಎಂ.ಎ.ಸೆಕ್ರೆಟರಿ ಅಬ್ದುಲ್ ರಹಿಮಾನ್ ಹಾಜಿ,ಎಸ್.ಜೆ.ಎಂ.ಅಧ್ಯಕ್ಷ ಇಬ್ರಾಹಿಂ ಸಖಾಫಿ,ಕಾರ್ಯದರ್ಶಿ ವಹಾಬ್ ಮುಸ್ಲಿಯಾರ್,ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಉಸ್ಮಾನ್ ಶರೀಫ್,ಹೆಟ್.ಟಿ.ಎಂ.ದರ್ಗಾ ಅಧ್ಯಕ್ಷ ನಿಝಾರ್ ಅಹ್ಮದ್,ಕಾರ್ಯದರ್ಶಿ ಮುಹಮ್ಮದ್ ಇನಾಯತುಲ್ಲಾ,ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ತಾಜುದ್ದೀನ್ ಫಾಳಿಲಿ,ಕಾರ್ಯದರ್ಶಿ ಮುನೀರ್ ಹಾಗೂ ಹಲವಾರು ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.